ಮೆಟ್ರೋದಲ್ಲಿ ಚುಂಬನ ದೃಶ್ಯ ; ನೆಟ್ಟಿಗರಿಂದ ಉಗಿಸಿಕೊಂಡ ಪ್ರೇಮಿಗಳು.!

Published on

spot_img
spot_img

ವಿವೇಕವಾರ್ತೆ : ಮೆಟ್ರೋ ರೈಲುಗಳು ಪದೇ ಪದೇ ಸುದ್ದಿಯಾಗುತ್ತಲೇ ಇರುತ್ತವೆ. ಸದ್ಯ ಜೋಡಿಯೊಂದು ಮೆಟ್ರೋ ಕೋಚ್​​ನ ಒಳಗೆ ಚುಂಬಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ದೆಹಲಿಯ ಆನಂದ ವಿಹಾರ ಮೆಟ್ರೋ ನಿಲ್ದಾಣದ ಆಸುಪಾಸು ಈ ಘಟನೆ ನಡೆದಿದೆ ಎನ್ನುವುದು ಮೆಟ್ರೋ ರೈಲಿನೊಳಗಿನಿಂದ ಕೇಳಿಬಂದ ಉದ್ಘೋಷಣೆಯಿಂದ ತಿಳಿದುಬರುತ್ತದೆ.

ಇನ್ನು ನೆಟ್ಟಿಗರು ಮೆಟ್ರೋ ಪ್ರಯಾಣಿಕರ ವರ್ತನೆಯ ಕುರಿತು ಮೆಟ್ರೋ ಆಡಳಿತ ಮಂಡಳಿಯು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ಆದರೆ ಮುಂದೆ ಏನು ಗತಿ ಎಂದು  ಕಳವಳ ವ್ಯಕ್ತಪಡಿಸಿದ್ದಾರೆ.

@Postman_46 ಎಂಬ  Xನ ಅಕೌಂಟ್ ನಿಂದ ಪೋಸ್ಟ್ ಮಾಡಲಾಗಿದೆ. ಆನಂದ ವಿಹಾರದ ಮತ್ತೊಂದು ಭಾವನಾತ್ಮಕ ವಿಡಿಯೋ. ಪ್ರೀತಿ ಕುರುಡು ಆದರೆ ಜನರು ಕುರುಡರಲ್ಲ ಎನ್ನುವುದನ್ನು ನಾವು ಮರೆತಿರಬಹುದು ಎಂದು ಬರೆದು ಪೋಸ್ಟ್ ಶೇರ್ ಮಾಡಲಾಗಿದೆ.

ಅನೇಕರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಇಂಥ ಜನರಿಗಾಗಿ ದೆಹಲಿ ಮೆಟ್ರೋ ರೂಮ್ ಗಳನ್ನು ಸೃಷ್ಟಿಸಬೇಕು! ನಾಚಿಕೆಯಾಗಬೇಕು ದೆಹಲಿ ಮೆಟ್ರೋ ಆಡಳಿತಕ್ಕೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಓಯೋಗೆ ಖರ್ಚು ಮಾಡುವ ಹಣ ಉಳಿತಾಯವಾಗುತ್ತಿದೆ ಎಂದಿದ್ದಾರೆ ಮತ್ತೊಬ್ಬರು.

ಸರ್ಕಾರವು ಈಗಲೇ ಇಂಥ ನಡೆವಳಿಕೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದೆ ಬೆಡ್ರೂಮ್​ ದೃಶ್ಯಗಳನ್ನು ಮೆಟ್ರೋದಲ್ಲಿಯೇ ನೋಡಬೇಕಾಗಬಹುದು ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಖುಷಿಯಾಗುತ್ತಿದೆ! ನನ್ನ ಮಹಾನ್ ಭಾರತ ಬದಲಾಗುತ್ತಿದೆ ಎಂದಿದ್ದಾರೆ.

https://twitter.com/i/status/1704726757730075121

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!