ವಿವೇಕ ವಾರ್ತೆ : ಗಲಭೆ ಪೀಡಿತ ರಾಜ್ಯ ಮಣಿಪುರದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ BSF ಯೋಧರರೊಬ್ಬರನ್ನು ಸೇವೆಯಿಂದ ಅಮಾನತು ಮಾಡಿದ ಘಟನೆ ನಡೆದಿದೆ.
ಇನ್ನೂ ಈ ಘಟನೆಯು ಮಣಿಪುರದ ಇಂಫಾಲ್ನಲ್ಲಿ ನಡೆದಿದ್ದು, ಸಸ್ಪೆಂಡ್ ಆದ ಯೋಧ ಸತೀಶ್ ಎಂದು ವರದಿಯಾಗಿದೆ.
ಮಹಿಳೆಗೆ ಕಿರುಕುಳ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯೂ ಜುಲೈ 20ರಂದು ಇಂಫಾಲ್ ಜಿಲ್ಲೆಯ ಪಶ್ಚಿಮ ಭಾಗದಲ್ಲಿ ನಡೆದಿದೆ.
ಈ ಕುರಿತು ಮೊದಲಿಗೆ ಅರೆಸೇನಾ ಪಡೆಗೆ ದೂರು ಬಂದಿತ್ತು ಪರಿಶೀಲನೆ ನಡೆಸಿದ ನಂತರ ಆರೋಪಿಯನ್ನು ತಕ್ಷಣವೇ ಕೆಲಸದಿಂದ ಅಮಾನತು ಮಾಡಲಾಗಿದೆ ಎಂದು ಹಿರಿಯ BSF ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಈಗಾಗಲೇ ಯೋಧನ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆಯು ಸಹ ಆರಂಭವಾಗಿದೆ. ಇಂತಹ ಕೃತ್ಯಗಳು ನೋಡಿಕೊಂಡು ಸುಮ್ಮನೆ ಕೂರುವ ಮಾತಿಲ್ಲ ನ್ಯಾಯಯುತ ತನಿಖೆ ನಡೆಸಿ ಆರೋಪಿಗೆ ಶಿಕ್ಷೆ ಕೊಡಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.
https://twitter.com/THETWITSORM/status/1683527491544129541?ref_src=twsrc%5Etfw%7Ctwcamp%5Etweetembed%7Ctwterm%5E1683527491544129541%7Ctwgr%5Ec1acf5d7102ee82a32e491545e6dbac61411a812%7Ctwcon%5Es1_c10&ref_url=https%3A%2F%2Fapi-news.dailyhunt.in%2F