ವಿವೇಕ ವಾಣಿ : ಹುಬ್ಬಳ್ಳಿಯ ಬಸವೇಶ್ವರ ನಗರದ ಲಕ್ಷ್ಮೀ ಲೇಔಟ್ ನಲ್ಲಿ ಉಲ್ಲಾಸ್ ದೊಡ್ಮನಿ ಎಂಬುವರ ಮನೆಯಲ್ಲಿ ಬಹುದೊಡ್ಡ ಕಳ್ಳತನ ನಡೆಸಲಾಗಿದೆ.
ಅವರ ಮನೆಯ ಕಿಟಕಿಯ ಕಬ್ಬಿಣದ ಗ್ರಿಲ್ ಕಟ್ ಮಾಡಿದ ಕಳ್ಳರು ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ ಆರೂ ಜನರನ್ನು ಕಟ್ಟಿಹಾಕಿ ಕಳ್ಳತನ ಮಾಡಿದ್ದಾರೆ.
ಸುಮಾರು ಎಂಟು ಜನ ಕಳ್ಳರು ಮನೆಗೆ ನುಗ್ಗಿ ಕೃತ್ಯ ನಡೆಸಿದ್ದಾರೆ. ಸುಮಾರು ಒಂದು ಕೋಟಿ ರೂಪಾಯಿಗೂ ಅಧಿಕ ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿದೆ.
ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಸಂದರ್ಭವನ್ನು ಗುರಿ ಮಾಡಿಕೊಂಡಿರುವ ಕಳ್ಳರು ಈಗ ಮೈದಾನದಲ್ಲಿ ಗಣೇಶ ವಿಸರ್ಜನೆಯ ಜನಸಂದಣಿ ವೇಳೆ ಎಲ್ಲರೂ ಆ ಕಡೆ ಗಮನಹರಿಸಿರುವ ಸಂದರ್ಭದಲ್ಲಿ ಈ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಣೇಶನ ವಿಸರ್ಜನೆಗೆ ಐದು ಸಾವಿರ ಪೊಲೀಸರ ನಿಯೋಜನೆಯ ಆಗಿದೆ. ಈ ಸಂದರ್ಭದಲ್ಲಿ ಹೊಂಚು ಹಾಕಿದ್ದ ಕಳ್ಳರು ಸಮಯ ಸಾಧಿಸಿ ಭಾರಿ ದರೋಡೆ ನಡೆಸಿದ್ದು ಗೋಕುಲ್ ರೋಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.