ವಿವೇಕ ವಾರ್ತೆ : ಜಿ20 ಡಿಜಿಟಲ್ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ಜರ್ಮನಿಯ ಸಚಿವ ವೋಲ್ಕರ್ ವಿಸ್ಸಿಂಗ್ ಬೆಂಗಳೂರಿಗೆ ಬಂದಿದ್ದಾರೆ.
ಈ ವೇಳೆ ಬೆಂಗಳೂರಿನ ತರಕಾರಿ ಅಂಗಡಿಯೊಂದರಲ್ಲಿ ತಾವು ಯುಪಿಐ ಅನ್ನು ಬಳಸುತ್ತಿರುವ ವಿಡಿಯೋವೊಂದನ್ನು X (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ.
ಭಾರತದ ಯಶಸ್ಸಿನ ಕಥೆಯೆಂದರೆ ಡಿಜಿಟಲ್ ಪೇಮೆಂಟ್ ಮೂಲಕ ಪ್ರತಿಯೊಬ್ಬರನ್ನು ಸೆಕೆಂಡುಗಳಲ್ಲಿ ವಹಿವಾಟು ಮಾಡಲು ಅನುವು ಮಾಡಿಕೊಡುತ್ತದೆ.
ಲಕ್ಷಾಂತರ ಭಾರತೀಯರು ಇದನ್ನು ಬಳಸುತ್ತಾರೆ ಎಂದು ರಾಯಭಾರ ಕಚೇರಿ X (ಟ್ವಿಟರ್) ನಲ್ಲಿ ಹೇಳಿದೆ. ಅಲ್ಲದೆ ಜರ್ಮನಿಯ ಸಚಿವರು UPI ಬಳಸಿ ತರಕಾರಿಗಳನ್ನು ಖರೀದಿಸುತ್ತಿರುವುದನ್ನು ವೀಡಿಯೊ ತೋರಿಸಿದೆ.
ಭಾರತದಲ್ಲಿರುವ ಜರ್ಮನ್ ರಾಯಭಾರ ಕಚೇರಿ ದೇಶದ ಡಿಜಿಟಲ್ ಮೂಲಸೌಕರ್ಯ ವ್ಯವಸ್ಥೆಯನ್ನು ಅಗಾಧವಾಗಿ ಶ್ಲಾಘನೆ ಮಾಡಿದೆ. ಇದು ದೇಶದ ಅತಿದೊಡ್ಡ ಯಶಸ್ಸಿನ ಕಥೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದೆ.
https://twitter.com/GermanyinIndia/status/1693162556918210966?ref_src=twsrc%5Etfw%7Ctwcamp%5Etweetembed%7Ctwterm%5E1693162556918210966%7Ctwgr%5E3c655ccfc4a465b681840c4b27fcf7f251d56ef3%7Ctwcon%5Es1_c10&ref_url=https%3A%2F%2Fapi-news.dailyhunt.in%2F