Wednesday, September 27, 2023

ಮಾಡದ ತಪ್ಪಿಗೆ 18 ವರ್ಷ ಜೈಲು ಶಿಕ್ಷೆ! ನಿರಪರಾಧಿಗೆ 24 ಕೋಟಿ ಪರಿಹಾರ ಘೋಷಿಸಿದ ಸರ್ಕಾರ!

ವಿವೇಕವಾರ್ತೆ : ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ವ್ಯಕ್ತಿ ಕೊನೆಗೂ ನಿರಪರಾಧಿ ಎಂದು ನ್ಯಾಯಾಲಯ ಬಿಡುಗಡೆ ಮಾಡಿದೆ. ಆದರೆ ಮಾಡದ ತಪ್ಪಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 18 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದಾನೆ ಆ ವ್ಯಕ್ತಿ. ಜೀವನದ ಅಮೂಲ್ಯವಾದ ಸಮಯವನ್ನು (Time) ಜೈಲಿನಲ್ಲಿ ಕಳೆದಿರುವ ವ್ಯಕ್ತಿಗೆ ಮುಕ್ತಿ ಸಿಕ್ಕಿದೆ.

ಹಾಗೆಯೇ ಮಾಡದ ತಪ್ಪಿಗಾಗಿ ಜೈಲು ಶಿಕ್ಷೆ ಅನುಭವಿಸಿದ ನಿರಪರಾಧಿಗೆ ಸದ್ಯ ಭಾರೀ ಮೊತ್ತದ ಪರಿಹಾರ ಕೂಡ ಸಿಗಲಿದೆ. ಹೌದು, ತಾನು ಮಾಡದ ತಪ್ಪಿಗಾಗಿ ಸುಮಾರು 18 ವರ್ಷಗಳ ಕಾಲ ಜೈಲಿನಲ್ಲಿ (Jail) ಕಳೆದ ನ್ಯೂಜಿಲೆಂಡ್‌ ವ್ಯಕ್ತಿಗೆ ಬಹು ಮಿಲಿಯನ್ ಡಾಲರ್ (Million Dollar) ಪರಿಹಾರ ಪ್ಯಾಕೇಜ್ ಸಿಗಲಿದೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ.

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿ

ಅಂದಹಾಗೆ ಆ ವ್ಯಕ್ತಿಯ ಹೆಸರು ಅಲನ್ ಹಾಲ್ ಎಂದು. 1986 ರಲ್ಲಿ ಆಕ್ಲೆಂಡ್ ಮನೆ ಆಕ್ರಮಣದ ಸಮಯದಲ್ಲಿ ಮಾರಣಾಂತಿಕವಾಗಿ ಇರಿದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಆದರೆ ಪ್ರಕರಣದಲ್ಲಿ ಆಲನ್‌ ಹಾಲ್‌ ಅಪರಾಧಿ ಎಂದು ಸಾಬೀತುಪಡಿಸುವಂಥ ಯಾವುದೇ ಸಾಕ್ಷಿ ಆಧಾರಗಳು ಸಿಕ್ಕಿರಲಿಲ್ಲ. ಆ ಬಗ್ಗೆ ಯಾವುದೇ ಫೋರೆನ್ಸಿಕ್ ಪುರಾವೆಗಳಿರಲಿಲ್ಲ. ಅಲ್ಲದೇ ಮಾರಣಾಂತಿಕವಾಗಿ ಕೊಲೆ ಮಾಡಿದ್ದ ಆಕ್ರಮಣಕಾರನು ವಿಭಿನ್ನ ಎತ್ತರ ಹೊಂದಿದ್ದ ಮತ್ತು ಆತ ಬೇರೆ ಜನಾಂಗೀಯ ಎಂದು ಹೇಳಲಾಗಿದೆ.

ಆದಾಗ್ಯೂ ಹಾಲ್‌ನನ್ನು ತಪ್ಪಿತಸ್ಥನೆಂದು ಜೈಲಿಗೆ ಹಾಕಲಾಗಿತ್ತು. ನಂತರದಲ್ಲಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಹಾಲ್‌ನನ್ನು 1994ರಲ್ಲಿ ಪೆರೋಲ್‌ ಮೇಲೆ ಬಿಡುಗಡೆ ಮಾಡಲಾಯಿತು.

ಆದರೆ ಬಿಡುಗಡೆಯ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ 2012 ರಲ್ಲಿ ಮತ್ತೆ ಜೈಲಿಗೆ ಕಳುಹಿಸಲಾಯಿತು. ಕೊನೆಗೂ ಕಳೆದ ವರ್ಷ ಹಾಲ್‌, ಬಿಡುಗಡೆಯಾಗಿ ಖುಲಾಸೆಗೊಂಡ ಎಂದು ಹೇಳಲಾಗಿದೆ.

ನ್ಯೂಜಿಲೆಂಡ್‌ ಸರ್ಕಾರದಿಂದ 24 ಕೋಟಿ ಪರಿಹಾರ !

ನ್ಯೂಜಿಲೆಂಡ್‌ನ ಸರ್ವೋಚ್ಚ ನ್ಯಾಯಾಲಯವು ಆರಂಭಿಕ ವಿಚಾರಣೆಯು ಇದು ಅಸಮರ್ಥತೆಯನ್ನು ತೋರಿಸುವ ಅನ್ಯಾಯವಾಗಿದೆ ಎಂದು ಒಪ್ಪಿಕೊಂಡಿದೆ.

ಈ ಮಧ್ಯೆ ವ್ಯಕ್ತಿಯೊಬ್ಬ ತಪ್ಪಾಗಿ ಜೀವನದ ಬಹುಕಾಲವನ್ನು ಜೈಲಿನಲ್ಲೇ ಕಳೆದಿರುವ ಬಗ್ಗೆ ಅಲ್ಲಿನ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ NZ$4.9 ಮಿಲಿಯನ್ ಅಂದರೆ ಸುಮಾರು 24 ಕೋಟಿ ರೂಪಾಯಿಗಳ ಪರಿಹಾರದ ನೀಡುವುದಾಗಿ ಅಲ್ಲಿನ ನ್ಯಾಯ ಸಚಿವ ಡೆಬೊರಾ ರಸೆಲ್ ಹೇಳಿದ್ದಾರೆ.

ಅಲ್ಲದೇ ತಪ್ಪಾದ ಸೆರೆವಾಸಕ್ಕಾಗಿ ನ್ಯೂಜಿಲೆಂಡ್ ಸರ್ಕಾರವು ಕ್ಷಮೆಯಾಚಿಸುತ್ತದೆ ಎಂದು ರಸೆಲ್ ಹೇಳಿದ್ದಾರೆ. ಆದರೆ ಕ್ಷಮಾಪಣೆ ಮತ್ತು ಪರಿಹಾರವು ಹಾಲ್ ಅನುಭವಿಸಿದ ಅನ್ಯಾಯವನ್ನು ಸಂಪೂರ್ಣವಾಗಿ ಸರಿಪಡಿಸಲು ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳುವುದಾಗಿಯೂ ಎಂದು ರಸೆಲ್ ಹೇಳಿದ್ದಾರೆ.

ಸ್ಥಳೀಯ ಮಾಧ್ಯಮದ ವರದಿಯ ಪ್ರಕಾರ, ಅವರ ಕುಟುಂಬದ ಹೋರಾಟವೂ ಇದರೊಂದಿಗೆ ಅಂತ್ಯವಾಗಿದೆ. ಅಲ್ಲದೇ ಅಲನ್‌ ಹಾಲ್‌ ಅವರನ್ನು ಬಂಧಿಸಿದಾಗ ಅವರಿಗೆ 24 ವರ್ಷ.

ಆದರೆ ಈಗ ಅವರು ನಿರಪರಾಧಿಯಾಗಿ, ಮಾಡದ ತಪ್ಪಿಗೆ ಪರಿಹಾರ ಪಡೆಯುವಾಗ ಅಂದರೆ ಈಗ ಅವರಿಗೆ 61 ವರ್ಷ ಎಂಬುದಾಗಿ ಅವರ ಕುಟುಂಬದವರು ಹೇಳಿದ್ದಾರೆ.

ಅಂದಹಾಗೆ ನಮ್ಮಲ್ಲಿಯೂ ಕೂಡ ಅನೇಕ ಕಾರಣಗಳಿಗಾಗಿ ಮಾಡದ ತಪ್ಪಿಗಾಗಿ ಕೆಲವರು ಶಿಕ್ಷೆ ಅನುಭವಿಸುತ್ತಾರೆ. ಕೆಲವು ಕಾನೂನಿನ ತೊಡಕುಗಳಿಂದ ಅಥವಾ ವಿಚಾರಣೆ ತಡವಾಗುವುದರಿಂದ ಆರೋಪಿಯಾದವರು ವರ್ಷಗಟ್ಟಲೇ ಜೈಲಿನಲ್ಲಿ ಕೊಳೆಯುವಂತಾಗುತ್ತದೆ.

ಹಲವಾರು ವರ್ಷದ ನಂತರ ಆ ವ್ಯಕ್ತಿ ನಿರಪರಾಧಿ ಎಂದು ಸಾಬೀತಾದ ಉದಾಹರಣೆಗಳೂ ಇವೆ.

ಆದರೆ ಒಬ್ಬ ನಿರಪರಾಧಿ ಜೈಲಿನಲ್ಲಿ ಕಳೆಯುವ ಸಂದರ್ಭ ನಿಜವಾಗಿಯೂ ಕರುಣಾಜನಕವಾಗಿದೆ. ಕಾನೂನಿನ ಕಟ್ಟಳೆಗಳಿಂದ ಹೊರಬರಲಾರದೇ , ನಿರಪರಾಧಿ ಎಂದು ಸಾಬೀತುಪಡಿಸಲಾಗದೇ ಜೈಲಿನಲ್ಲಿ ಜೀವನ ದೂಡುವ ಅಸಹಾಯಕತೆ ಅವರಿಗೇ ಗೊತ್ತು, ಆದರೆ ಅಲನ್‌ ಹಾಲ್‌ನಂತೆಯೇ ನ್ಯಾಯ ಸಿಗುವವರೆಗೆ ಅಂಥವರ ಅರ್ಧ ಜೀವನ ಮುಗಿದಿರುತ್ತದೆ!

RELATED ARTICLES

ಬ್ಯಾಕ್ ಪ್ಲಿಪ್ ಮಾಡಲು ಹೋಗಿ ಫೇಲ್ ಆದ ಯುವಕ : ‘ಇದರ ಅಗತ್ಯ ಇತ್ತೇ’ ಎಂದ ನೆಟ್ಟಿಗರು ; ವಿಡಿಯೋ ವೈರಲ್.!

ವಿವೇಕವಾರ್ತೆ : ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಕೆಲ ಯುವಕ ಯುವತಿಯರ ಹುಚ್ಚಾಟದ ವಿಡಿಯೋಗಳು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರೈಲಿನ ಬೋಗಿಯೊಳಗೆ ವಿಡಿಯೋ ಚಿತ್ರೀಕರಣದ ನಿಷೇಧದ ಹೊರಾತಗಿಯೂ ಇಂಥ ಪ್ರವೃತ್ತಿಗಳು ಮುಂದುವರೆಯುತಲೇ ಇವೆ. ಆ...

ಕಾರಿಗೆ ಡಿಕ್ಕಿ ಹೊಡೆದ ಲಾರಿ : ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವು..!

ವಿವೇಕವಾರ್ತೆ : ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಕಾರಿಗೆ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾದ ನಡೆದಿದೆ. ಮೃತ ದುರ್ದೈವಿಗಳನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆಕಾಶ್ (20), ಹೇಮಂತ್ (28)...

ಕುಂಬಳಕಾಯಿ ಬೀಜ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು.!

ವಿವೇಕವಾರ್ತೆ : ಕುಂಬಳಕಾಯಿ ಬೀಜಗಳು ತುಂಬಾ ಚಿಕ್ಕದಾಗಿದ್ದರೂ, ನಮ್ಮ ವ್ಯವಸ್ಥೆಗಳು ಅವಲಂಬಿಸಿರುವ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಕುಂಬಳಕಾಯಿಯ ಚಿಕ್ಕ ಬೀಜಗಳು ನಾವು ಅಂದಾಜಿಸುವುದಕ್ಕಿಂತ ಹೆಚ್ಚಿನ ಪೋಷಕಾಂಶಗಳಿಂದ ತುಂಬಿವೆ.‌ ಕುಂಬಳಕಾಯಿ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು...
- Advertisment -

Most Popular

ಗೋಕಾಕ : ಹಣಕಾಸಿನ ವಿಚಾರಕ್ಕೆ ಯೋಧನಿಂದಲೇ ಮತ್ತೋರ್ವ ಯೋಧನ ಮೇಲೆ ಫೈರಿಂಗ್.!

ವಿವೇಕ ವಾರ್ತೆ : ಓರ್ವ ಯೋಧನಿಂದ ಮತ್ತೊಬ್ಬ ಯೋಧನ ಮೇಲೆ ಪೈರಿಂಗ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ರಾಜನಕಟ್ಟಿಯಲ್ಲಿ ನಡೆದಿದೆ. ರಾಜನಕಟ್ಟೆ ಗ್ರಾಮದ ಇಬ್ಬರು ವ್ಯಕ್ತಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ....

ಬ್ಯಾಕ್ ಪ್ಲಿಪ್ ಮಾಡಲು ಹೋಗಿ ಫೇಲ್ ಆದ ಯುವಕ : ‘ಇದರ ಅಗತ್ಯ ಇತ್ತೇ’ ಎಂದ ನೆಟ್ಟಿಗರು ; ವಿಡಿಯೋ ವೈರಲ್.!

ವಿವೇಕವಾರ್ತೆ : ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಕೆಲ ಯುವಕ ಯುವತಿಯರ ಹುಚ್ಚಾಟದ ವಿಡಿಯೋಗಳು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರೈಲಿನ ಬೋಗಿಯೊಳಗೆ ವಿಡಿಯೋ ಚಿತ್ರೀಕರಣದ ನಿಷೇಧದ ಹೊರಾತಗಿಯೂ ಇಂಥ ಪ್ರವೃತ್ತಿಗಳು ಮುಂದುವರೆಯುತಲೇ ಇವೆ. ಆ...

ಕಾರಿಗೆ ಡಿಕ್ಕಿ ಹೊಡೆದ ಲಾರಿ : ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವು..!

ವಿವೇಕವಾರ್ತೆ : ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಕಾರಿಗೆ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾದ ನಡೆದಿದೆ. ಮೃತ ದುರ್ದೈವಿಗಳನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆಕಾಶ್ (20), ಹೇಮಂತ್ (28)...

ಕುಂಬಳಕಾಯಿ ಬೀಜ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು.!

ವಿವೇಕವಾರ್ತೆ : ಕುಂಬಳಕಾಯಿ ಬೀಜಗಳು ತುಂಬಾ ಚಿಕ್ಕದಾಗಿದ್ದರೂ, ನಮ್ಮ ವ್ಯವಸ್ಥೆಗಳು ಅವಲಂಬಿಸಿರುವ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಕುಂಬಳಕಾಯಿಯ ಚಿಕ್ಕ ಬೀಜಗಳು ನಾವು ಅಂದಾಜಿಸುವುದಕ್ಕಿಂತ ಹೆಚ್ಚಿನ ಪೋಷಕಾಂಶಗಳಿಂದ ತುಂಬಿವೆ.‌ ಕುಂಬಳಕಾಯಿ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು...
error: Content is protected !!