ವಿವೇಕವಾರ್ತೆ : ನಿನ್ನೆ (ಗುರುವಾರ, 17 ಆಗಸ್ಟ್ 2023) ರಾಜ್ಯದ 48 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಮೆಗಾ ರೇಡ್ ನಡೆದಿದೆ. ರಾಜ್ಯಾದ್ಯಂತ ಸುಮಾರು 200 ಅಧಿಕಾರಿಗಳಿಂದ ನಡೆಸಿದ ದಾಳಿಯಲ್ಲಿ ಕಳ್ಳ ಕುಬೇರರ ಮನೆಯಲ್ಲಿ ಬಚ್ಚಿಟ್ಟಿದ್ದ ಕೋಟಿ, ಕೋಟಿ ಆಸ್ತಿಯನ್ನು ಸೀಜ್ ಮಾಡಲಾಗಿದೆ.
ಆದರೆ, ಇಲ್ಲೊಬ್ಬ ಜಿಲ್ಲಾ ಪಂಚಾಯತ್ ಅಧಿಕಾರಿ ರೇಡ್‌ಗೆ ಬಂದ ಲೋಕಾ ಅಧಿಕಾರಿಗಳಿಗೆ ಆಟವಾಡಿಸಿದ ಘಟನೆಯೂ ನಡೆದಿದೆ.
ಹೌದು, ತುಮಕೂರಿನ ಆದರ್ಶ ನಗರದಲ್ಲಿರುವ ಜಿಲ್ಲಾ ಪಂಚಾಯತ್ ಅಧಿಕಾರಿಯೊಬ್ಬ ರೇಡ್ ಮಾಡಲು ಬಂದಿದ್ದ ಲೋಕಾಯುಕ್ತ ಅಧಿಕಾರಿಗಳಿಗೆ ಮನೆ ಬೀಗ ತೆಗೆಯದೆ ಆಟ ಆಡಿಸಿದ್ದಾನೆ. ತುಮಕೂರು ಜಿಲ್ಲಾ ಪಂಚಾಯ್ತಿಯ ಸಾರ್ವಜನಿಕ ಕುಂದು ಕೊರತೆ ನಿವಾರಣಾ ಪ್ರಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬೂವನಹಳ್ಳಿ ನಾಗರಾಜ್ ಎಂಬಾತನೆ ಲೋಕಾಯುಕ್ತ ಅಧಿಕಾರಿಗಳಿಗೆ ಸರಿಯಾಗಿ ಸಹಕರಿಸದ ಅಧಿಕಾರಿ.
ಹೌದು, ನಿನ್ನೆ ರಾಜ್ಯಾದ್ಯಂತ ಒಟ್ಟು 48 ಕಡೆ ರೇಡ್ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ತುಮಕೂರಿನ ಆದರ್ಶ ನಗರದಲ್ಲಿರುವ ತುಮಕೂರು ಜಿಲ್ಲಾ ಪಂಚಾಯ್ತಿಯ ಸಾರ್ವಜನಿಕ ಕುಂದು ಕೊರತೆ ನಿವಾರಣಾ ಪ್ರಾಧಿಕಾರಿ ಬೂವನಹಳ್ಳಿ ನಾಗರಾಜ್ ಎಂಬುವರ ಮನೆ ಮೇಲೂ ದಾಳಿ ನಡೆಸಲು ಮುಂದಾಗಿತ್ತು. ಬೆಳ್ಳಂಬೆಳಗ್ಗೆ ಲೋಕಾಯುಕ್ತದ 10 ಅಧಿಕಾರಿಗಳ ತಂಡ ಈತನ ಮನೆ ಕದ ತಟ್ಟಿತ್ತು. ಬೆಳಗ್ಗೆ 6 ಗಂಟೆಯಿಂದ ಮನೆಯ ಗೇಟ್ ಬಳಿ ಕಾದು ಕಾದು ಅಧಿಕಾರಿಗಳು ಹೈರಾಣಾದರು. ಆದರೆ, ಲೋಕಾಯುಕ್ತ ಅಧಿಕಾರಿಗಳ ಸಂಪರ್ಕಕ್ಕೆ ಸಿಗದೇ ಬೂವನಹಳ್ಳಿ ನಾಗರಾಜು ನಾಪತ್ತೆಯಾಗಿದ್ದಾರೆ.
ಇನ್ನೂ ತುಮಕೂರಿನ ಆದರ್ಶ ನಗರದಲ್ಲಿರುವ ಬೃಹತ್ ಬಂಗಲೆ ಬಳಿ ಬೆಳಗ್ಗೆ 6 ಗಂಟೆಯಿಂದ ಮನೆಯ ಗೇಟ್ ಬಳಿ ಕಾದು ಕಾದು ಬೇಸತ್ತ ಬೆಂಗಳೂರು ಲೋಕಾಯುಕ್ತ ಎಸ್.ಪಿ ಅಶೋಕ್ ನೇತೃತ್ವದ ತಂಡ, ದಾಳಿಗೆ ಸಹಕಾರ ನೀಡದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಯ ಐಷಾರಾಮಿ ಬಂಗಲೆಗೆ ಬೀಗ ಜಡಿದು ಸೀಜ್ ಮಾಡಿದ್ದಾರೆ.
ಕೃಪೆ – ಜೀ ನ್ಯೂಸ್ ಕನ್ನಡ