ವಿವೇಕ ವಾರ್ತೆ : ತನ್ನ ಲವ್ವರ್ ಮೇಲೆ ಕೋಪಗೊಂಡ ಯುವತಿಯೋರ್ವಳು 80 ಅಡಿ ಎತ್ತರದ ಹೈ ಟೆನ್ಷನ್ ವಿದ್ಯುತ್ ಟವರ್ ಹತ್ತಿದ ಘಟನೆ ಛತ್ತೀಸ್‌ಗಢದ ಗೌರೆಲಾ ಪೇಂದ್ರ ಮಾರ್ವಾಹಿ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಇನ್ನೂ ಯುವತಿಯ ಗೆಳೆಯ ಕೂಡ ಆಕೆಯನ್ನು ಹಿಂಬಾಲಿಸಿ ಟವರ್ ಅನ್ನು ಹತ್ತಿದ್ದಾನೆ. ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೆಲ ಸ್ಥಳೀಯರು ಟವರ್ ಮೇಲೆ ಇಬ್ಬರು ಇರುವುದನ್ನು ಗಮನಿಸಿದ ತಕ್ಷಣ ಪೆಂಡ್ರಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಇಬ್ಬರ ಕುಟುಂಬಗಳಿಗೂ ಮಾಹಿತಿ ನೀಡಿದ್ದರು. ಪೊಲೀಸರು ಬರುವಷ್ಟರಲ್ಲಿ ಗ್ರಾಮಸ್ಥರು ಅಲ್ಲಿ ಜಮಾಯಿಸಿದ್ದರು.
ಪೊಲೀಸ್ ಅಧಿಕಾರಿಗಳು ಇಬ್ಬರ ಜೊತೆ ದೀರ್ಘಕಾಲ ಮಾತುಕತೆ ನಡೆಸಿ, ಕೆಳಗೆ ಇಳಿಸಲು ಮನವೊಲಿಸಲು ಪ್ರಯತ್ನಿಸಿದರು. ಅಲ್ಲದೇ ಅವರಿಬ್ಬರನ್ನು ಪೊಲೀಸರು ಯಶಸ್ವಿಯಾಗಿದ್ದಾರೆ.
ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಇಡೀ ಘಟನೆಯ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.
ಯುವತಿ ಟವರ್ ಏರುವ ಕೆಲವೇ ಗಂಟೆಗಳ ಮೊದಲು ತನ್ನ ಗೆಳೆಯನೊಂದಿಗೆ ಕರೆ ಮಾಡಿ ತೀವ್ರ ವಾಗ್ವಾದ ನಡೆಸಿದ್ದಳು. ಕೆಳಗೆ ಬರುವಂತೆ ಮನವೊಲಿಸಲು ಆಕೆಯ ಗೆಳೆಯನೂ ಅವಳನ್ನು ಹಿಂಬಾಲಿಸಿದ. ಬಳಿಕ ಪೊಲೀಸರು ಸಹಾಯದಿಂದ ಇಬ್ಬರೂ ಕೂಡ ಯಾವುದೇ ತೊಂದರೆ ಆಗದೆ ಕೆಳಗಿಳಿದಿದ್ದಾರೆ ಎಂದು ವರದಿಯಾಗಿದೆ.
https://twitter.com/hvgoenka/status/1688157915138633728?ref_src=twsrc%5Etfw%7Ctwcamp%5Etweetembed%7Ctwterm%5E1688157915138633728%7Ctwgr%5E92711fc066f37792bf2356883649b5cffe92d54f%7Ctwcon%5Es1_c10&ref_url=https%3A%2F%2Fapi-news.dailyhunt.in%2F