ವಿವೇಕವಾರ್ತೆ : ಮೊಬೈಲ್ ಚಾರ್ಜ್’ಗೆ ಹಾಕಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮೊಬೈಲ್ ಸ್ಫೋಟಗೊಂಡು ಮಹಿಳೆಯೋರ್ವಳು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.
ಮೃತ ಯುವತಿಯನ್ನು ಕೊಕಿಲಾಂಪಾಲ್ (33) ಎಂದು ಗುರುತಿಸಲಾಗಿದೆ. ಈಕೆ ತಂಜಾವೂರು ಜಿಲ್ಲೆಯ ಪಾಪನಾಶಂ ಬಳಿಯಿರುವ ವಿಶಿಷ್ಟರಾಜಪುರಂ ಮೂಲದವಳು. ಮದುವೆಯಾಗಿದ್ದು ಓರ್ವ ಗಂಡು ಮಗನಿದ್ದಾನೆ. ಪತಿ ಪ್ರಭಾಕರನ್ ಅನಾರೋಗ್ಯ ಕಾರಣದಿಂದ ಕೆಲವು ವರ್ಷಗಳ ಹಿಂದೆಯೇ ಮೃತಪಟ್ಟನು.
ಪತಿ ಮರಣಾ ನಂತರ ಕೋಕಿಲಾಂಪಾಲ್ ಜೀವನ ನಡೆಸಲು ಮೇಲಕಾಪಿಸ್ಥಳದಲ್ಲಿ ವಾಚ್ ಮತ್ತು ಸೆಲ್ ಫೋನ್ ರಿಪೇರಿ ಅಂಗಡಿ ನಡೆಸುತ್ತಿದ್ದಳು. ಕಳೆದ ಬುಧವಾರ ಮಧ್ಯಾಹ್ನ ಸೆಲ್ ಫೋನ್ ಚಾರ್ಜ್ ಮಾಡುವಾಗ ಕಿವಿಯಲ್ಲಿ ಹೆಡ್ ಫೋನ್ ಹಾಕಿಕೊಂಡು ಮಾತನಾಡುತ್ತಿದ್ದರು. ಆಗ ಅನಿರೀಕ್ಷಿತವಾಗಿ ಮೊಬೈಲ್ ಸ್ಫೋಟಗೊಂಡಿದೆ. ಪರಿಣಾಮ ಕೋಕಿಲಾಂಪಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ಈ ದುರ್ಘಟನೆಯಲ್ಲಿ ಅಂಗಡಿಯಲ್ಲಿದ್ದ ಸಾಮಗ್ರಿಗಳು ಕೂಡ ಬೆಂಕಿಗೆ ಆಹುತಿಯಾಗಿವೆ. ಘಟನೆಯ ಕುರಿತು ಕೋಕಿಲಂಪಾಲ್ ತಂದೆ ಕಪಿಸ್ತಲಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.