ನಾಲ್ಕು ವರ್ಷದ ಮಗುವೊಂದು ವಿದ್ಯುತ್ ಪ್ರವಹಿಸಿದ (ಹರಿಯುತ್ತಿದ್ದ ) ನೀರಿಗೆ ಬಿದ್ದು ಪ್ರಾಣಾಪಾಯದಿಂದ ಪಾರಾದಾಗ ಘಟನೆ ವಾರಣಾಸಿಯ ಚೆಟ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಹಬೀಬ್‌ಪುರ ಪ್ರದೇಶದಲ್ಲಿ ನಡೆದಿದೆ.
ವಿದ್ಯುತ್ ಪ್ರವಹಿಸಿದ ನೀರಿನಲ್ಲಿ ಮಗು ಸುಮಾರು ಒಂದು ನಿಮಿಷಕ್ಕೂ ಹೆಚ್ಚು ಕಾಲ ಬಿದ್ದು ಹೆಣಗಾಡಿದೆ. ಮಗು ಉಳಿಸಲು ಸ್ಥಳೀಯ ಹಲವರು ಸಹಾಯಕ್ಕೆ ಧಾವಿಸಲು ಯತ್ನಿಸಿದರಾದರೂ ಭಯ ಆವರಿಸಿ ಮಗುವನ್ನು ರಕ್ಷಿಸಲು ನೀರಿಗೆ ಇಳಿಯದೆ ಪರದಾಡಿದರು.
ಈ ಮಧ್ಯ ವ್ಯಕ್ತಿಯೋರ್ವ ಬುದ್ದಿ ಪ್ರಯೋಗಿಸಿ ಒಂದು ಕೋಲಿನ ಸಹಾಯದಿಂದ ಮಗುವನ್ನು ಎಳೆದುಕೊಂಡಿದ್ದಾನೆ. ಇದರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಗು ವಿದ್ಯುತ್ ಪ್ರವಹಿಸಿದ ನೀರಿನಲ್ಲಿ ಬಿದ್ದಿರುವುದನ್ನು ಗಮನಿಸಿದ ವಯಸ್ಸಾದ ವ್ಯಕ್ತಿಯೊಬ್ಬರು ತುರ್ತಾಗಿ ಹತ್ತಿರದ ಮರದ ಕೋಲನ್ನು ತಂದು ಕೈಯಲ್ಲಿ ಹಿಡಿದು ಮಗುವನ್ನು ತಲುಪಿದನು. ಆಶ್ಚರ್ಯ ಏನಪ್ಪ ಅಂದ್ರೆ ಅಪಾಯಕಾರಿ ಸನ್ನಿವೇಶದಲ್ಲಿಯೂ ಮಗು ಪರಿಸ್ಥಿತಿಯನ್ನು ತಿಳಿದುಕೊಂಡು ಹಾಗು ಕೋಲು ಹಿಡಿದುಕೊಂಡಿತು.
ಮೊದಮೊದಲು ಕೊಟ್ಟ ಕೋಲು ಹಿಡಿಯಲು ಜಾರಿದ ಹಿನ್ನಲೆಯಲ್ಲಿ ಮಗು ವಿಫಲವಾಯಿತು, ಆದರೆ ಆಮೇಲೆ ವ್ಯಕ್ತಿ ಪುನಃ ಕೋಲನ್ನು ನೀರಿನಲ್ಲಿ ಇಟ್ಟನು. ಈ ಸಮಯದಲ್ಲಿ ಮಗು ಸುರಕ್ಷಿತವಾಗಿ ಕೋಲನ್ನು ಹಿಡಿದಿದ್ದರಿಂದ ಅವನನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
https://twitter.com/i/status/1706680496015790545