ವಿವೇಕವಾರ್ತೆ : ಮನುಷ್ಯನಿಗೆ ಒಂದು ದೊಡ್ಡ ಶಕ್ತಿ ಎಂದರೆ ಅದು ಮಾತು. ಮನಸ್ಸಿನಲ್ಲಿರುವ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಒಂದು ಸಾಧನವೇ ಮಾತು ಎನ್ನಬಹುದು. ಕೆಲವೊಂದು ಸಲ ಕೆಲವರಿಗೆ ನೋವು ಆದಾಗ ತಮ್ಮ ಇಷ್ಟದವರ ಜೊತೆ ಮಾತನಾಡಿದರೆ ಮಾತ್ರ ಮನಸ್ಸು ಹಗುರವಾಗುತ್ತದೆ.
ಹಾಗೆಯೇ ಕೆಲವರಿಗೆ ಮೌನವಾಗಿದ್ದರೆ ಮಾತ್ರ ಅವರು ನೋವಿನಿಂದ ಹೊರ ಬರುತ್ತಾರೆ. ಹಾಗಾಗಿ ಮೌನಕ್ಕೂ ಕೂಡ ಅದರದ್ದೇ ಆದ ಶಕ್ತಿ ಇದೆ.
ಮೊದಲು ನಾವು ಎಲ್ಲಿ ಮಾತನಾಡಬೇಕು ಎನ್ನುವುದನ್ನು ತಿಳಿದುಕೊಂಡಿರುವುದು ಅತ್ಯಗತ್ಯ. ಹಾಗೆಯೇ ಎಲ್ಲಿ ಮಾತನಾಡಬಾರದು ಮೌನವಾಗಿ ಇರಬೇಕು ಎನ್ನುವುದರ ಜ್ಞಾನ ಸಹ ಇರಬೇಕು.
ಕೆಲವೊಮ್ಮೆ ಅತಿ ಕಡಿಮೆ ಮಾತನಾಡಿದರೆ ಮಾತ್ರ ವ್ಯಕ್ತಿಗೆ ಬೆಲೆ ಸಿಗುತ್ತದೆ. ಮಾತನಾಡುವ ಸ್ಥಳದಲ್ಲಿ ಮೌನವಾಗಿ ಇದ್ದರೆ ಅದು ಬಹಳ ಕಷ್ಟಕಷ್ಟ.
ಹಾಗಿದ್ರೆ ಒಂದು ಗಂಟೆ ಮೌನವಾಗಿದ್ದರೆ ಏನಾಗಬಹುದು..?
* ಶಾಂತವಾಗಿರುವುದರಿಂದ ಬಿಪಿಯಂತಹ ಸಮಸ್ಯೆಗಳ ಅಪಾಯ ಕಡಿಮೆಯಾಗುವುದು. ಬಿಪಿ ನಿಯಂತ್ರಣಕ್ಕೆ ಬರುತ್ತದೆ.
* ಇದು ಹೃದಯಾಘಾತದಂತಹ ಹೃದಯ ಸಮಸ್ಯೆಗಳನ್ನು ತಡೆಯುತ್ತದೆ.
* ಒಂದು ಗಂಟೆ ಯಾವುದರ ಬಗ್ಗೆಯೂ ಯೋಚಿಸದೆ ಶಾಂತವಾಗಿ ಇದ್ದರೆ ಒತ್ತಡ, ಆತಂಕ, ಖಿನ್ನತೆ, ಭಯ ಇತ್ಯಾದಿಗಳಿಂದ ಮುಕ್ತಿ ಪಡೆಯಬಹುದು.
* ಶಾಂತವಾಗಿರುವುದು ಒತ್ತಡದ ಹಾರ್ಮೋನುಗಳ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.
* ಮೌನವಾಗಿರುವುದರಿಂದ ನಮ್ಮ ಹೃದಯವು ಆರೋಗ್ಯಕರವಾಗಿ ಕಾರ್ಯನಿರ್ವಹಿಸುತ್ತದೆ. ರಕ್ತ ಸಂಚಾರವೂ ಉತ್ತಮವಾಗಿರುತ್ತದೆ.
* ಮೌನವಾಗಿರುವುದು ಸೃಜನಶೀಲ ಚಿಂತನೆಗಳನ್ನು ಹೆಚ್ಚಿಸುತ್ತದೆ. ಕಲಾವಿದರು ಮತ್ತು ಬರಹಗಾರರು ಸಾಧ್ಯವಾದಷ್ಟು ಶಾಂತವಾಗಿರುತ್ತಾರೆ.
* ಮೌನವಾಗಿರುವುದು ಸಂವಹನ ಕೌಶಲ್ಯವನ್ನು ಸುಧಾರಿಸುತ್ತದೆ.
* ಮೌನವಾಗಿರುವುದರಿಂದ ಒಳ್ಳೆಯ ನಿದ್ರೆ ಮಾಡಿ ಮನಸ್ಸಿಗೆ ನೆಮ್ಮದಿ ಪಡೆಯಬಹುದು.
* ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
* ಇತರ ಸಮಸ್ಯೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.