ವಿವೇಕವಾರ್ತೆ : ಖ್ಯಾತ ಮಲಯಾಳಂ ಹಾಸ್ಯನಟರೋರ್ವನನ್ನು ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿಯಲ್ಲಿ ಪೊಲೀಸರು ಬಂಧಿಸಿರುವ ಕುರಿತು ವರದಿಯೊಂದು ಬಂದಿದೆ.
ಬಿನು ಬಿ ಕಮಲ್ ಎಂಬ ಖ್ಯಾತ ಮಲಯಾಳಂ ಹಾಸ್ಯನಟನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
21 ವರ್ಷದ ಮಹಿಳೆಯೋರ್ವರು ಕೆ.ಎಸ್.ಆರ್.ಟಿ.ಸಿ ಬಸ್’ನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನೀಡಿದ ದೂರಿನಂತೆ ನಟನನ್ನು ವಟ್ಟಪಾರಾ ಪೊಲೀಸರು ಬಂಧಿಸಿದ್ದಾರೆ.
ತಂಪನೂರ್ ಮತ್ತು ನೀಲಮೇಳ ನಡುವೆ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್’ನಲ್ಲಿ ಸಂತ್ರಸ್ತೆಯ ಪಕ್ಕದಲ್ಲಿ ಕುಳಿತ ನಟ ಬಿನು ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವೇಳೆ ಮಹಿಳೆ ಗಲಾಟೆ ಮಾಡಿದ ಹಿನ್ನೆಲೆಯಲ್ಲಿ ವಟ್ಟಪಾರಾ ಜಂಕ್ಷನ್’ನಲ್ಲಿ ಬಸ್ ನಿಂತಿದೆ. ಬಸ್ ನಿಲ್ಲುತ್ತಿದಂತೆಯೇ ಬಿನು ಸ್ಥಳದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ ಎಂದು ಹೇಳಲಾಗಿದೆ.
ನಟನನ್ನು ಹಿಡಿಯಲು ಪ್ರಯಾಣಿಕರು ಮತ್ತು ಸ್ಥಳೀಯರು ಬೆನ್ನಟ್ಟಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಖ್ಯಾತ ನಟ-ಹಾಸ್ಯನಟ ಬಿನು ಬಿ ಕಮಲ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.