ವಿವೇಕವಾರ್ತೆ : ನಾವು ಯಾವುದೇ ಕಾಯಿಲೆಗೆ ತುತ್ತಾದರೆ ನಮ್ಮ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಈ ಬದಲಾವಣೆಗಳಲ್ಲಿ ಮೂತ್ರದ ಬಣ್ಣ ಬದಲಾವಣೆ ಕೂಡ ಒಂದು.
ಮೂತ್ರದ ಬಣ್ಣ ಆರೋಗ್ಯದ ಹಲವು ಸ್ಥಿತಿಗಳನ್ನು ಸೂಚಿಸುತ್ತದೆ. ಹೀಗಾಗಿಯೇ ಮೊದಲೆಲ್ಲ ವೈದ್ಯರು ಮೂತ್ರ ಯಾವ ಬಣ್ಣದಲ್ಲಿ ವಿಸರ್ಜನೆಯಾಗುತ್ತಿದೆ ಎಂದು ಪರೀಕ್ಷೆ ಮಾಡುತ್ತಾರೆ. ಈಗ ಮೂತ್ರ ಸಂಬಂಧಿ ವಿವಿಧ ಪರೀಕ್ಷೆಗಳು ಬಂದಿವೆ. ಮೂತ್ರದ ಬಣ್ಣದಿಂದಲೇ ಕೆಲವು ರೋಗ ಅಥವಾ ಸಮಸ್ಯೆಗಳನ್ನು ಗುರುತಿಸಬಹುದು.
1) ಹಳದಿ :
ಮೂತ್ರ ತೆಳು ಹಳದಿ ಬಣ್ಣದಲ್ಲಿದಲ್ಲಿದ್ದರೆ ನಾವು ನಮ್ಮ ದೇಹಕ್ಕೆ ಅಗತ್ಯವಾದಷ್ಟು ನೀರು ಕುಡಿದಿದ್ದೀರಿ ಎಂದು ಅರ್ಥ. ದೇಹದಲ್ಲಿ ನೀರಿನಂಶ ಸರಿಯಾಗಿ ಇದ್ದರೆ ಮೂತ್ರ ತೆಳು ಹಳದಿ ಬಣ್ಣದಲ್ಲಿದ್ದು ಮೂತ್ರ ಮಾಡುವಾಗ ಹೆಚ್ಚಿನ ದುರ್ನಾತ ಬರುವುದಿಲ್ಲ. ನಮ್ಮ ಮೂತ್ರ ಕಡು ಹಳದಿ ಬಣ್ಣದಲ್ಲಿದ್ದರೆ ನಾವು ಆರೋಗ್ಯವಾಗಿದ್ದೇವೆ, ಆದರೆ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯುತ್ತಿಲ್ಲವೆಂದು ಅರ್ಥ. ಈ ಮೂತ್ರ ಹೆಚ್ಚು ದುರ್ವಾಸನೆ ಹೊಂದಿರುತ್ತದೆ. ಮೂತ್ರ ಈ ರೀತಿ ಕಂಡು ಬಂದಾಗ ಸಾಕಷ್ಟು ನೀರು ಕುಡಿಯುವುದು ಅಗತ್ಯ.
2) ನೀಲಿ ಬಣ್ಣದ ಮೂತ್ರ :
ಕೆಲವೊಂದು ಆಹಾರಗಳನ್ನು ತಿಂದಾಗ ಮೂತ್ರ ನೀಲಿ ಬಣ್ಣಕ್ಕೆ ತಿರುಗುತ್ತದೆ. ಮೂತ್ರ ನೀಲಿ ಬಣ್ಣಕ್ಕೆ ತಿರುಗುವುದು ತುಂಬಾ ಅಪರೂಪ. ಪೋರ್ಫೈರಿಯಾದಂಥ ತುಂಬಾ ಅಪರೂಪದ ಅನುವಂಶಿಕ ಕಾಯಿಲೆ ಕಾಣಿಸಿಕೊಂಡಾಗ ಈ ರೀತಿ ಮೂತ್ರ ನೀಲಿ ಬಣ್ಣಕ್ಕೆ ತಿರುಗುತ್ತದೆ ಎನ್ನಲಾಗಿದೆ. ಆದರೆ ಈ ಕಾಯಿಲೆಯಲ್ಲಿ ಮೂತ್ರ ನೇರಳೆ ಬಣ್ಣದಲ್ಲಿರುತ್ತದೆ. ಕೆಲವರು ಅದನ್ನು ನೀಲಿ ಬಣ್ಣವೆಂದು ತಿಳಿಯುತ್ತಾರೆ.
3) ಕಿತ್ತಳೆ ಬಣ್ಣ :
ದೇಹದಲ್ಲಿ ನೀರಿನಾಂಶ ತುಂಬಾ ಕಡಿಮೆಯಾದಾಗ ಕಡು ಕಿತ್ತಳೆ ಬಣ್ಣದಲ್ಲಿರುತ್ತದೆ. ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ಇನ್ನು ಕೆಲವೊಂದು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಇನ್ನು ವಿಟಮಿನ್ ಸಿ ತೆಗೆದುಕೊಳ್ಳುವುದರಿಂದ ಮೂತ್ರ ಕಿತ್ತಳೆ ಬಣ್ಣದಲ್ಲಿರುವುದು.
ಕ್ಯಾರೆಟ್, ಬೀಟಾ ಕೆರೋಟಿನ್ ಅಧಿಕವಿರುವ ಆಹಾರ ತಿಂದಾಗ ಮೂತ್ರ ಕಿತ್ತಳೆ ಬಣ್ಣದಲ್ಲಿರುತ್ತದೆ, ಆಹಾರದಿಂದಾಗಿ ಮೂತ್ರದ ಬಣ್ಣದ ಬದಲಾಗಿದ್ದರೆ ಈ ಬಣ್ಣ ಒಂದು ದಿನ ಇರುತ್ತದೆ ಅಷ್ಟೇ.
4) ಹಸಿರು ಬಣ್ಣ :
ಶತಾವರಿ ತಿಂದಾಗ ಮೂತ್ರ ಹಸಿರು ಬಣ್ಣದಲ್ಲಿರುತ್ತದೆ. ಇನ್ನು ಕೃತಕ ಬಣ್ಣ ಹಾಕಿರುವ ಆಹಾರ ತಿಂದಾಗಲೂ ಈ ರೀತಿ ಕಂಡು ಬರುವುದು. ಇನ್ನು ಕೆಲವೊಮ್ಮೆ ಕ್ಯಾನ್ಸರ್ ಮದ್ದುಗಳು, ರಕ್ತ ಸಂಬಂಧಿ ಕಾಯಿಲೆಗೆ ತೆಗೆದುಕೊಳ್ಳುವ ಔಷಧಿಗಳಿಂದಲೂ ಮೂತ್ರ ಹಸಿರು ಬಣ್ಣಕ್ಕೆ ತಿರುಗುತ್ತದೆ. ವಿಟಮಿನ್ ಬಿ ಅತ್ಯಧಿಕ ತೆಗೆದುಕೊಳ್ಳುವುದರಿಂದ ಮೂತ್ರ ತೆಳು ಹಸಿರು ಬಣ್ಣಕ್ಕೆ ತಿರುಗುವುದು.
ಮೂತ್ರ ಹಸಿರು ಬಣ್ಣದಲ್ಲಿದ್ದ ವೇಳೆ ನೋವು, ಜ್ವರ, ರಕ್ತಸ್ರಾವ ಇದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಇನ್ನು UTI ಉಂಟಾದಾಗ ಮೂತ್ರ ಮಾಡುವಾಗ ಉರಿ, ವಾಸನೆ ಇರುವುದು ಹಾಗೂ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು.
5) ಕೋಲಾ ಬಣ್ಣ (ಕಡು ಕಂದು ಬಣ್ಣ) :
ಚಿಕಿತ್ಸೆ ಪಡೆಯುತ್ತಿದ್ದರೆ ಅಥವಾ ಅತಿಯಾಗಿ ವ್ಯಾಯಾಮ ಮಾಡಿದಾಗ ಮೂತ್ರ ಈ ಬಣ್ಣಕ್ಕೆ ತಿರುಗುವುದು. ಮಲೇರಿಯಾ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದರೆ ಆ್ಯಂಟಿ ಬ್ಯಾಕ್ಟೀರಿಯಾ ಡ್ರಗ್ಸ್ ತೆಗೆದುಕೊಂಡಾಗ, ಕಬ್ಬಿಣದಂಶವಿರುವ ಮಾತ್ರೆಗಳು, ಅತ್ಯಧಿಕ ನ್ಯೂಟ್ರಿಷಿಯನ್ ಅಥವಾ ಗಿಡ ಮೂಲಿಕೆಗಳ ಸೇವನೆಯಿಂದಾಗಿ ಮೂತ್ರದ ಬಣ್ಣ ಕಡು ಕಂದು ಬಣ್ಣಕ್ಕೆ ತಿರುಗುವುದು.
ಇನ್ನು ಅತಿಯಾಗಿ ವ್ಯಾಯಾಮ ಮಾಡುವುದರಿಂದ ಸ್ನಾಯುಗಳಿಗೆ ಪೆಟ್ಟಾಗಿ ಮೂತ್ರ ಕಂದು ಬಣ್ಣಕ್ಕೆ ತಿರುಗುವುದು. ಈ ರೀತಿ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಹೆಪಟೈಟಿಸ್, ಲಿವರ್ ಸಿರೋಸಿಸ್, ಲಿವರ್ ಕ್ಯಾನ್ಸರ್, ಕಿಡ್ನಿ ಸಮಸ್ಯೆ, ಐರನ್ ಟಾಕ್ಸಿಸಿಟಿ, ಮೆಲನೊಮಾ, ಪೋರ್ಫೈರಿಯಾ ಈ ರೀತಿಯ ಆರೋಗ್ಯ ಸಮಸ್ಯೆಗಳಿದ್ದಾಗ ಮೂತ್ರ ಕಂದು ಬಣ್ಣಕ್ಕೆ ತಿರುಗುವುದು. ಮೂತ್ರದ ಬಣ್ಣದ ಜೊತೆಗೆ ನೋವು, ಜ್ವರ, ತಲೆಸುತ್ತು, ತೂಕ ಇಳಿಕೆ, ತ್ವಚೆ ಬಣ್ಣದಲ್ಲಿ ವ್ಯತ್ಯಾಸ ಈ ರೀತಿಯ ಬೇರೆ ಲಕ್ಷಣಗಳಿವೆ.
6) ಕೆಂಪು ಬಣ್ಣ :
ಪಿಂಕ್ ಅಥವಾ ಕೆಂಪು ಬಣ್ಣ ನೀವು ತಿಂದ ಆಹಾರದಿಂದಾಗಿ ಉಂಟಾಗಿರುತ್ತದೆ. ಬೀಟ್‌ರೂಟ್, ಬ್ಲ್ಯಾಕ್‌ಬೆರ್ರಿ, ಕೆಲವು ಕ್ಯಾಂಡಿಗಳಿಂದಾಗಿ ಉಂಟಾಗಿರುತ್ತದೆ. ಈ ಬಣ್ಣ ಒಂದು ದಿನಕ್ಕಿಂತ ಹೆಚ್ಚು ಇರುವುದಿಲ್ಲ.
ಇನ್ನು ಕೆಲವು ಮನೆಮದ್ದುಗಳು, ಔಷಧಿಗಳಿಂದಲೂ ಮೂತ್ರದ ಬಣ್ಣ ಕೆಂಪು ಅಥವಾ ಪಿಂಕ್ ಬಣ್ಣಕ್ಕೆ ತಿರುಗುತ್ತದೆ.
ಇನ್ನು ಮೂತ್ರದಲ್ಲಿ ರಕ್ತ ಕಂಡು ಬರುವುದಾದರೆ ಗಮನಿಸಿ. ಮುಟ್ಟಿನ ಸಮಯದಲ್ಲಿ ರಕ್ತ ಕಂಡುಬರುವುದು. ಇನ್ನು ಮೂತ್ರಕೋಶ ಅಥವಾ ಕಿಡ್ನಿಯಲ್ಲಿ ಗಡ್ಡೆಗಳಿದ್ದರೆ ಮೂತ್ರದಲ್ಲಿ ರಕ್ತ ಕಂಡು ಬರುವುದು, ಇನ್ನು ಸಿಸ್ಟ್ ಹಾಗೂ UTI ಸಮಸ್ಯೆ ಇದ್ದಾಗಲೂ ಕೆಲವೊಮ್ಮೆ ಮೂತ್ರದಲ್ಲಿ ರಕ್ತ ಕಂಡು ಬರುವುದು.
ಕಿಡ್ನಿ ಸ್ಟೋನ್, ಕಿಡ್ನಿ ಸೋಂಕು, ಪ್ರೊಸ್ಟೇಟ್ ಸಮಸ್ಯೆಯಿದ್ದಾಗಲೂ ಮೂತ್ರ ಪಿಂಕ್ ಬಣ್ಣಕ್ಕೆ ತಿರುಗುತ್ತದೆ.
7) ಬಣ್ಣ ರಹಿತ ಮೂತ್ರ :
ಬಣ್ಣ ರಹಿತ ಮೂತ್ರ ಆರೋಗ್ಯದ ಸಂಕೇತ ಅಂತ ನೀವು ತಿಳಿದಿರಬಹುದು. ನಿಮ್ಮ ಮೂತ್ರ ನೀರಿನ ಬಣ್ಣದಲ್ಲಿದ್ದರೆ ನೀವು ಸಾಕಷ್ಟು ನೀರು ಕುಡಿಯುತ್ತಿದ್ದೀರಿ ಎಂದರ್ಥ. ನೀರನ್ನು ಕಡಿಮೆ ಕುಡಿದರೆ ಮಾತ್ರವಲ್ಲ, ಹೆಚ್ಚಾಗಿ ಕುಡಿದರೂ ಸಹ ಒಳ್ಳೆಯದಲ್ಲ.
ಸಕ್ಕರೆ ಕಾಯಿಲೆಯ ವಿಧದಲ್ಲಿ ಬಹುಅಪರೂಪದ ಕಾಯಿಲೆಯಾದ ಇನ್ಸಿಪಿಡಸ್ ಮಧುಮೇಹವಿದ್ದರೆ ಮೂತ್ರ ಬಣ್ಣ ರಹಿತವಾಗಿರುತ್ತದೆ. ನೀವು ನೀರು ಕಡಿಮೆ ಕುಡಿದರೂ ಮೂತ್ರ ಬಣ್ಣ ರಹಿತವಾಗಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.
8) ಮೂತ್ರದಲ್ಲಿ ರಕ್ತ :
ಮೂತ್ರದಲ್ಲಿ ರಕ್ತ ಕಾಣಿಸಿದರೆ ಗಂಭೀರ ಆರೋಗ್ಯ ಸಮಸ್ಯೆಯಿರಬಹುದು ಆದ್ದರಿಂದ ನಿರ್ಲಕ್ಷ್ಯ ಮಾಡಬೇಡಿ. ಇದು ಕಿಡ್ನಿ, ಗರ್ಭಕೋಶ, ಮೂತ್ರಕೋಶ ತೊಂದರೆ ಇದ್ದರೆ ಈ ರೀತಿ ಮೂತ್ರದಲ್ಲಿ ರಕ್ತ ಕಂಡು ಬರುವುದು. ಕೂಡಲೇ ವೈದ್ಯರನ್ನು ಸಂಪರ್ಕಿಸಿ ಯಾವ ಕಾರಣಕ್ಕೆ ರಕ್ತ ಬರುತ್ತಿದೆ ಎಂದು ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ.