ವಿವೇಕ ವಾರ್ತೆ : ಜಿಲ್ಲೆಯ ನ್ಯಾಮತಿಯಲ್ಲಿ ವಿದ್ಯಾಭ್ಯಾಸದಲ್ಲಿ ಮಗಳು ಸರಿಯಾಗಿ ಗಮನ ಹರಿಸುತ್ತಿಲ್ಲ ಎಂದು ಮನನೊಂದ ತಾಯಿ ಮನೆಯಲ್ಲಿಯೇ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಪಟ್ಟಣದ ನೆಹರೂ ರಸ್ತೆ ನಿವಾಸಿ ಭಾವನಾ (35) ಎಂದು ತಿಳಿದುಬಂದಿದೆ.
ಭಾವನಾ ಅವರ ಮಗಳು ಶಿವಮೊಗ್ಗದ ಅಕ್ಷರ ಶಾಲೆಯಲ್ಲಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಮಗಳ ವಿದ್ಯಾಭ್ಯಾಸದ ಪ್ರಗತಿ ಕುರಿತು ಶಿಕ್ಷಕರನ್ನು ವಿಚಾರಿಸಿದಾಗ ಶಿಕ್ಷಕರು, ಸಾಧಾರಣವಾಗಿ ಓದುತ್ತಿದ್ದಾಳೆ ಎಂದು ತಿಳಿಸಿದ್ದರು.
ಇದರಿಂದ ಬೇಸರಗೊಂಡಿದ್ದ ಭಾವನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅವರ ತಂದೆ, ರಾಣೆಬೆನ್ನೂರು ತಾಲ್ಲೂಕಿನ ಗುಡ್ಡದ ಆನವೇರಿ ಗ್ರಾಮದ ನಿವಾಸಿ ಬಸವರಾಜಪ್ಪ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಿಸಿದ್ದಾರೆ.
ನ್ಯಾಮತಿ ಪಿಎಸ್‌ಐ ಪಿ.ಎಸ್.ರಮೇಶ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.