ಯುವತಿ ಜೊತೆ ಖುಲಂಖುಲ್ಲಾ ವಿಡಿಯೋ ಕಾಲ್..! 21 ಲಕ್ಷ ಕಳೆದುಕೊಂಡ ಪ್ರೋಫೆಸರ್…!

Published on

spot_img
spot_img

ಕ್ರೈಂ ಬ್ಯೂರೋ ವಿವೇಕವಾರ್ತೆ -ವಾಟ್ಸ್ಯಾಪ್‌ನಲ್ಲಿ ಪರಿಚಯವಾದ ಯುವತಿ ಜೊತೆ ವಿಡಿಯೋ ಕಾಲ್‌ನಲ್ಲಿ ಮಜಾ ತೆಗೆದುಕೊಂಡ ಪ್ರೊಫೆಸರ್‌ ಒಬ್ಬರು ಈಗ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ದೂರು ನೀಡುವಂತಾಗಿದೆ.

ಧಾರವಾಡದ ಸತ್ತೂರಿನ ನಯನಾಭಿರಾಮ ಉಡುಪ ಎನ್ನುವ ಪ್ರೊಫೆಸರ್ ಹೀಗೆ ಹಣ ಕಳೆದುಕೊಂಡವರು.

ವಾಟ್ಸ್ಯಾಪ್‌ನಲ್ಲಿ ಪರಿಚಯವಾದ ಅಂಜಲಿ ಶರ್ಮಾ ಎಂಬ ಯುವತಿ ಜೊತೆ ಚಾಟ್‌ ಮಾಡುತ್ತಿದ್ದ ಇವರಿಗೆ ಯುವತಿ ವಿಡಿಯೋ ಕಾಲ್ ಮಾಡಿದ್ದು, ಈ ಸಂದರ್ಭದಲ್ಲಿ ಖಾಸಗಿ ಅಂಗಾಂಗ ತೋರಿಸುವಂತೆ ಪ್ರಚೋದಿಸಿದ್ದಾಳೆ. ಪ್ರೊಫೆಸರ್ ʼಮುಕ್ತ ಮುಕ್ತʼವಾಗುತ್ತಿದ್ದಂತೆ ಅದನ್ನು ಯುವತಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾಳೆ. ವಿಡಿಯೋವನ್ನು ಪ್ರೊಫೆಸರ್‌ಗೆ ಕಳುಹಿಸಿ, ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾಳೆ.

ನಂತರ ಯುವತಿ 3 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಳು. ಅದಾದ ಮೇಲೆ ಕೆಲ ದಿನಗಳ ಬಳಿಕ ವಿಕ್ರಮ್ ಎನ್ನುವ ಅಪರಿಚಿತ ವ್ಯಕ್ತಿ ನಾನು ಸೈಬರ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಕರೆ ಮಾಡಿದ್ದಾನೆ. ʼಅಂಜಲಿ ನನಗೆ ಗೊತ್ತು, 5 ಲಕ್ಷ ಹಣ ಕೊಡಿ, ಎಲ್ಲವೂ ಬಗೆಹರಿಯುತ್ತದೆʼ ಎಂದು ಒತ್ತಡ ಹಾಕಿದ್ದಾನೆ. ಬೆದರಿದ ಪ್ರೊಫೆಸರ್‌ ಹಂತ ಹಂತವಾಗಿ ಸೈಬರ್ ವಂಚಕರಿಗೆ 21 ಲಕ್ಷ ರೂ. ಹಣವನ್ನು ಟ್ರಾನ್ಸ್‌ಫರ್‌ ಮಾಡಿದ್ದಾರೆ. ಸದ್ಯ ನಿತ್ಯವೂ ಹಣಕ್ಕೆ ಬೇಡಿಕೆ ಇಡುತ್ತಿದ್ದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!