Monday, October 2, 2023

ಮತ್ತೆ ಶುರುವಾಗಿದೆ ಹೃದಯದ ಮಾತು ಎಂಬ ಆಲ್ಬಮ್ ಹಾಡು ಬಿಡುಗಡೆ.

ವಿವೇಕ ವಾರ್ತೆ : ಕಲೆ ಯಾರೊಬ್ಬರ ಸ್ವತ್ತಲ್ಲ. ಅದಕ್ಕೆ ಯಾವ ಜಾತಿ ಧರ್ಮ ಬಡವ-ಬಲ್ಲಿದ ಎಂಬ ಭೇದ-ಭಾವಗಳಿಲ್ಲ. ಯಾರಲ್ಲಿ ಶ್ರದ್ಧೆ, ಕಲೆಯ ಮೇಲೆ ಪ್ರೀತಿ ಗೌರವ ಇರತ್ತೊ ಅವರು ಮಾತ್ರ ಸಾಧನೆ ಶಿಖಿರ ಏರಲು ಸಾಧ್ಯ. ಅಂತಹದ್ದೇ ಒಂದು ಹಳ್ಳಿ ಪ್ರತಿಭೆ ಮೌನೇಶ್ ರಾಠೋಡ್. ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಾರಾಯಣನಗರ ಕ್ಯಾಂಪಿನ ನಾರಾಯಣಪ್ಪ ಮತ್ತು ಗಂಗಮ್ಮ ದಂಪತಿಗಳ ಕೂಸು ಈ ಮೌನೇಶ್ ರಾಠೋಡ್. ವಿದ್ಯಾರ್ಥಿಯಾಗಿದ್ದಾಗಲೆ ಬಣ್ಣದ ಲೋಕದಲ್ಲಿ  ಮಿನುಗುವ  ಕನಸುಗಳನ್ನು ಕಣ್ಣಾಲೆಗಳಲ್ಲಿ  ತುಂಬಿಕೊಂಡಿದ್ದರು. ಮಾತನ್ನೆ ಬಂಗಾರವಾಗಿಸಿಕೊಂಡು ಖಾಸಗಿ ವಾಹಿನಿಗಳಲ್ಲಿ ನಿರೂಪಕನಾಗಿ ಹೆಸರು  ಮಾಡಿದ್ದಾರೆ.

ಕೆಲಸದ ಒತ್ತಡದ ನಡುವೆಯೂ ತಮ್ಮ ಸಿನಿಮಾ ಕ್ಷೇತ್ರದ ಮೇಲಿನ ಆಸಕ್ತಿಯನ್ನು ತೊರೆಯದೆ ಸತತ ಪ್ರಯತ್ನದ ಫಲವಾಗಿ  *ಪ್ರೀತಿ ಬೆಸೆದ ಕರೋನಾ*.  ಎಂಬ ಮೊದಲ ಕಿರುಚಿತ್ರದ ಮೂಲಕ ಪರದೆ  ಮೇಲೆ ಕಾಣಿಸಿಕೊಂಡರು. ಮುಂದೆ  ಗೆಳೆಯರ ಜೊತೆಗೂಡಿ  ಕಿರುಚಿತ್ರ ಮಾಡಲು ಪ್ರಾರಂಭಿಸಿದರು. *ಒಂದು ಪ್ರೀತಿ ಎರಡು ಕನಸು* ಕಿರುಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿ *ಯಮ ಧರ್ಮರಾಜ* ಕಿರುಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿ ಸೈ ಎನಿಸಿಕೊಂಡರು. ಇವರ ನೈಜ  ಅಭಿನಯ ಕಂಡು ಕಿರುತೆರೆಯಲ್ಲಿ ಮತ್ತಷ್ಟು ಸದಾವಕಾಶ ಒದಗಿಬಂದಿದ್ದೆ. ಅವರ ಅಭಿನಯ ಚಾತುರ್ಯಕ್ಕೆ ಸಾಕ್ಷಿ ಯಾಗಿದೆ.

ಕಾದಂಬರಿ ಕಣಜ, ಅಳಗುಳಿಮನೆ, ರೋಬೊ ಫ್ಯಾಮಿಲಿ, ಸಿಲ್ಲಿ ಲಲ್ಲಿ ಧಾರಾವಾಹಿಗಳಲ್ಲಿ  ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಣ್ಣಪುಟ್ಟ ಅವಕಾಶಗಳಲ್ಲಿಯೇ ಅಭಿನಯ ಯಾನ ಮುಂದೆವರೆಸುತ್ತಾ, “ಇದೀಗ
*ಮತ್ತೆ ಶುರುವಾಗಿದೆ*
_ಹೃದಯದ ಮಾತು_ ಎಂಬ
ಆಲ್ಬಮ್ ಹಾಡಿನ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದು,ಈ ಆಲ್ಬಮ್ ಹಾಡನ್ನು ಈಗ ನಾಡಿನ ಜನತೆ ಮುಂದಿಡಲು  ನಿರ್ಧರಿಸಿದ್ದಾರೆ.

ಈ ಆಲ್ಬಮ್ ಹಾಡಿನಲ್ಲಿ ನಾಯಕಿಯಾಗಿ ಕರಾವಳಿಯ ಕದ್ರಿ ಬೆಡಗಿ ಲಕ್ಷಿತ ಪೂಜಾರಿ ಇವರ ಜೊತೆಯಾಗಿ ಮೌನೇಶ್ ರಾಠೋಡ್ ನಾಯಕನಾಗಿ ಹೆಜ್ಜೆ ಹಾಕಿದ್ದಾರೆ.
ನಿರ್ದೇಶನ:-ಯಲಿಯೂರು ಪಿಳ್ಳೇಗೌಡ
ನಾಯಕ ನಟ:-ಮೌನೇಶ್ ರಾಠೋಡ್ ಮಸ್ಕಿ
ನಾಯಕಿ ನಟಿ:- ಲಕ್ಷಿತ ಪೂಜಾರಿ ಮಂಗಳೂರು
ಛಾಯಾಗ್ರಾಹಕ:-ಅಭಿಲಾಷ್ ಹಾಸನ
ಸಹಾಯಕ:-ಇಂದ್ರ್ ಜಿತ್ ಪವಾರ್ (ಮಸ್ಕಿ)
ಸಾಹಿತ್ಯ ಗಾಯಕ ಸಂಗೀತ ಡಿ.ಕೆ. ಹಣಮಂತು ನಾರಾಯಣಪುರ (ಯಾದಗಿರಿ)
ಸಂಕಲನ:-ಮೋಹನ್ ಬೆಂಗಳೂರು
ನೃತ್ಯ :-ಪ್ರದೀಪ್ ನಂದಿ (ವಿಜಯಪುರ).

ಈ ಹಾಡು ಅತಿಶೀಘ್ರದಲ್ಲಿ ನಿಹಾರಿಕ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಲಿದೆ. ನ್ಯಾಚುರಲ್ ಆಗಿ ಯೂಟ್ಯೂಬ್ ನಲ್ಲಿ ನಮ್ಮ ಯೋಗ್ಯತೆ ಏನಿದಿಯೋ ಅದಕ್ಕಿಂತ ಒಂದಿಷ್ಟು ಚೆನ್ನಾಗಿ ಇಲ್ಲಿ ಚಿತ್ರೀಕರಿಸಿದ್ದೇವೆ, ಕಲರಿಂಗ್,ಹಿನ್ನೆಲೆ ಸಂಗೀತ ನಟನೆ ಹೀಗೆ ಎಲ್ಲವನ್ನು  ಚೆನ್ನಾಗಿ ಮೂಡಿಬಂದಿದೆ  ಇದೀಗ ಅದನ್ನು ಜನರ ಮುಂದೆ ಇಡಲು ನಿರ್ಧರಿಸಿದ್ದೇವೆ ಅದನ್ನು ಜನ ಹೇಗೆ ಸ್ವೀಕರಿಸುತ್ತಾರೆ ನೋಡಬೇಕು, ಈ ಹಾಡನ್ನು ಸಿನಿಮಾ ಫೀಲ್ ಅಲ್ಲೇ ತೆಗೆದುಕೊಂಡು ಹೋಗಿದ್ದೇವೆ, ನಮ್ಮ ಪ್ರಕಾರ ನಾವಿನ್ನು ಯಶಸ್ವಿ ಮುಟ್ಟಿಲ್ಲ ಯೂಟ್ಯೂಬ್ ನಲ್ಲಿ ಎಲ್ಲರ ಪ್ರೀತಿ ಗಳಸಿದ್ದೇವೆ ಇದೀಗ ಇನ್ನೊಂದು  ಹೊಸ ಹೆಜ್ಜೆ ಇಟ್ಟಿದ್ದೇವೆ . ಜನರು ಹೇಗೆ ನಮ್ಮನ್ನು ಸ್ವೀಕರಿಸ್ತಾರೆ  ನೋಡಬೇಕು. ದುಡ್ಡು ಬರುತ್ತೆ ಅನ್ನೋ ಕಾರಣಕ್ಕೆ ಈ ಹಾಡನ್ನು ನಾವು ಮಾಡಿಲ್ಲ ಇದು ಮನಸ್ಸಿನಿಂದ ಮಾಡಿದ ಕೆಲಸ. ಸ್ವಚ್ಛ ಮನಸ್ಸಿನಿಂದ ಗೆಲ್ಬೇಕು ಅಷ್ಟೇ,ಜನ ನಮ್ಮನ್ನು ಅದ್ಯಾವ ಮಟ್ಟಿಗೆ ತೆಗೆದುಕೊಂಡು ಹೋಗ್ತಾರೆ ಅನ್ನೋದು ಕಾದು  ನೋಡಬೇಕಿದೆ’

RELATED ARTICLES

ರಿಷಬ್ ಬಾಲಿವುಡ್‌ ಎಂಟ್ರಿ ಫಿಕ್ಸ್: ನಿರ್ದೇಶಕರು ಯಾರು? ಕಥೆ ಏನು? ಇಲ್ಲಿದೆ ಡಿಟೈಲ್ಸ್

ವಿವೇಕವಾರ್ತೆ : 'ಕಾಂತಾರ' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ ರಿಷಬ್ ಶೆಟ್ಟಿ ಈಗ ಬಾಲಿವುಡ್‌ಗೆ ಪಾದಾರ್ಪಣೆ ಕೊಡುತ್ತಿದ್ದಾರೆ. ಸದ್ಯ 'ಕಾಂತಾರ' ಸಿನಿಮಾದಲ್ಲಿ ಡಿವೈನ್ ಸ್ಟಾರ್ ಬ್ಯುಸಿಯಾಗಿದ್ದು ಆ ಬಳಿಕ ಹಿಂದಿ...

ʻಟೋಬಿʼ ಚೆನ್ನಾಗಿಲ್ಲ ಅಂದಿದ್ದಕ್ಕೆ ಮಹಿಳೆಗೆ ಅವಾಚ್ಯ ನಿಂದನೆ ; ವ್ಯಕ್ತಿಯ ವಿರುದ್ಧ ನೆಟ್ಟಿಗರ ಆಕ್ರೋಶ.!

ವಿವೇಕ ವಾರ್ತೆ : ರಾಜ್‌ ಬಿ ಶೆಟ್ಟಿ ಅಭಿನಯದ ಟೋಬಿ ಸಿನಿಮಾ ನಿನ್ನೆ (ಅ.25) ಬಿಡುಗಡೆಗೊಂಡಿದ್ದು, ಕೆಲವರು ಸಿನಿಮಾವನ್ನು ಹೊಗಳಿದರೆ ಇನ್ನು ಕೆಲವರು ಚಿತ್ರ ನಿರೀಕ್ಷಿಸಿದ ಮಟ್ಟಕ್ಕೆ ಇಲ್ಲ‌. ಒಮ್ಮೆ ನೋಡಬಹುದು ಎಂದು...

ಅತ್ಯಾಚಾರ, ಬ್ಲ್ಯಾಕ್‌ಮೇಲ್: ಕನ್ನಡದ ಖ್ಯಾತ ನಟ ಬಂಧನ

ವಿವೇಕವಾರ್ತೆ : ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ, ಅದರ ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಹಣ ಹಾಗೂ ಚಿನ್ನಾಭರಣ ಸುಲಿಗೆ ಮಾಡಿದ್ದ ಆರೋಪದಡಿ ಸಿನಿಮಾ ನಟ ವೀರೇಂದ್ರ ಬಾಬುನನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು...
- Advertisment -

Most Popular

ಸವದತ್ತಿ ರೇಣುಕಾದೇವಿ ಹುಂಡಿ ಹಣ ಎಣಿಕೆ : 40 ದಿನದಲ್ಲಿ ಭಕ್ತರು ನೀಡಿದ ಕಾಣಿಕೆ ಹಣವೆಷ್ಟು ಗೊತ್ತೇ.?

ವಿವೇಕ ವಾರ್ತೆ : ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಶನಿವಾರ ಹುಂಡಿ ಎಣಿಕೆ ಕಾರ್ಯ ನಡೆಯಿತು. ಇನ್ನು 40 ದಿನಗಳ ಅವಧಿಯಲ್ಲಿ ಬರೋಬ್ಬರಿ 1.03 ಕೋಟಿ ರೂ. ಮೌಲ್ಯದ ಕಾಣಿಕೆ...

ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದಕ್ಕೆ 4ನೇ ಅಂತಸ್ತಿನಿಂದ ಜಿಗಿದ ಬಾಲಕಿ : ದೃಶ್ಯ ಕ್ಯಾಮರಾದಲ್ಲಿ ಸೆರೆ.!

ವಿವೇಕವಾರ್ತೆ : ಓರ್ವ ವಿದ್ಯಾರ್ಥಿನಿ ಜನವಸತಿ ಕಟ್ಟಡದ 4ನೇ ಅಂತಸ್ತಿನಿಂದ ಜಿಗಿದಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ಶನಿವಾರ ನಡೆದಿದೆ. ಬಲ್ಲ ಮೂಲಗಳ ಪ್ರಕಾರ, ವಿದ್ಯಾರ್ಥಿನಿ 12 ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣವಾಗಿದ್ದು, ಇದರಿಂದ ಮಾನಸ್ಸಿಕವಾಗಿ...

ಅರ್ಧ ವಾರ್ಷಿಕ ಪರೀಕ್ಷೆ ಬರೆಯುವ ವೇಳೆ ಹೃದಯಾಘಾತಕ್ಕೆ 15ರ ಬಾಲಕ ಬಲಿ.!

ವಿವೇಕ ವಾರ್ತೆ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ಪರೀಕ್ಷೆ ಬರೆಯುತ್ತಿದ್ದ ವೇಳೆಯೇ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಪರೀಕ್ಷೆ ಬರೆಯುವ ವೇಳೆ ಮೃತನಾದ ದುರ್ದೈವಿ ಬಾಲಕನನ್ನು ರಾಹುಲ ಕೋಲಕಾರ...

ಕಾಂಗ್ರೆಸ್ ಗುಲಾಮರೇ. ನಿನ್ನ ಅಮ್ಮ ಎಲ್ಲಿಂದ ಬಂದವರು? : ಅಕ್ಬರುದ್ದೀನ್ ಓವೈಸಿ ವಿವಾದಾತ್ಮಕ ಹೇಳಿಕೆ

ವಿವೇಕವಾರ್ತೆ: ಕಾಂಗ್ರೆಸ್ ಗುಲಾಮರೇ ನಿಮ್ಮ ಅಮ್ಮ (ಸೋನಿಯಾ ಗಾಂಧಿ) ಎಲ್ಲಿಂದ ಬಂದವರು? ನೀವು ಬಿಜೆಪಿಯ ಬಿ ಟೀಂ ಎಂದು ಎಐಎಂಐಎಂ ಮುಖಂಡ ಅಕ್ಬರುದ್ದೀನ್ ಓವೈಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾವು...
error: Content is protected !!