ವಿವೇಕ ವಾರ್ತೆ : ತುಮಕೂರು KPTCL ಚೀಫ್ ಎಂಜಿನಿಯರ್’ವೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
KPTCL ಚೀಫ್ ಎಂಜಿನಿಯರ್ ನಾಗರಾಜನ್ ಅವರನ್ನು ಲೋಕಾಯುಕ್ತ ಟ್ರಾಪ್ ಮಾಡಿದ್ದಾರೆ.
CE ನಾಗರಾಜನ್ ಪವರ್ ಲೈನ್ ಎಳೆಯಲು ಅನುಮತಿಗಾಗಿ ಕಂಟ್ರಾಕ್ಟರ್ ಗೆ 1 ಲಕ್ಷ ಲಂಚ ಬೇಡಿಕೆ ಇಟ್ಟಿದ್ದನು ಎಂಬ ಮಾಹಿತಿ ಲಭ್ಯವಾಗಿದೆ.
ಅಂತೆಯೇ ಆಗಸ್ಟ್ 4 ರಂದು 50 ಸಾವಿರ ರೂ. ಪಡೆದಿದ್ದ. ಮತ್ತೆ 50 ಸಾವಿರ ಲಂಚ ಪಡೆಯುವಾಗ ತುಮಕೂರಿನ ಬಿ. ಎಚ್. ರಸ್ತೆಯ KPTCL ಕಛೇರಿಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ತುಮಕೂರು ಲೋಕಾಯುಕ್ತ ಎಸ್ಪಿ ಬಾಷಾ ನೇತೃತ್ವದಲ್ಲಿ ಟ್ರಾಪ್ ಮಾಡಿದ್ದು, ಆರೋಪಿ ಚೀಫ್ ಎಂಜಿನಿಯರ್ ನಾಗರಾಜನ್ ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಈ ಕುರಿತು ತುಮಕೂರು ಲೋಕಾಯುಕ್ತ ಕಛೇರಿಯಲ್ಲಿ ಪ್ರಕರಣ ದಾಖಲಾಗಿದೆ.