ವಿವೇಕವಾರ್ತೆ: ಅಫಜಲಪೂರ ತಾಲೂಕಿನ ಗೊಬ್ಬುರ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ.ಎಸ್ ಆರ್ ರಂಗನಾಥನ್ ಅವರ ಜನ್ಮ ದಿನದ ನಿಮಿತ್ಯವಾಗಿ ರಾಷ್ಟ್ರೀಯ ಗ್ರಂಥಪಾಲಕರ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಝಾಖಿರ್ ಹುಸೇನ್ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ಮಕ್ಕಳು ಮೊಬೈಲ್, ಟಿವಿ ಇತ್ಯಾದಿ ದೃಶ್ಯ ಮಾಧ್ಯಮಗಳಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಇದು ಅವರ ಜೀವನ ಮತ್ತು ಭವಿಷ್ಯದ ಮೇಲೆ ನಕರಾತ್ಮಕ ಪರಿಣಾಮ ಬೀರುವ ಸಂಭವ ಹೆಚ್ಚು, ಜೊತೆಗೆ ಇದರಿಂದ ಅವರಲ್ಲಿ ಪುಸ್ತಕ ಓದುವ ಹವ್ಯಾಸವು ಕೂಡಾ ಕಡಿಮೆ ಆಗ್ತಾ ಇದೆ ಆದ್ದರಿಂದ ಮಕ್ಕಳೂ ಈ ವಾತಾವರಣದಿಂದ ಹೊರಬಂದು ಮೊಬೈಲ್ ಗೀಳನ್ನು ಬಿಟ್ಟು ಪುಸ್ತಕ ಓದುವ ಗೀಳನ್ನು ರೂಢಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಗ್ರಂಥಪಾಲಕರಾದ ವನಮಾಲಾ ಮಠಪತಿ, ಅಥಿತಿಗಳಾಗಿ ಆಗಮಿಸಿದ ಶ್ರೀ ಶಿವಾನಂದ ಕೌದಿ, ಶಾಲೆಯ ಶಿಕ್ಷಕರಾದ ಗುರಪ್ಪ , ಕರುಣಾಕರ್ ಕುಲಕರ್ಣಿ, ನಿಲಮ್ಮ , ಚಂದ್ರಕಲಾ ,ವಿಜಯಲಕ್ಷಿ ಶಾಲಿನಿ, ಸುವರ್ಣರಾಣಿ, ಕೈಸರ್ ನಾಗಮ್ಮ ಪಂಚಾಳ, ಶಿವಲಿಲಾ ಗಣೆಚಾರಿ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು
ವರದಿ; ಅಪ್ಪಾರಾಯ ಬಡಿಗೇರ