ವಿವೇಕ ವಾರ್ತೆ : ಕೆಟ್ಟ ಶಾಖದ ಅಲೆ ಗ್ರೀಸ್ ದೇಶಕ್ಕೆ ಎದುರಾಗಿದೆ. ಇದರಿಂದಾಗಿ ಕಾಡ್ಗಿಚ್ಚು ಎಲ್ಲೆಡೆ ಹಬ್ಬಿದೆ.
ಈ ಕಾಡ್ಗಿಚ್ಚನ್ನು ನಂದಿಸಲು ಬಂದಿದ್ದ ಅಗ್ನಿಶಾಮಕ ವಿಮಾನವು ಮರಕ್ಕೆ ಡಿಕ್ಕಿ ಹೊಡದು ಪತನಗೊಂಡು ಇಬ್ಬರು ಪೈಲಟ್ ಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಎವಿಯಾ ದ್ವೀಪದಲ್ಲಿರುವ ಕಾಡಿನಲ್ಲಿ ಬೆಂಕಿ ಹೊತ್ತುಕೊಂಡತ್ತು. ಅದನ್ನು ನಂದಿಸಲು ಗ್ರೀಕ್ ವಾಟರ್ ಬಾಂಬ್ ವಿಮಾನ ಬಂದಿತ್ತು. ಇನ್ನೂ ಬೆಂಕಿಗೆ ನೀರು ಹಾಯಿಸುತ್ತಿರುವಾಗ ವಿಮಾನವು ಮರಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ದೂರ ಪಯಣಿಸಿ ಪತನಗೊಂಡಿದೆ. ತಕ್ಷಣವೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಪೈಲಟ್ಗಳು ಸುಟ್ಟು ಕರಕಲಾಗಿದ್ದಾರೆ.
ಇನ್ನೂ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ಲಾಟಾನಿಸ್ಟೊ ಎಂಬಲ್ಲಿ ವಿಮಾನ ಅಪಘಾತಕ್ಕೀಡಾಗಿದೆ.
ಎವಿಯಾದಲ್ಲಿನ ಬೆಂಕಿಯ ಜ್ವಾಲೆಯ ವಿರುದ್ಧದ ಹೋರಾಟದಲ್ಲಿ ಕನಿಷ್ಠ ಮೂರು ವಿಮಾನಗಳು ಹಾಗೂ 100ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿದ್ದರು ಎಂದು ವರದಿಯಿಂದ ತಿಳಿದುಬಂದಿದೆ.
https://twitter.com/sentdefender/status/1683852633562292224?ref_src=twsrc%5Etfw%7Ctwcamp%5Etweetembed%7Ctwterm%5E1683852633562292224%7Ctwgr%5Ecceb2206b1f03a78a92d20b12ea06f7636aa97f5%7Ctwcon%5Es1_c10&ref_url=https%3A%2F%2Fapi-news.dailyhunt.in%2F