Saturday, September 30, 2023

‘ರೇಷನ್ ಕಾರ್ಡ್’ ಇಲ್ಲದವರು ‘ಗೃಹಲಕ್ಷ್ಮಿ’ಗೆ ಅರ್ಜಿ ಸಲ್ಲಿಸಲು ಏನು ಮಾಡಬೇಕು.? ಇಲ್ಲಿದೆ ಮಾಹಿತಿ

ವಿವೇಕವಾರ್ತೆ : ರಾಜ್ಯ ಸರ್ಕಾರದ 4 ನೇ ಗ್ಯಾರಂಟಿ ಮನೆಯ ಯಜಮಾನಿಗೆ 2,000 ರೂ. ಮಾಸಾಶನ ನೀಡುವ ಗೃಹಲಕ್ಷ್ಮೀ ಯೋಜನೆ ಉದ್ಘಾಟನೆ ದಿನಾಂಕ ಮತ್ತೆ ಮುಂದೂಡಿಕೆಯಾಗಿದ್ದು, ಆಗಸ್ಟ್ 29 ಅಥವಾ ಆ.30ಕ್ಕೆ ಚಾಲನೆ ನೀಡುತ್ತೇವೆ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ರೇಷನ್ ಕಾರ್ಡ್ ಇಲ್ಲದವರು ‘ಗೃಹಲಕ್ಷ್ಮಿ’ ಯೋಜನೆಗೆ ಅರ್ಜಿ ಸಲ್ಲಿಸಲು ಏನು ಮಾಡಬೇಕು.?

ಇಲ್ಲಿದೆ ಮಾಹಿತಿ.ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದು, ಯಾವುದೇ ಫಲಾನುಭವಿಗಳು ಬೇಸರಗೊಳ್ಳುವ ಅಗತ್ಯ ಇಲ್ಲ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಕಡೆ ದಿನಾಂಕ ಇಲ್ಲ, ಇದು ನಿರಂತರ ಪ್ರಕ್ರಿಯೆ ಆಗಿರುವುದರಿಂದ ಯಾರೆಲ್ಲಾ ರೇಷನ್ ಕಾರ್ಡ್ ಹೊಂದಿಲ್ಲ ಅಥವಾ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ, ಮಿಸ್ಟೇಕ್ ಇರುವ ಕಾರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲಾಗುತ್ತಿಲ್ಲ ಅವರೆಲ್ಲ ಇದನ್ನು ಸರಿಪಡಿಸಿಕೊಂಡ ನಂತರ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ. ರೇಷನ್ ಕಾರ್ಡ್’ ಇಲ್ಲದವರು ಹೊಸದಾಗಿ ಮಾಡಿಸಿಕೊಂಡು ಅರ್ಜಿ ಸಲ್ಲಿಸಿ ಎಂದರು.

ಅದೇ ರೀತಿ ರಾಜ್ಯ ಸರ್ಕಾರವು ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ ಮಾಡಲು ಅನುಮೋದನೆ ನೀಡಿದೆ. ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರವು, ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಮಾಹಿತಿಯ ತಿದ್ದುಪಡಿ ಹಾಗೂ ಹೆಚ್ಚುವರಿಗೆ ಫಲಾನುಭವಿಗಳ ಹೆಸರನ್ನು ಸೇರ್ಪಡೆ ಮಾಡಲು ಅನುಮೋದನೆಯನ್ನು ನೀಡಲಾಗಿದೆ. ಮುಂದುವರೆದು ಮುಂದಿನ ಆದೇಶದವರೆಗೆ ಯಾವುದೇ ಹೊಸ ಪಡಿತರ ಚೀಟಿಯನ್ನು ಮಂಜೂರು ಮಾಡದಂತೆ ನಿರ್ದೇಶಿಸಿದೆ.

ಬಿಪಿಎಲ್ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿರುವವರಿಗೆ ಕಾರ್ಡ್ಗಳನ್ನು ಆದಷ್ಟು ಬೇಗ ನೀಡುವ ಪ್ರಕ್ರಿಯೆಯನ್ನು ಸರ್ಕಾರ ನಡೆಸಲಿದೆ. ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಕಾರ್ಡ್ ವಿತರಿಸಲಾಗುವುದು’ ಎಂದು ಸಚಿವ ಕೆ.ಎಚ್ ಮುನಿಯಪ್ಪ ಹೇಳಿದ್ದರು. ಆದರೆ ಇದೀಗ ಮುಂದಿನ ಆದೇಶದವರೆಗೆ ಯಾವುದೇ ಹೊಸ ಪಡಿತರ ಚೀಟಿಯನ್ನು ಮಂಜೂರು ಮಾಡದಂತೆ ನಿರ್ದೇಶಿಸಿದೆ.

RELATED ARTICLES

ಶಾಲೆಯಲ್ಲೇ ಶಿಕ್ಷಕಿಯರ ರೀಲ್ಸ್ : ಲೈಕ್, ಶೇರ್ ಮಾಡುವಂತೆ ವಿದ್ಯಾರ್ಥಿಗಳಿಗೆ ಒತ್ತಡ.!

ವಿವೇಕವಾರ್ತೆ : ಶಿಕ್ಷಕಿಯರು, ವಿದ್ಯಾರ್ಥಿಗಳಿಗೆ ಪಾಠ ಮಾಡುವ ಬದಲು ಶಾಲೆಗಳಲ್ಲಿ ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ, ವಿದ್ಯಾರ್ಥಿಗಳಿಗೆ ತಮ್ಮ ಚಾನೆಲ್ ಗೆ Subscribers ಆಗಿ ತಮ್ಮ ವಿಡಿಯೋಗಳನ್ನು ಇತರರಿಗೆ...

ಅನುಮಾನಾಸ್ಪದ ರೀತಿ ಸಾವನ್ನಪ್ಪಿದ ಸರ್ಕಾರಿ ಆಸ್ಪತ್ರೆಯ ಅರವಳಿಕೆ ತಜ್ಞ ವೈದ್ಯೆ.!

ವಿವೇಕವಾರ್ತೆ : ಕೊಳ್ಳೆಗಾಲ ನಗರದ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯಯೊಬ್ಬರು ಅನುಮಾನಸ್ಪದವಾಗಿ ಸಾವನಪ್ಪಿದ ಘಟನೆ ಇಂದು (ಸೆ.29) ನಡೆದಿದೆ. ಕೊಳ್ಳೆಗಾಲ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಡಾI ಸಿಂದುಜಾ (28)...

ರೀಲ್ಸ್ ಮಾಡಿ ಟ್ರೋಲ್ ಆದ ಮಹಿಳಾ ಪೊಲೀಸ್ ; ವಿಡಿಯೋ ವೈರಲ್.!

ವಿವೇಕವಾರ್ತೆ : ಮಹಿಳೆ ಪೊಲೀಸ್​​​ ರೀಲ್ಸ್​​ ಮಾಡಲು ಹೋಗಿ ಇಲಾಖೆಯ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಲಾದ ಘಟನೆಯೊಂದು ಪಂಜಾಬನಲ್ಲಿ ನಡೆದಿದೆ. ಪೊಲೀಸರು ರೀಲ್ಸ್​​ ಮಾಡಬಾರದು ಎಂದು ಇಲ್ಲಾ, ಆದರೆ ಅವರು ಸಮಾಜದ ಒಳಿತನ್ನು ಕಾಪಾಡುವ...
- Advertisment -

Most Popular

ಶಾಲೆಯಲ್ಲೇ ಶಿಕ್ಷಕಿಯರ ರೀಲ್ಸ್ : ಲೈಕ್, ಶೇರ್ ಮಾಡುವಂತೆ ವಿದ್ಯಾರ್ಥಿಗಳಿಗೆ ಒತ್ತಡ.!

ವಿವೇಕವಾರ್ತೆ : ಶಿಕ್ಷಕಿಯರು, ವಿದ್ಯಾರ್ಥಿಗಳಿಗೆ ಪಾಠ ಮಾಡುವ ಬದಲು ಶಾಲೆಗಳಲ್ಲಿ ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ, ವಿದ್ಯಾರ್ಥಿಗಳಿಗೆ ತಮ್ಮ ಚಾನೆಲ್ ಗೆ Subscribers ಆಗಿ ತಮ್ಮ ವಿಡಿಯೋಗಳನ್ನು ಇತರರಿಗೆ...

ಲೋಕಸಭೆ ಬಿಜೆಪಿ ಟಿಕೆಟ್ ಸಿಗುವ ಭರವಸೆ ಇದೆ – ರಮೇಶ್ ಕತ್ತಿ

ವಿವೇಕವಾರ್ತೆ : ಈ ಬಾರಿ ಲೋಕಸಭೆ ಚುನಾವಣೆಗೆ ತಮಗೆ ಟಿಕೆಟ್ ನೀಡುವ ಭರವಸೆ ಇದೆ ಎಂದು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಸಂಸದ ರಮೇಶ್ ಕತ್ತಿ ಹೇಳಿದ್ದಾರೆ. ಅವರು ಇಂದು ಚಿಕ್ಕೋಡಿಯ ನಂದಗಾಂವ ಗ್ರಾಮದಲ್ಲಿ...

ಅನುಮಾನಾಸ್ಪದ ರೀತಿ ಸಾವನ್ನಪ್ಪಿದ ಸರ್ಕಾರಿ ಆಸ್ಪತ್ರೆಯ ಅರವಳಿಕೆ ತಜ್ಞ ವೈದ್ಯೆ.!

ವಿವೇಕವಾರ್ತೆ : ಕೊಳ್ಳೆಗಾಲ ನಗರದ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯಯೊಬ್ಬರು ಅನುಮಾನಸ್ಪದವಾಗಿ ಸಾವನಪ್ಪಿದ ಘಟನೆ ಇಂದು (ಸೆ.29) ನಡೆದಿದೆ. ಕೊಳ್ಳೆಗಾಲ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಡಾI ಸಿಂದುಜಾ (28)...

ರೀಲ್ಸ್ ಮಾಡಿ ಟ್ರೋಲ್ ಆದ ಮಹಿಳಾ ಪೊಲೀಸ್ ; ವಿಡಿಯೋ ವೈರಲ್.!

ವಿವೇಕವಾರ್ತೆ : ಮಹಿಳೆ ಪೊಲೀಸ್​​​ ರೀಲ್ಸ್​​ ಮಾಡಲು ಹೋಗಿ ಇಲಾಖೆಯ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಲಾದ ಘಟನೆಯೊಂದು ಪಂಜಾಬನಲ್ಲಿ ನಡೆದಿದೆ. ಪೊಲೀಸರು ರೀಲ್ಸ್​​ ಮಾಡಬಾರದು ಎಂದು ಇಲ್ಲಾ, ಆದರೆ ಅವರು ಸಮಾಜದ ಒಳಿತನ್ನು ಕಾಪಾಡುವ...
error: Content is protected !!