ಮನೆಯ ಮೇಲಿಂದ ಮರಕ್ಕೆ ಸಾಗಿದ 16 ಅಡಿಯ ದೈತ್ಯ ಹಾವು ; ಶಾಕಿಂಗ್ ವಿಡಿಯೋ ವೈರಲ್.!

Published on

spot_img
spot_img

ವಿವೇಕ ವಾರ್ತೆ : ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಡಿಯೋಗಳನ್ನು ವೈರಲ್ ಆಗುತ್ತಿರುತ್ತವೆ. ಆದರೆ ಈ ರೀತಿಯ ವಿಡಿಯೋ ನೀವು ನೋಡಿರಲು ಸಾಧ್ಯವೇ ಇಲ್ಲ.

ಯಾಕೆಂದರೆ ಈ ವಿಡಿಯೋದಲ್ಲಿ ಇರುವುದು 16 ಅಡಿಯ ದೈತ್ಯ ಹೆಬ್ಬಾವು. ಈ ವಿಡಿಯೋ ವೈರಲ್ ಆಗಿದ್ದು ನೋಡುಗರು ಒಂದು ಕ್ಷಣ ಅಚ್ಚರಿಪಟ್ಟಿದ್ದಾರೆ.

ಮನೆಯ ಛಾವಣಿಯ ಮೇಲಿಂದ ಮರದೊಳಗೆ 5-ಮೀಟರ್ ಹೆಬ್ಬಾವು ತೆವಳುತ್ತಿರುವ ವಿಡಿಯೋ ವೈರಲ್ ಆಗಿದೆ.

ಆಸ್ಟ್ರೇಲಿಯಾದ ಕುಟುಂಬವೊಂದರ ಮನೆಯ ಮೇಲೆ ಈ ದೃಶ್ಯ ಕಂಡುಬಂದಿದೆ. ಈ ದೈತ್ಯ ಹೆಬ್ಬಾವು ಹಲವು ಮೀಟರ್ ಎತ್ತರದ ಛಾವಣಿಗೆ ಅದು ಹೇಗೆ ಪ್ರವೇಶಿಸಿತೋ ಗೊತ್ತಿಲ್ಲ. ಛಾವಣಿಯಿಂದ ಮರಕ್ಕೆ ಮರದಿಂದ ಮತ್ತೊಂದು ಮರಕ್ಕೆ ಸಾಗಿದೆ.

ಊಟಕ್ಕೆ ಕುಳಿತಿದ್ದ ಮನೆಯವರು ಮನೆಯೊಂದರ ಮೇಲಿಂದ ಪಕ್ಕದ ಮರಕ್ಕೆ ಹಾವು ಚಲಿಸುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ. ದೊಡ್ಡ ಸರೀಸೃಪವು ನೋಡುಗರ ಕಡೆಗೆ ತನ್ನ ತಲೆಯನ್ನು ತಿರುಗಿಸಿದಾಗ ಮಗು ಅಳುವುದು ಸಹ ವಿಡಿಯೋದಲ್ಲಿದೆ.

 

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!