ವಿವೇಕ ವಾರ್ತೆ : ಭಾರತೀಯ ಬುಡಕಟ್ಟು ಜನಾಂಗವೊಂದರಲ್ಲಿ ಲೈವ್ ಇನ್ ರಿಲೇಶನ್‌ಶಿಪ್ ನಂತೆಯೇ ಆಚರಣೆಯೊಂದಿದೆ. ಅಷ್ಟೇ ಅಲ್ಲ ಇಲ್ಲಿ ಮಹಿಳೆಯರು ಮದುವೆಗೂ ಮುಂಚೆ ತಾಯಂದಿರಾಗುತ್ತಾರೆ ಅಂತೆ. ಇದು ಇಲ್ಲಿನ ಸಂಪ್ರದಾಯ.
ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ವಾಸಿಸುವ ಗರಾಸಿಯಾ ಬುಡಕಟ್ಟು ಜನಾಂಗದವರು ಇಂತಹ ಸಂಪ್ರದಾಯವನ್ನು ಪಾಲಿಸುತ್ತಾರೆ. ಈ ಬುಡಕಟ್ಟಿನಲ್ಲಿ, ಪುರುಷರು ಮತ್ತು ಮಹಿಳೆಯರು ಮದುವೆಯಾಗದೆ ಒಟ್ಟಿಗೆ ವಾಸಿಸುತ್ತಾರೆ. ಅಲ್ಲದೆ ಮಹಿಳೆಯರು ಮದುವೆಗೂ ಮುನ್ನವೇ ತಾಯಿಯಾಗುತ್ತಾರೆ. ತಮ್ಮ ಇಚ್ಛೆಯಂತೆ ಗಂಡಸರನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಮಹಿಳೆಯರಿಗೆ ಇದೆ.
ಇಲ್ಲಿ ಎರಡು ದಿನಗಳ ಸುದೀರ್ಘ ಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲಿ ಹುಡುಗ ಅಥವಾ ಹುಡುಗಿ ಯಾರನ್ನಾದರೂ ಇಷ್ಟ ಪಟ್ಟರೆ ಆ ವ್ಯಕ್ತಿಯ ಜೊತೆ ಜಾತ್ರೆಯಿಂದ ಓಡಿ ಹೋಗುತ್ತಾರಂತೆ. ನಂತರ ಅವರು ಮದುವೆಯಾಗದೆ ಒಟ್ಟಿಗೆ ಜೀವನ ನಡೆಸುತ್ತಾರೆ. ಈ ಸಮಯದಲ್ಲಿ, ಅವರು ತಮ್ಮ ಇಚ್ಛೆಯಂತೆ ಮಗುವನ್ನು ಸಹ ಪಡೆಯಬಹುದು. ನಂತರ ಅವರು ತಮ್ಮ ಹಳ್ಳಿಗೆ ಹಿಂತಿರುಗುತ್ತಾರೆ. ಅಲ್ಲಿ ಅವರ ಪೋಷಕರು ಬಹಳ ಆಡಂಬರ ಮತ್ತು ಪ್ರದರ್ಶನದಿಂದ ಅವರಿಗೆ ಮದುವೆ ಮಾಡುತ್ತಾರೆ.
ಹಿಂದಿನ ಕಾಲದಲ್ಲಿ ಈ ಬುಡಕಟ್ಟಿನ ನಾಲ್ಕು ಸಹೋದರರು ಬೇರೆಡೆಗೆ ಹೋಗಿ ವಾಸಿಸಲು ಪ್ರಾರಂಭಿಸಿದರು ಎಂದು ನಂಬಲಾಗಿದೆ. ಇವರಲ್ಲಿ 3 ಮಂದಿ ಭಾರತೀಯ ಪದ್ಧತಿಯಂತೆ ಮದುವೆಯಾದರು. ಆದರೆ ಒಬ್ಬ ಸಹೋದರ ಮದುವೆಯಾಗದೆ ಹುಡುಗಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿ ವಾಸಿಸಲು ಪ್ರಾರಂಭಿಸಿದನು. ಆ ಮೂವರು ಸಹೋದರರಿಗೆ ಮಕ್ಕಳಿರಲಿಲ್ಲ ಆದರೆ ನಾಲ್ಕನೆಯ ಸಹೋದರನಿಗೆ ಮಗುವಾಗಿತ್ತು.
ಅಂದಿನಿಂದ ಇಲ್ಲಿ ಲಿವ್ ಇನ್ ಸಂಪ್ರದಾಯ ಆರಂಭವಾಗಿದೆ. ವರದಿಗಳ ಪ್ರಕಾರ, ಗರಾಸಿಯಾ ಮಹಿಳೆಯರು ಬಯಸಿದರೆ, ಅವರಿಗೆ ಮೊದಲೇ ಮದುವೆ ಆಗಿದ್ದರೂ ಸಹ ಮತ್ತೊಮ್ಮೆ ಜಾತ್ರೆಯಲ್ಲಿ ಇನ್ನೊಬ್ಬರು ಇಷ್ಟವಾದರೆ ಅವರೊಂದಿಗೆ ಸಂಬಂಧವನ್ನು ಬೆಳೆಸಬಹುದು. ಇಲ್ಲಿ ಇದು ಲೀಗಲ್ ಕಣ್ರೀ.