ವಿವೇಕವಾರ್ತೆ : ಕೆಲವು ಸಮಯದಲ್ಲಿ ಮಾನಸಿಕವಾಗಿ ಎದುರಾಗುವ ಆತಂಕ, ಖಿನ್ನತೆ ಮತ್ತು ಒತ್ತಡ ಇಂದು ಯುವಜನತೆಯಲ್ಲಿ ನೆನಪಿನ ಶಕ್ತಿಯನ್ನು ಕುಂದಿಸುತ್ತಿರುವುದು ನಿಜಕ್ಕೂ ಆಘಾತಕಾರಿ ವಿಚಾರ.
ಕಾರಣಗಳು :
ನಾವೇ ನಮ್ಮ ಜೀವನ ಶೈಲಿಯಲ್ಲಿ ತಂದುಕೊಳ್ಳುವ ಕೆಲವೊಂದು ಬದಲಾವಣೆಗಳು ನಮ್ಮನ್ನು ಆರೋಗ್ಯದ ವಿಚಾರದಲ್ಲಿ ಹಾಳಾಗುವಂತೆ ಮಾಡುತ್ತವೆ.
ಮಾನಸಿಕ ಆರೋಗ್ಯದ ಮೇಲೂ ಕೂಡ ಇದು ತುಂಬಾ ಕೆಟ್ಟ ಪರಿಣಾಮ ಬೀರಿ ಚಿಕ್ಕ ವಯಸ್ಸಿಗೆ ಮರೆವು ಹೆಚ್ಚಾಗುವಂತೆ ಮಾಡುತ್ತದೆ.
* ನೆನಪಿನ ಶಕ್ತಿಯನ್ನು ಕಳೆದುಕೊಳ್ಳಲು ನಿರಂತರವಾಗಿ ಎದುರಾಗುವ ಮಾನಸಿಕ ಆತಂಕ, ಒತ್ತಡ ಮತ್ತು ಮಾನಸಿಕ ಖಿನ್ನತೆಯೂ ಕೂಡ ಕಾರಣ ಎನಿಸಬಹುದು.
* ನಿದ್ರಾಹೀನತೆ ಕಾರಣದಿಂದಾಗಿ ಮೆದುಳಿಗೆ ಸರಿಯಾದ ವಿಶ್ರಾಂತಿ ಸಿಗದೇ ಕೆಲವು ಬದಲಾವಣೆಗಳು ಉಂಟಾಗಿ ಮಾನಸಿಕ ಖಿನ್ನತೆ, ಆತಂಕ ಎದುರಾಗುವುದರ ಜೊತೆಗೆ ಜ್ಞಾಪಕ ಶಕ್ತಿ ಕೂಡ ಕುಂದಿ ಹೋಗುತ್ತದೆ.
* ನಮ್ಮ ದೇಹದಲ್ಲಿ ಥೈರಾಯ್ಡ್ ಗ್ರಂಥಿ ನಮ್ಮ ದೇಹದ ಸಂಪೂರ್ಣ ಬೆಳವಣಿಗೆಯಲ್ಲಿ ತನ್ನ ಪ್ರಭಾವ ಬೀರುತ್ತದೆ. ಅಂದರೆ ಕೆಲವೊಂದು ನಿರ್ದಿಷ್ಟ ಹಾರ್ಮೋನುಗಳನ್ನು ನಮ್ಮ ದೇಹದ ರಕ್ತದ ಹರಿವಿಗೆ ಬಿಡುಗಡೆ ಮಾಡಿ ಮೆಟಬಾಲಿಸಂ, ದೈಹಿಕ ಅಭಿವೃದ್ಧಿ ಇತ್ಯಾದಿಗಳಲ್ಲಿ ತನ್ನ ಕೆಲಸವನ್ನು ಮಾಡುತ್ತಿರುತ್ತದೆ.
ಈ ಕಾರ್ಯಕ್ಷಮತೆಯಲ್ಲಿ ಸ್ವಲ್ಪ ಅಡಚಣೆ ಉಂಟಾದರೆ ಮಾನಸಿಕ ಆರೋಗ್ಯದ ಮೇಲೆ ವಿರುದ್ಧ ರೀತಿಯ ಪರಿಣಾಮ ಬೀರುತ್ತದೆ. ಕೆಲವರಿಗೆ ನೆನಪಿನ ಶಕ್ತಿಯೇ ಹೊರಟು ಹೋಗುವ ಸಾಧ್ಯತೆ ಇರುತ್ತದೆ.
* ಯಥೇಚ್ಛವಾಗಿ ಸೇವನೆ ಮಾಡುವ ಮದ್ಯ, ಮನಸ್ಸಿನ ಹತೋಟಿ ಕಳೆದುಕೊಳ್ಳುವಂತೆ ಮಾಡುತ್ತದೆ. ಈ ಸಂದರ್ಭದಲ್ಲಿ ಅರಿವಿನ ಸಾಮರ್ಥ್ಯ ಮತ್ತು ಜ್ಞಾಪಕ ಶಕ್ತಿ ಕೂಡ ಇಲ್ಲವಾಗುತ್ತದೆ.
* ಕೆಲವೊಂದು ವಿಚಾರಗಳು ನಮಗೆ ವಿಪರೀತ ಮಾನಸಿಕ ಯಾತನೆಯನ್ನು ಉಂಟು ಮಾಡಿ ಯಾವುದೇ ವಿಷಯದ ಮೇಲೆ ನಮ್ಮ ಉತ್ಸಾಹವೇ ಹೊರಟು ಹೋಗುವಂತೆ ಮಾಡುತ್ತವೆ. ಮತ್ತೊಮ್ಮೆ ಅಂತಹ ವಿಚಾರ ನಮ್ಮ ಮುಂದೆ ಬಂದರೂ ಕೂಡ ಅದರ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ.
ಇದು ನಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿ ನಮ್ಮ ಮನಸ್ಸನ್ನು ಕುಗ್ಗಿಸುತ್ತದೆ ಮತ್ತು ನೆನಪಿನ ಶಕ್ತಿಯನ್ನು ಕಡಿಮೆ ಮಾಡುತ್ತದೆ.
* ಅಧಿಕ ರಕ್ತದೊತ್ತಡದ ಸಮಸ್ಯೆಯಿರುವ ಜನರು ತಮ್ಮ ರಕ್ತದ ಒತ್ತಡವನ್ನು ನಿಯಂತ್ರಣ ಮಾಡಿಕೊಳ್ಳಲು ತೆಗೆದುಕೊಳ್ಳುವ ಔಷಧಿಗಳು ಕೆಲವೊಮ್ಮೆ ಮಾನಸಿಕವಾಗಿ ವ್ಯತಿರಿಕ್ತ ಪರಿಣಾಮ ಬೀರುತ್ತವೆ.
ಇದು ಸಾಮಾನ್ಯ ಸಂದರ್ಭಗಳಲ್ಲೂ ಕೂಡ ಹೆಚ್ಚು ಗೊಂದಲಮಯ ವಾತಾವರಣ ನಿರ್ಮಾಣ ಮಾಡಿದಂತೆ ಕಾಣುತ್ತದೆ. ಯಾವುದೇ ಒಂದು ನಿರ್ದಿಷ್ಟ ವಸ್ತುವಿನ ಮೇಲೆ ಅಥವಾ ವಿಷಯದ ಮೇಲೆ ಸರಿಯಾಗಿ ಗಮನ ವಹಿಸಲು ಸಾಧ್ಯ ಆಗುವುದಿಲ್ಲ. ಈ ಸಂದರ್ಭದಲ್ಲಿ ಅರಿವಿನ ಸಮಸ್ಯೆ ಕೂಡ ಎದ್ದು ಕಾಣುತ್ತದೆ.
ಮರೆವಿನ ಕಾಯಿಲೆ ಕಮ್ಮಿ ಮಾಡುವ ಆಹಾರಗಳು :
1) ಮೀನು ತಿನ್ನುವ ಜನರು ತುಂಬಾ ಜಾಣರಾಗಿರುತ್ತಾರೆ. ಇದಕ್ಕೆ ಮೀನು ಗಳಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಅಂಶಗಳು ಹೆಚ್ಚಾಗಿ ಸಿಗುತ್ತವೆ. ಇವು ನೆನಪಿನ ಶಕ್ತಿ ಕುಂದುವ ಸಮಸ್ಯೆಯನ್ನು ದೂರ ಮಾಡುತ್ತವೆ.
2) ಒಣಫಲ ಅಥವಾ ಡ್ರೈ ಫ್ರೂಟ್ಸ್ ಗಳಾದ ನೆನೆಸಿಟ್ಟ ಒಣದ್ರಾಕ್ಷಿ, ಗೋಡಂಬಿ, ನೆನೆಸಿಟ್ಟ ಬಾದಾಮಿ, ಅಕ್ರೋ ಬೀಜಗಳನ್ನು ಪ್ರತಿದಿನ ತಿನ್ನುವುದರಿಂದ ಮೆದುಳಿನ ಶಕ್ತಿ ವೃದ್ಧಿಸುವುದು. ನೆನಪು ಶಕ್ತಿಯು ಕುಂದುವ ಸಮಸ್ಯೆಯ ಲಕ್ಷಣಗಳನ್ನು ಕಡಿಮೆ ಮಾಡುವುದು.
3) ಬೆರ್ರಿ ಹಣ್ಣುಗಳನ್ನು ಪ್ರಬಲ ಆಂಟಿ ಆಕ್ಸಿಡೆಂಟ್ ಅಂಶಗಳು, ವಿಟಮಿನ್ಸ್ ಗಳು ಹಾಗೂ ಖನಿಜಗಳು ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಇವು ಮೆದುಳಿನ ಆರೋಗ್ಯ ವೃದ್ಧಿಗೆ ಹಾಗೂ ಉತ್ತಮ ಅರಿವನ್ನು ಹೊಂದಲು ಸಹಾಯ ಮಾಡುವುದು.
4) ಸೂರ್ಯಕಾಂತಿ ಬೀಜಗಳು, ಅಗಸೆ ಬೀಜಗಳು, ಕುಂಬಳಕಾಯಿ ಬೀಜಗಳಲ್ಲಿ ಉನ್ನತ ಮಟ್ಟದ ಆಂಟಿ ಆಕ್ಸಿ ಡೆಂಟ್ ಗಳ ಜೊತೆಗೆ, ವಿಟಮಿನ್ ಇ, ಒಮೆಗಾ-3, ಹಾಗೂ ಸತು ವಿನ ಅಂಶಗಳು ಅರಿವಿನ ಶಕ್ತಿಯು ಕುಗ್ಗುವುದನ್ನು ತಡೆಯುವುದು.
5) ಮೊಟ್ಟೆಯಲ್ಲಿ ಅಪಾರ ಪ್ರಮಾಣದ ಪ್ರೋಟಿನ್ ಅಂಶ ಕಂಡು ಬರುತ್ತದೆ. ಇದು ಸ್ಮರಣ ಶಕ್ತಿಯನ್ನು ಹೆಚ್ಚು ಮಾಡಿ, ನೆನಪಿನ ಶಕ್ತಿ ಕುಂದುವ ಸಮಸ್ಯೆಯನ್ನು ದೂರ ಮಾಡುತ್ತದೆ.
6) ಹೂಕೋಸು ಹಾಗೂ ಬ್ರಾಕೋಲಿ ಇವು ಬಹುದಳ ತರಕಾರಿಗಳಾಗಿದ್ದು, ಅಧಿಕ ಮಟ್ಟದ ವಿಟಮಿನ್ ಬಿ ಮತ್ತು ಕ್ಯಾರಟ ನಾಯ್ಡ್ ಗಳನ್ನು ಒಳಗೊಂಡಿವೆ. ಇವು ನೆನಪಿನ ಶಕ್ತಿಯು ಕುಂದುವ ಸಮಸ್ಯೆಯನ್ನು ದೂರ ಮಾಡುವುದು.
7) ಪ್ರತಿದಿನ ಮಿತವಾಗಿ ಗ್ರೀನ್ ಟೀ ಕುಡಿಯುವ ಅಭ್ಯಾಸ ಮಾಡಿ ಕೊಳ್ಳಿ. ಯಾಕೆಂದ್ರೆ ಗ್ರೀನ್ ಟೀ ತನ್ನಲ್ಲಿ ಅಪಾರವಾದ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿರುವ ಕಾರಣ, ಮೆದುಳಿನ ಕಾರ್ಯಚಟುವಟಿಕೆ ಹೆಚ್ಚಿಸಲು ನೆರವಾಗುತ್ತದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.