ವಿವೇಕ ವಾರ್ತೆ : ಹಲವರು ತಮ್ಮ ಮನೆಗಳಲ್ಲಿ ಬೆಕ್ಕುಗಳನ್ನು, ಶ್ವಾನಗಳನ್ನು ಸಾಕುತ್ತಾರೆ. ಈ ಪ್ರಾಣಿಗಳು ತಮಗೆ ಅನ್ನ ಹಾಕಿದ ಮಾಲೀಕರಿಗೆ ಬಹಳ ನಿಷ್ಠೆಯುಳ್ಳವಾಗಿರುತ್ತವೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಯಾವುದೇ ಸ್ಪಷ್ಟ ಕಾರಣವಿಲ್ಲದೆ ಸಾಕು ಬೆಕ್ಕೊಂದು ತನ್ನ ಮಾಲೀಕರ ಮೇಲೆ ದಾಳಿ ಮಾಡಿದೆ. ಬೆಕ್ಕಿಗೆ ತೊಂದರೆಯಾಗದಂತೆ ವ್ಯಕ್ತಿಯೊಬ್ಬ ಮನೆಯೊಳಗೆ ಫ್ರಿಡ್ಜ್ ಅನ್ನು ಇಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವೇಳೆ ಇದ್ದಕ್ಕಿದ್ದಂತೆ ಬೆಕ್ಕು ಮಾಲೀಕರ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ.
ಬೆಕ್ಕು ಏಕಾಏಕಿ ಆಕ್ರಮಣ ಮಾಡಲು ಯತ್ನಿಸಿದ ಕೂಡಲೇ ವ್ಯಕ್ತಿ ತನ್ನನ್ನು ತಾನು ರಕ್ಷಿಸಲು ಬಾಗಿಲಿನ ಹಿಂಬದಿಗೆ ಹೋಗಿ ಅಡಗಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೂ ಬೆಕ್ಕು ಆಕ್ರಮಣ ಮುಂದುವರೆಸಿದೆ.
ಈ ಇಡೀ ಘಟನೆಯ ವಿಡಿಯೋ ಕೊಠಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ಇದು 9.4 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.