ವಿವೇಕ ವಾರ್ತೆ : ಇತ್ತೀಚೆಗೆ ಸಾವು ಯಾವಾಗ.? ಯಾರಿಗೆ.? ಹೇಗೆ ಬರುತ್ತೆ ಅಂತ ಹೇಳೋಕೆ ಆಗಲ್ಲ. ಅದರಂತೆ ಸಾವನ್ನು ಗೆದ್ದು ಬಂದ ಉದಾಹರಣೆಗಳು ನಮ್ಮಲ್ಲಿವೆ.
ಈಗೇಕೆ ಈ ಮಾತು ಹೇಳತ್ತಿದ್ದಿವೆ ಅಂದ್ರೆ, ಗುಜರಾತ್ನಲ್ಲಿ ಫೋನ್‌ನಲ್ಲಿ ಮಾತಾಡ್ತಿದ್ದ ಕೇವಲ 23 ವರ್ಷದ ಯುವಕ ಜೀವ ಇದ್ದಕ್ಕಿದಂತೆಯೇ ನಿಂತೋಗಿದೆ.
ಈ ಘಟನೆ ಗುಜರಾತ್ ನವಸಾರಿಯಲ್ಲಿ ನಡೆದಿದ್ದು, ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದೃಶ್ಯದಲ್ಲಿ ಯುವಕನೊಬ್ಬ ಫೋನ್‌ನಲ್ಲಿ ಮಾತನಾಡುತ್ತಿರುವಾಗ ಹೃದಯಾಘಾತಕ್ಕೆ ಒಳಪಟ್ಟು ಕುಸಿದು ಬಿದ್ದು ಸಾವನಪ್ಪಿದ್ದಾನೆ.
ಹೀಗೆ ಸಾವನ್ನಪ್ಪಿದ ಯುವಕನನ್ನು ರತ್ನಾಭರಣ ಕಲಾಕಾರ ಪ್ರಕಾಶ್ ಎಂದು ಗುರುತಿಸಲಾಗಿದೆ. ರತ್ನಾ ಕಲಾಕರ್ ಏಕಾಏಕಿ ಹೃದಯಾಘಾತವಾಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಕಂಡಂತೆ ಇಯರ್ ಬಡ್ಸ್ ಕಿವಿಗೆ ಹಾಕಿ, ಕಿಟಕಿ ಪಕ್ಕ ಓಡಾಡುತ್ತಾ ಮಾತನಾಡುವಾಗ ಹೃದಯಾಘಾತವಾಗಿ ನೆಲಕ್ಕೆ ಬಿದ್ದಿದ್ದಾನೆ.
ತಕ್ಷಣ ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿತಾದ್ರು, ಚಿಕಿತ್ಸೆ ಫಲಕಾರಿಯಾಗದೆ ಪ್ರಕಾಶ್ ಸಾವನ್ನಪ್ಪಿದ್ದಾನೆ.
https://twitter.com/sanjay_desai_26/status/1693215601572134963?t=82NVz5JuSU8y1Dczyie7PA&s=19