ವಿವೇಕ ವಾರ್ತೆ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಗಂಡು ಮಗು ಆಗಿಲ್ಲವೆಂಬ ಕೊರಗಿನಿಂದ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಆತ್ಮಹತ್ಯೆ ಯತ್ನಿಸಿದ ಘಟನೆ ನಡೆದಿದೆ.
ಘಟನೆಯಲ್ಲಿ ಶ್ರೀಶೈಲ್ (05), ಶ್ರಾವಣಿ (03), ಸೌಜನ್ಯ (ಜನನವಾಗಿ 17 ದಿನ) ಸಾವನ್ನಪ್ಪಿದ್ದು, ಸಂಗೀತಾ ಗುಡೆಪ್ಪನವರ ಬದುಕುಳಿದ ತಾಯಿಯಾಗಿದ್ದಾರೆ.
ಮೂರನೇ ಮಗು ಗಂಡಾಗುತ್ತದೆ ಎಂದು ತಾಯಿ ಸಂಗೀತಾ ಆಸೆ ಇಟ್ಟುಕೊಂಡಿದ್ದಳು. ಆದರೆ ಕಳೆದ 17 ದಿನಗಳ ಹಿಂದೆ ಸಂಗೀತಾಗೆ ಹೆಣ್ಣು ಮಗು ಜನಿಸಿತ್ತು. ಇದರಿಂದ ಮನನೊಂದು ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ಹೊಲದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈ ವೇಳೆ ಪತಿ ಹನಮಂತ ಗುಡೆಪ್ಪನವರ ಸಹಾಯದಿಂದ ಸಂಗೀತಾ ಬದುಕುಳಿದಿದ್ದಾರೆ. ಮಕ್ಕಳ ರಕ್ಷಣೆಗೆ ತಂದೆ ಎಷ್ಟೇ ಹೋರಾಡಿದರೂ ಬದುಕಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಸ್ಥಳಕ್ಕೆ ಪಿ.ಎಸ್.ಐ ಮಹೇಶ ಸಂಖ, ಸಿಪಿಐ ಮಲ್ಲಪ್ಪ ಮಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳನ್ನ ಬಾವಿಗೆ ತಳ್ಳಿದಕ್ಕೆ ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ತಾಯಿ ಸಂಗೀತಾ ವಿರುದ್ಧ ದೂರು ದಾಖಲಾಗಿದೆ.