Sunday, October 1, 2023

ಯಜಮಾನಿಯರಿಗೆ ಗುಡ್ ನ್ಯೂಸ್ : ಆ.30 ರಂದು 1.09 ಕೋಟಿ ಮಹಿಳೆಯರ ಖಾತೆಗೆ `ಗೃಹಲಕ್ಷ್ಮೀ’ ಹಣ ಪಾವತಿ

ವಿವೇಕವಾರ್ತೆ : ಆಗಸ್ಟ್ 30 ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಿದ್ದು, ಅದೇ ದಿನ ಮಹಿಳೆಯರ ಖಾತೆಗೆ 2,000 ರೂ. ಜಮಾ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

1,09,54,000 ಮಹಿಳೆಯರ ಖಾತೆಗೆ ತಲಾ 2000 ರೂ.

ಜಮಾ ಮಾಡಲಾಗುವುದು. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಯಲ್ಲಿ 13,81,430 ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಆಗಸ್ಟ್ 30 ರಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುತ್ತದೆ. ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮೊದಲಾದವರು ಭಾಗವಹಿಸಲಿದ್ದಾರೆ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವೇದಿಕೆ ನಿರ್ಮಾಣ ಕಾಮಗಾರಿಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವೀಕ್ಷಿಸಿದ್ದಾರೆ. ಸಚಿವ ಡಾ.ಹೆಚ್.ಸಿ. ಮಹದೇವಪ್ಪ, ಶಾಸಕರಾದ ಕೆ. ಹರೀಶ್ ಗೌಡ, ಡಿ. ರವಿಶಂಕರ್, ದರ್ಶನ್ ಧ್ರುವನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

ಲೋಕಸಭೆ ಬಿಜೆಪಿ ಟಿಕೆಟ್ ಸಿಗುವ ಭರವಸೆ ಇದೆ – ರಮೇಶ್ ಕತ್ತಿ

ವಿವೇಕವಾರ್ತೆ : ಈ ಬಾರಿ ಲೋಕಸಭೆ ಚುನಾವಣೆಗೆ ತಮಗೆ ಟಿಕೆಟ್ ನೀಡುವ ಭರವಸೆ ಇದೆ ಎಂದು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಸಂಸದ ರಮೇಶ್ ಕತ್ತಿ ಹೇಳಿದ್ದಾರೆ. ಅವರು ಇಂದು ಚಿಕ್ಕೋಡಿಯ ನಂದಗಾಂವ ಗ್ರಾಮದಲ್ಲಿ...

ಗೋಕಾಕ : ಹಣಕಾಸಿನ ವಿಚಾರಕ್ಕೆ ಯೋಧನಿಂದಲೇ ಮತ್ತೋರ್ವ ಯೋಧನ ಮೇಲೆ ಫೈರಿಂಗ್.!

ವಿವೇಕ ವಾರ್ತೆ : ಓರ್ವ ಯೋಧನಿಂದ ಮತ್ತೊಬ್ಬ ಯೋಧನ ಮೇಲೆ ಪೈರಿಂಗ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ರಾಜನಕಟ್ಟಿಯಲ್ಲಿ ನಡೆದಿದೆ. ರಾಜನಕಟ್ಟೆ ಗ್ರಾಮದ ಇಬ್ಬರು ವ್ಯಕ್ತಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ....

ಸಹಾಯಕ ಸರಕಾರಿ ವಕೀಲರಾಗಿ ಆಯ್ಕೆಯಾದ ಮಹಾವೀರ ಗಂಡವ್ವಗೋಳ ಅವರಿಗೆ ಕನ್ನಡ ಸೇನೆಯಿಂದ ಸತ್ಕಾರ

ವಿವೇಕವಾರ್ತೆ :ಕರ್ನಾಟಕ ಸರ್ಕಾರದ ಅಭಿಯೋಜನೆಯ ಇಲಾಖೆಯಲ್ಲಿ ಸಹಾಯಕ ಸರಕಾರಿ ಅಭಿಯೋಜನೆಕಾರರು-ವ- ಸಹಾಯಕ ಸರಕಾರಿ ವಕೀಲರು (APP) ಆಯ್ಕೆ ಆಗಿ ಬೆಳಗಾವಿ ಜಿಲ್ಲೆಯ ನ್ಯಾಯಾಲಯದಲ್ಲಿ ಅಭಿಯೋಜನೆಕಾರರಾಗಿ ಆಯ್ಕೆಯಾದ ಮಹಾವೀರ ಗಂಡವ್ವಗೋಳ ಅವರಿಗೆ ಕನ್ನಡ ಸೇನೆ...
- Advertisment -

Most Popular

ಭಾರತದಲ್ಲಿ ಈ ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಹೆಚ್ಚು ʻಅಶ್ಲೀಲ ಚಿತ್ರʼ ವೀಕ್ಷಿಸುತ್ತಾರೆ : ತಜ್ಞರಿಂದ ಆತಂಕಕಾರಿ ಮಾಹಿತಿ.!

ವಿವೇಕ ವಾರ್ತೆ : ಭಾರತದಲ್ಲಿ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪೋರ್ನ್ ವೀಕ್ಷಿಸುತ್ತಿದ್ದಾರೆ. ಚಿಕ್ಕ ಮಕ್ಕಳು ಪೋರ್ನ್ ನೋಡುತ್ತಿದ್ದು, ಅಶ್ಲೀಲತೆಗೆ ಗುರಿಯಾಗುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಪೋರ್ನ್ ಸೈಟ್‌ಗಳನ್ನು ನಿರ್ಬಂಧಿಸುವ ನಿಯಮಗಳ ಹೊರತಾಗಿಯೂ,...

ಬುದ್ದಿಮಾತು ಹೇಳಿದ ಪೋಷಕರು ; ವಿಷ ಕುಡಿದು ಸಾವಿಗೀಡಾದ 19 ರ ಯುವತಿ.!

ವಿವೇಕವಾರ್ತೆ : ಪೋಷಕರು ಬುದ್ಧಿವಾದ ಹೇಳಿದ್ದರಿಂದ ನೊಂದ ಬಿ.ಎ ಪದವಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರು ಗ್ರಾ.ಪಂ. ವ್ಯಾಪ್ತಿಯ ಹರಾವರಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು...

ನೋಡ ನೋಡುತ್ತಿದ್ದಂತೆಯೇ ಹೂವು ನುಂಗುವ ಗಣೇಶ ಮೂರ್ತಿ ; ಅಚ್ಚರಿಯ ವಿಡಿಯೋ ವೈರಲ್.!

ವಿವೇಕವಾರ್ತೆ : ಗಣೇಶನ ಮೂರ್ತಿ ಹಾಲು ಕುಡಿಯೋದನ್ನ ಕೇಳಿದ್ದೇನೆ, ನೀರು ಕುಡಿಯೋದನ್ನು ಕೇಳಿದ್ದೇವೆ. ಆದರೆ ಇಲ್ಲೋಬ್ಬ ಗಣೇಶ ತನಗೆ ಇಡಿಸಿದ ಹೂವನ್ನೇ ನುಂಗುತ್ತಿದ್ದಾನೆ. ಹೌದು, ಇಂಥದೊಂದು ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಲೋಕಾಯುಕ್ತ ಬಲೆಗೆ ಬಿದ್ದ BBMP ಸಹಾಯಕ ಕಂದಾಯ ಅಧಿಕಾರಿ.!

ವಿವೇಕವಾರ್ತೆ : ಬಿಬಿಎಂಪಿಯ ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ ಚಂದ್ರಪ್ಪ ಬೀರಜ್ಜನವರ್ ಮತ್ತು ಗೋಪಾಲ್...
error: Content is protected !!