ವಿವೇಕವಾರ್ತೆ: ಆತ ಫುಲ್ ಟೈಟಾಗಿ ತಡ ರಾತ್ರಿ (Night) ಮನೆಗೆ (Home) ಬಂದಿದ್ದ. ರಾತ್ರಿ ಪೂರ್ತಿ ನಿದ್ದೆ ಮಾಡಿ ಬೆಳಗ್ಗೆ ಸ್ನಾನ ಮಾಡಿ ಶಿಸ್ತಾಗಿ ರೆಡಿಯಾಗಿದ್ದ.ಆದರೆ ರಾತ್ರಿ ಏನಾಯ್ತ್ ಅಂತಾ ನೆನಪ್ ಮಾಡ್ಕೊಂಡೋನಿಗೆ ಶಾಕ್ (Shock) ಆಗಿತ್ತು. ಆ ದೃಶ್ಯ ಕಣ್ಣು ಮುಂದೆ ಬರುತ್ತಿದ್ದಂತೆ ಸೀದಾ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಅಷ್ಟಕ್ಕೂ ರಾತ್ರಿ ಅಲ್ಲೇನಾಗಿತ್ತು? ನಾವು ಹೇಳ್ತೀವಿ . ಹೌದು, ಸ್ನೇಹ (Friendship) ಅಂದ್ರೆ ಪ್ರಾಣ, ಸ್ನೇಹ ಅಂದ್ರೆ ಉತ್ಸಾಹ. ಸ್ನೇಹ ಅಂದ್ರೆ ಪ್ರೀತಿ (Love), ವಿಶ್ವಾಸ. ಆದರೆ ಸ್ನೇಹತ್ವವೇ ರಾಕ್ಷಸನಾದಾಗ ಯಾರನ್ನ ನಂಬೋದು. ಇಲ್ಲಿ ಆಗಿರೋದೂ ಕೂಡ ಅದೇ. ನಂಬಿ ಜತೆಯಲ್ಲಿ ಹೋದವನ ಪ್ರಾಣವನ್ನೇ ತೆಗೆದಿದ್ದಾನೆ ಈ ದುಷ್ಟ.
ಕಣ್ಣಿಗೆ ಗಾಗಲ್ ಹಾಕ್ಕೊಂಡು ಕೈಯಲ್ಲಿ ಬೆಕ್ಕಿನ ಮರಿ ಹಿಡಿದುಕೊಂಡು ಪೋಸ್ ಕೊಡುತ್ತಿರುವ ಈತನ ಹೆಸರು ಅಮಾನುಲ್ಲ. ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ, ರಾತ್ರಿ ಸ್ನೇಹಿತ ಚೇತನ್‌ನನ್ನ ಜೊತೆಯಲ್ಲಿ ಕರೆದುಕೊಂಡು ಕೆಂಗೇರಿ ಬಳಿಯ ಕೊಮ್ಮಘಟ್ಟ ಬಳಿಯ ಮೈದಾನದತ್ತ ಹೋಗಿದ್ದಾನೆ. ನಂತರ ಇಬ್ಬರೂ ಸೇರಿ ಎಣ್ಣೆ ಹೊಡೆದಿದ್ದಾರೆ. ಈ ವೇಳೆ ಅಮಾನುಲ್ಲನಲ್ಲಿದ್ದ ರಾಕ್ಷಸ ಹೊರ ಬಂದಿದ್ದಾನೆ.
ಕುಡಿದ ಮತ್ತಿನಲ್ಲಿ ಗೆಳೆಯನ ಜೊತೆ ಕಿರಿಕ್ ತೆಗೆದಿದ್ದ ಅಮಾನುಲ್ಲಾ, ಚೇತನ್ ತಲೆ ಮೇಲೆ ಕಲ್ಲು ಎತ್ತಿ ಹಾಕೇಬಿಟ್ಟಿದ್ದಾನೆ. ಮೊದಲೇ ಎಣ್ಣೆ ಮತ್ತಿನಲ್ಲಿದ್ದ ಚೇತನ್ ಪ್ರತಿರೋದಿಸಲಾಗದೆ ಅಲ್ಲೇ ಪ್ರಾಣ ಬಿಟ್ಟಿದ್ದಾನೆ. ಅಂದಹಾಗೇ, ಈ ಕೇಸ್ ನಲ್ಲಿ ಟ್ವಿಸ್ಟ್ ಏನಂದರೆ ಆರೋಪಿ ಪೊಲೀಸರ ಮುಂದೆ ಕೊಲೆ ಮಾಡಿರುವ ಬಗ್ಗೆ ಹೇಳಿರುವ ವಿಚಾರ. ಚೇತನ್‌ನನ್ನ ಕೊಲೆ ಮಾಡಿದ್ದ ಅಮಾನುಲ್ಲ, ಸೀದಾ ಮನೆಗೆ ಹೋಗಿ ಮಲಗಿದ್ದಾನೆ. ಬೆಳಗ್ಗೆ ಎದ್ದು ನೀಟಾಗಿ ಸ್ನಾನ ಮಾಡಿ ಮನೇಲಿ ಕೂತಿದ್ದವನಿಗೆ ರಾತ್ರಿಯ ಘಟನೆ ನೆನಪಾಗಿ, ಇನ್ನು ನನಗೆ ಉಳಿಗಾಲವಿಲ್ಲ ಅಂತ ಸೀದಾ ಕೆಂಗೇರಿ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಇನ್ನು ಕೊಲೆ ಬಗ್ಗೆ ಬಾಯ್ಬಿಡ್ತಿದ್ದೇ ಆರೋಪಿ ಅಮಾನುಲ್ಲನನ್ನ ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸದ್ಯ ಈ ಕೊಲೆ ಯಾಕೆ ನಡೆದಿದ್ದು ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ. ತನಿಖೆ ನಂತರವೆ ಕೊಲೆಗೆ ಅಸಲಿ ಕಾರಣ ಏನು ಗೊತ್ತಾಗಬೇಕಿದೆ.