spot_img
spot_img
spot_img
spot_img
spot_img
spot_img

ಭೀಕರ ಅಗ್ನಿ ಅವಘಡ : 10 ಜನರ ಸಾವು.!

Published on

spot_img

ವಿವೇಕ ವಾರ್ತೆ : ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ 10 ಜನ ಸಜೀವ ದಹನವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾದ್ಯತೆ ಇದೆ ಎನ್ನಲಾಗಿದೆ.

ಒಟ್ಟು 20 ಕಾರ್ಮಿಕರ ಪೈಕಿ ನಾಲ್ವರು ಪಾರಾಗಿದ್ದಾರೆ. ಅವರಲ್ಲಿ 10 ಜನ ಮೃತಪಟ್ಟಿದ್ದು, ಉಳಿದವರಿಗಾಗಿ ಹುಡುಕಾಟ ಮುಂದುವರೆದಿದೆ.

ಪಟಾಕಿ ಮಳಿಗೆಗೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆಗೆ ಪಟಾಕಿ ಮಳಿಗೆ ಹೊತ್ತಿ ಉರಿದಿದೆ. ಬಾನೆತ್ತರಕ್ಕೆ ಬೆಂಕಿಯ ಹೊಗೆ ಆವರಿಸಿದ್ದು, ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಕರ್ನಾಟಕ ತಮಿಳುನಾಡು ಗಡಿಯ ಅತ್ತಿಬೆಲೆ ಬಳಿಯ ಬಾಲಾಜಿ ಪಟಾಕಿ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅಕಸ್ಮಿಕವಾಗಿ ಬೆಂಕಿ ತಗುಲಿದ್ದು, ವಾಹನದಿಂದ ಪಟಾಕಿ ಆನ್​ಲೋಡ್ ಮಾಡುವಾಗ ದುರ್ಘಟನೆ ನಡೆದಿದ್ದು, ಗೋಡನ್​ ವರೆಗೂ ವ್ಯಾಪಿಸಿ ಬೆಂಕಿ ಜ್ವಾಲೆ ಹೆಚ್ಚಾಗಿದೆ.

ಎರಡು ವಾಹನಗಳು ಸುಟ್ಟು ಕರಕಲಾಗಿದ್ದು, ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....

ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ: ಮಹಿಳೆ ಅರೆಬೆತ್ತಲೆಗೊಳಿಸಿ ಹಲ್ಲೆ ಆರೋಪ

ವಿವೇಕವಾರ್ತೆ, ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ಬಹಿರಂಗವಾಗಿದೆ. ಒತ್ತುವರಿ ಪ್ರಶ್ನಿಸಿದ್ದಕ್ಕೆ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ...

Goat milk: ಮೇಕೆ ಹಾಲು ತಾಯಿ ಹಾಲಿನಷ್ಟೇ ಶ್ರೇಷ್ಠ: ನಾನಾ ಆರೋಗ್ಯ ಸಮಸ್ಯೆಗಳಿಗೆ ಇದರಲ್ಲಿದೆ ಪರಿಹಾರ..!

ಮಾರುಕಟ್ಟೆಯಲ್ಲಿ ಮೇಕೆ ಹಾಲಿಗೆ (Goat Milk) ಭಾರೀ ಡಿಮ್ಯಾಂಡ್ ಬಂದು ಬಹಳ ವರ್ಷಗಳೇ ಕಳೆಯಿತು. ಆದರೂ ಈ ಹಾಲಿನ...

ನಿಮ್ಮ ದೇಹದಲ್ಲಿ ಈ ಬದಲಾವಣೆ ಕಂಡು ಬಂದರೆ ಲಿವರ್ ಡ್ಯಾಮೇಜ್ ಎಂದರ್ಥ!

ಇತ್ತೀಚಿನ ದಿನಗಳಲ್ಲಿ ಹದಗೆಡುತ್ತಿರುವ ಜನರ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಬಹುತೇಕ ಜನರಲ್ಲಿ ಲಿವರ್ ಸಂಬಂಧಿತ ಸಮಸ್ಯೆಗಳು ಕಂಡುಬರುತ್ತಿವೆ. ನಿಮ್ಮ...
error: Content is protected !!