ವಿವೇಕ ವಾರ್ತೆ : ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲ್ಲೂಕಿನ ಮಾವನೂರು ಗ್ರಾಮದಲ್ಲಿ ಮದುವೆ ಮಾಡು ಎಂದು ಪೀಡಿಸುತ್ತಿದ್ದ ಮಗನನ್ನು ತಂದೆಯೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾದ ಯುವಕ ಉಮೇಶ್ (35) ಎಂದು ತಿಳಿದುಬಂದಿದೆ. ನಂಜುಂಡೇಗೌಡ ಪುತ್ರನನ್ನು ಕೊಂದ ತಂದೆ.
ಉಮೇಶ್ ಪ್ರತಿನಿತ್ಯ ಕುಡಿದು ಬಂದು ಮದುವೆ ಮಾಡುವಂತೆ ತನ್ನ ತಂದೆ ನಂಜೇಗೌಡ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ.
ಸಂಜೆಯೂ ಕೂಡ ಮನೆಗೆ ಕುಡಿದು ಬಂದ ಉಮೇಶ್ ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದ ನಂಜೇಗೌಡನ ಜೊತೆಗೆ ಜಗಳ ತೆಗೆದಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ತಂದೆ ಮೇಲೆ ಉಮೇಶ್ ಹಲ್ಲೆಗೆ ಮುಂದಾಗಿದ್ದಾನೆ.
ಈ ವೇಳೆ ನಂಜೇಗೌಡ ಚಾರ್ಜೆಬಲ್ ಬ್ಯಾಟರಿಯಿಂದ ತಲೆಗೆ ಬಲವಾಗಿ ಹಲ್ಲೆಮಾಡಿದ್ದಾನೆ. ತೀವ್ರ ರಕ್ತ ಸ್ರಾವದಿಂದ ರಕ್ತದ ಮಡುವಿನಲ್ಲಿ ಬಿದ್ದದ್ದ ಉಮೇಶನನ್ನು ಸ್ನೇಹಿತರು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಈ ವೇಳೆ ದಾರಿ ಮದ್ಯದಲ್ಲೇ ಉಮೇಶ್ ಕೊನೆಯುಸಿರೆಳೆದಿದ್ದಾನೆ.
ಹಲ್ಲೆ ನಡೆಸಿದ ನಂಜೇಗೌಡ ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಹೊಳೆನರಸೀಪುರ ನಗರ ಪೊಲೀಸ್ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.