ಮೊದಲ ರಾತ್ರಿ ಪತ್ನಿಯ ಮದುವೆ ಸೀರೆಗೆ ಕೊರಳೊಡ್ಡಿದ ಯುವಕ.? ಸಾವು ನಿಗೂಢ.!

Published on

spot_img
spot_img

ವಿವೇಕ ವಾರ್ತೆ : ಮದುವೆಯಾದ ಎರಡೇ ದಿನದಲ್ಲಿ ಯುವಕನೊಬ್ಬ ಪತ್ನಿಯ ಮದುವೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆನ್ನೈನ ಚೆಂಗಲ್ಪಟ್ಟು ಏರಿಯಾದಲ್ಲಿ ನಡೆದಿದೆ.

ಮೃತ ವ್ಯಕ್ತಿ ಸರವಣನ್​ ಎಂದು ವರದಿಯಾಗಿದೆ. ಈತ ಓಚೇರಿ ನಿವಾಸಿಯಾಗಿದ್ದು, ಸುಂಗುವಚತಿರಂನಲ್ಲಿರುವ ಸ್ಯಾಮ್​ಸಂಗ್​ ಮೊಬೈಲ್​ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ವರದಿಯಿಂದ ತಿಳಿದುಬಂದಿದೆ.

ಬಾಲ್ಯದ ಸ್ನೇಹಿತೆಯಾಗಿದ್ದ ಶ್ವೇತಾ ಎಂಬಾಕೆಯನ್ನು ಕೆಲವು ವರ್ಷಗಳಿಂದ ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ಎರಡು ದಿನಗಳ ಹಿಂದೆ ವಿವಾಹವಾಗಿದ್ದರು. ನವ ದಂಪತಿ ತಮ್ಮ ಮದುವೆಯ ನಂತರ ಮೊದಲ ಬಾರಿಗೆ ದಿಮ್ಮಾವರಂಗೆ ತೆರಳಿದ್ದರು. ಆ ದಿನ ಅವರ ಮೊದಲ ರಾತ್ರಿಯಾಗಿತ್ತು.

ರಾತ್ರಿ 9 ಗಂಟೆಗೆ ದಂಪತಿ ತಮ್ಮ ಕೋಣೆಗೆ ಹೋಗಿದ್ದರು. ಬೆಳಗ್ಗೆ 5 ಗಂಟೆ ಸುಮಾರಿಗೆ ಶ್ವೇತಾಳ ಕಿರುಚಾಟ ಕೇಳಿ ಮನೆಯವರು ಬೆಚ್ಚಿಬಿದ್ದಿದ್ದಾರೆ. ಶ್ವೇತಾ ರೂಮಿನಿಂದ ಹೊರಗೆ ಓಡಿ ಬಂದು ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆಕೆಯ ಪಾಲಕರು ಕೊಠಡಿಯೊಳಗೆ ಹೋಗಿ ನೋಡಿದಾಗ ಶ್ವೇತಾಳ ಮುಹೂರ್ತದ ಸೀರೆಯನ್ನು ಬಳಸಿ ಸರವಣನ್ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.

ಚೆಂಗಲ್ಪಟ್ಟು ತಾಲೂಕು ಪೊಲೀಸರ ತಂಡ ಆತನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಚೆಂಗಲ್ಪಟ್ಟು ಜಿಎಚ್‌ಗೆ ಕಳುಹಿಸಿದೆ.

ರಾತ್ರಿ ಸರವಣನ್ ತನ್ನ ತಂದೆತಾಯಿಯೊಂದಿಗೆ ಫೋನಿನಲ್ಲಿ ಮಾತನಾಡಿ, ಹನಿಮೂನ್‌ ಪ್ರವಾಸಕ್ಕಾಗಿ ಹೋಗಬೇಕಾದ ಸ್ಥಳಗಳ ಬಗ್ಗೆ ತಿಳಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮೊದಲ ರಾತ್ರಿ ಸರವಣನ್​ ಮುಖದಲ್ಲಿ ಯಾವುದೇ ಆತಂಕ ಅಥವಾ ದುಃಖದ ಲಕ್ಷಣಗಳು ಇರಲಿಲ್ಲ ಎಂದು ಪಾಲಕರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.

ಸರವಣನ್​ ಸಾವು ತುಂಬಾ ನಿಗೂಢವಾಗಿದೆ. ಚೆಂಗಲಪಟ್ಟು ತಾಲೂಕು ಪೊಲೀಸರು ಅನುಮಾನಾಸ್ಪದ ಸಾವಿನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಶ್ವೇತಾ ಮತ್ತು ಆಕೆಯ ಪೋಷಕರನ್ನು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!