Tuesday, September 26, 2023

ಭಾವೈಕ್ಯತೆಯಿಂದ ಆಚರಿಸುವ ಹಬ್ಬ ಮೊಹರಂ : ವಿಶೇಷ ಲೇಖನ

ವಿವೇಕವಾರ್ತೆ-ಇದು ಮುಸ್ಲಿಮರ ಹೊಸ ವರ್ಷದ ಪ್ರಾರಂಭ ಮುಸ್ಲಿಮರು ಆಚರಿಸಲ್ಪಡುವ ಪ್ರಮುಖ ಹಬ್ಬಗಳಲ್ಲಿ ಮುಹರಮ್ ಕೂಡ ಒಂದು. ಹತ್ತು ದಿನಗಳ ಕಾಲ ಮುಹರಮ್ ಹಬ್ಬವನ್ನು ಆಚರಿಸುತ್ತಾರೆ. ಶಿಯಾ ಮುಸ್ಲಿಮರು ಆಚರಿಸುವ ಪ್ರಮುಖ ಹಬ್ಬ ಮುಹರಮ್ ಆಗಿದೆ. ಅಲ್ಲದೇ ಹಿಂದೂ ಮುಸ್ಲಿಮರು ಭಾವೈಕ್ಯತೆಯಿಂದಲೂ ಈ ಹಬ್ಬದಲ್ಲಿ ಪಾಲ್ಗೊಂಡು ಸೌಹಾರ್ದತೆಯಿಂದ ಆಚರಿಸಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಮುಹರಮ್ ಹಬ್ಬವನ್ನು ಬಾಬಯ್ಯ ಹಬ್ಬ ಎಂದು ಕರೆಯುತ್ತಾರೆ.

ಮುಹರಮ್ ಒಂದು ತಿಂಗಳ ಹೆಸರಾಗಿದ್ದು ಇಸ್ಲಾಮಿಕ್ ಮುಸಲ್ಮಾನರ ಹಿಜರಿ ಕ್ಯಾಲೆಂಡರ್ ಪ್ರಕಾರ ಮೊದಲನೇ ತಿಂಗಳು. ಮುಸ್ಲಿಮರಿಗೆ ಇದು
ಹೊಸ ವರ್ಷ
ದುಖಃದಿಂದ ಗೌರವದಿಂದ ಮುಹರಮ್ ಹಬ್ಬವನ್ನು ಆಚರಿಸುತ್ತಾರೆ . ಮುಹರಮ್ ಎಂಬುವುದು ಅರೇಬಿಕ್ ಪದವಾಗಿದ್ದು “ನಿಷಿದ್ಧ” ಎಂಬ ಅರ್ಥವನ್ನು ಸೂಚಿಸುತ್ತದೆ. ಈ ತಿಂಗಳಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳು ಮಾಡಲು ಸೂಕ್ತವಾಗಿರೂದಿಲ್ಲ. ಮುಹರಂ 9 ತಾಸೂಆ ಮತ್ತು 10 ನೇ ಆಶುರಾ ದಿನದಂದು ಉಪವಾಸವಿರೂದು ಮತ್ತು ಸತ್ಕರ್ಮಗಳನ್ನು ವೃದ್ಧಿ ಗೊಳಿಸೂದು ಮನೆ ಹಾಗೂ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಈ ತಿಂಗಳ ವಿಶೇಷತೆ.

ಆದರೆ ಆಚಾರ ಕ್ಕಿಂತಲೂ ಅನಾಚಾರವು ಮುಹರಮ್ ಹೆಸರಿನಲ್ಲಿ ನಡೆಯೂದು ಬಹಳ ಖೇದಕರ ಹಾಗೂ ವಿಷಾದನೀಯ ಸಂಗತಿ. ಮುಹರಮ್ ತಿಂಗಳ ಆಚರಣೆಗೆ ಬಹಳ ದುಖಃಕರವಾದ ಸಂಗತಿ ಮತ್ತು ಐತಿಹಾಸಿಕ ಘಟನೆಗಳೂ ಇದೆ. ಪ್ರವಾದಿ ಪೈಗಂಬರ್ ಮುಹಮ್ಮದ್ ಮುಸ್ತಫಾ ಸ.ಅ ರವರ ಮಗಳಾದ ಫಾತಿಮಾ ಬೀವಿ ಹಾಗೂ ನಾಲ್ಕನೇ ಖಲೀಫರಾಗಿದ್ದ ಇಮಾಮ್ ಅಲಿ ರ.ಅ ಈ ದಂಪತಿಗಳ ಮಕ್ಕಳಾದ ಇಮಾಮ್ ಹಸನ್ ಮತ್ತು ಹುಸೈನ್ ದರ್ಮ ಪ್ರಚಾರಕ್ಕಾಗಿ ಶತ್ರುವಿನ ಮುಂದೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿ ಕರ್ ಬಲಾ ಮಣ್ಣಿನಲ್ಲಿ ಶಹೀದರಾದ ದಿನವಾಗಿದೆ ಮುಹರಮ್ ಹತ್ತು ಈ ಘಟನೆಯ ನೆನಪು ಮತ್ತು ಸ್ಮರಣೆಯೇ ಈ ಆಚರಣೆಯ ಪ್ರಮುಖ ಉದ್ದೇಶ. ಹಬ್ಬ ಎಂದ ಕೂಡಲೇ ಎಲ್ಲರೂ ಸಂತೋಷ ಮೂಡುತ್ತದೆ ಆದರೆ ಮೊಹರಂ ಹಬ್ಬದ ಆಚರಣೆ ದುಖಃದ ಪ್ರತೀಕ. ವರ್ಷಗಳ ಹಿಂದೆ ನಡೆದ ಒಂದು ದುರಂತ ಕಥೆಯೇ ಇದಕ್ಕೆ ಕಾರಣ.

ಮುಹರಂ ತಿಂಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸೂದು, ಶೋಕಾಚರಣೆಗಳಲ್ಲಿ ತೊಡಗಿಕೊಳ್ಳೂದು, ಮತ್ತು ಸಾರ್ವಜನಿಕ ಆಚರಣೆಗಳನ್ನು ಮಾಡುತ್ತಾರೆ, ಈ ವೇಳೆ ಆಲಾಯಿ ಕುಣಿತ, ಮುಹರಮ್ ಪದಗಳು ಹಾಡುವುದು, ದೇವರ ಕುಣಿತ, ಬೆಂಕಿಯಲ್ಲಿ ನಡೆದಾಡುವುದು ಸೇರಿದಂತೆ ಕೆಲವು ಆಚರಣೆಯನ್ನು ಮಾಡಲಾಗುತ್ತೆ. ಮುಹರಮ್ ಹೆಸರಿನಲ್ಲಿ ನಡೆಯುವ ಈ ಎಲ್ಲಾ ಆಚರಣೆಗಳು ಸಾಂಪ್ರದಾಯಿಕವಾಗಿ ನಡೆಸಲ್ಪಡುತ್ತಾ ಬಂದಿದೆ ಹೊರತು ಇದಕ್ಕೆ ಯಾವುದೇ ಧಾರ್ಮಿಕವಾದ ಪುರಾವೆಗಳು ಇಲ್ಲ. ನಮ್ಮ ನಾಡಿನ ಹಲವೆಡೆ ಜಾತಿ ಮತ ಧರ್ಮ ಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ಮುಹರಮ್ ಆಚರಿಸೂದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಒಂದು ಪದ್ಧತಿ ಇದನ್ನು ಶಾಂತಿ ಸೌಹಾರ್ದತೆಯ ಸಂಕೇತ ಎಂದರೂ ತಪ್ಪಾಗಲಾರದು.

ರಾಯಚೂರ ಜಿಲ್ಲೆಯ ಮುದಗಲ್ಲ ಗ್ರಾಮದಲ್ಲಿ ಮೊಹರಂ ಆಚರಣೆಯಲ್ಲಿ ಮುಸ್ಲಿಮೇತರರೇ ಹೆಚ್ಚಾಗಿ ಭಾಗವಹಿಸುತ್ತಾರೆ. ಹರಕೆ ಹೊತ್ತ ಹಿಂದೂ- ಮುಸ್ಲಿಮರು ಹುಲಿ ವೇಷ, ಅಳ್ಳಳ್ಳಿ ಬಪ್ಪಾ ವೇಷ ಹಾಕಿ ಕುಣಿದು ಕುಪ್ಪಳಿಸುತ್ತಾರೆ. ಕಂದೂರಿ ಮಾಡಿ ಎಡೆ ನೀಡಿ ಮನಸ್ಸಿಗೆ ನೆಮ್ಮದಿ
ತಂದುಕೊಳ್ಳುತ್ತಾರೆ. ದೀರ್ಘ ದಂಡ ನಮಸ್ಕಾರ ಹಾಕಿ ಧನ್ಯರಾಗುತ್ತಾರೆ. ಹತ್ತನೆಯ ದಿನ ಹೊರಡುವ ಕಾಸೀಮ ಅಲಂ ಮತ್ತು ಹಸನ ಅಲಂ ಒಂದಕ್ಕೊಂದು ಭೇಟಿಯಾದಾಗ ನೆರೆದ ಜನ ಸಾಮೂಹ ತೇರಿನ ಮೇಲೆ ಹಣ್ಣುಕಾಯಿ ಎಸೆಯುವಂತೆ ಸೂರ ಮಾಡಿ ಭಯ ಭಕ್ತಿಯಿಂದ ಕೈಮುಗಿದು ತೃಪ್ತರಾಗುತ್ತಾರೆ. ಹಿಂದುಗಳ ಜಾತ್ರೆಯ ಸಂಭ್ರಮವನ್ನು ನೆನಪಿಸುವ ಮುದಗಲ್ಲ ಮುಹರಂ ಪ್ರಚಲಿತವಾಗಿದೆ.

ಹೊಸಪೇಟೆಯ ರಾಮುಲಸ್ವಾಮಿ
ಇಂದಿಗೂ ಸರ್ವರ ಇಷ್ಟಾರ್ಥಗಳನ್ನು ಪೂರೈಸುವ ಪುಣ್ಯಕ್ಷೇತ್ರೋತ್ಸವವೆಂದೇ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಕೂಡಿಸುವ ಮೌಲಾಲಿ ಅಲಮ್ ಗಳಿಗೆ ಹಿಂದೂ ಮುಸ್ಲಿಮರು ರಾಮುಲಸ್ವಾಮಿ ಎಂದೇ ಕರೆಯುತ್ತಾರೆ. ಒಂಬತ್ತನೆಯ ದಿನ ರಾತ್ರಿ ಎಡೆ ಕೊಡುವಾಗ ಉಪ್ಪನ್ನು ಒಯ್ದು ಅಲಾವಿಯಲ್ಲಿ ಚೆಲ್ಲಿ ಹುರುಕು ಕಜ್ಜಿಗಳನ್ನು ವಾಸಿ ಮಾಡಿಕೊಳ್ಳುತ್ತಾರೆ.

ಕೋಲಾರ ಜಿಲ್ಲೆಯ ನಾಗಸಂದ್ರದ ಮೊಹರಂ ಬಾಬಯ್ಯನ ಹಬ್ಬವೆಂದೇ ಪ್ರಸಿದ್ದಿ ಪಡೆದಿದೆ. ಧಾರವಾಡ ಜಿಲ್ಲೆಯ ಯರಗುಪ್ಪಿ ಗ್ರಾಮದ ಮೊಹರಂ ಸುತ್ತ ಹತ್ತು ಹಳ್ಳಿಗಳಲ್ಲಿ ಮುಹರಮ್ ಜಾತ್ರೆಯೆಂದೇ ಹೆಸರಾಗಿದೆ. ಊರಿನ ಹಿಂದೂ- ಮುಸ್ಲಿಮರು ವಿಶೇಷವಾಗಿ ಬ್ರಾಹ್ಮಣರು ತಮ್ಮ ಶಕ್ತಾನುಸಾರ ದೇವರ ಚಾಕರಿ ಮಾಡುತ್ತಾರೆ. ಹರಕೆ ತೀರಿಸುತ್ತಾರೆ.

ಗದಗ ಬೆಟಗೇರಿಯಲ್ಲಿ ನಡೆಯುವ ಮುಹರಮ್ ಮೆರವಣಿಗೆಯಲ್ಲಿ ಹಿಂದೂ- ಮುಸ್ಲಿಂ ಭಕ್ತರು ಪಾಲ್ಗೊಂಡು ಮೈ ತುಂಬಿದ ದೇವರಿಂದ ಮಳೆ ಬೆಳೆ ಕುರಿತು ಹೇಳಿಕೆ- ಕೇಳಿಕೆ ಮಾಡುತ್ತಾರೆ. ಸೊಟಕನ ಹಾಳದ ಡೋಲಿ ಮತ್ತು ಕೈ ದೇವರು ದ್ಯಾಮವ್ವನ ಗುಡಿಗೆ ಭೇಟಿಯಿತ್ತಾಗ ಊರ ಜನ ಇಮಾಮ ಹುಸೇನರು ತಂಗಿ ದ್ಯಾಮವ್ವನ ದರ್ಶನಕ್ಕೆ ಬಂದಿದ್ದಾರೆಂದೇ ತಿಳಿಯುತ್ತಾರೆ. ಹೀಗೆ ರಾಜ್ಯದ ಹಲವು ಗ್ರಾಮ ಪ್ರದೇಶಗಳಲ್ಲಿ ಮತ್ತು ದೇಶ ವಿದೇಶಗಳಲ್ಲಿ ಮುಹರಮ್ ಆಚರಣೆಯು ವಿಜ್ರಂಭಣೆಯಿಂದ ಆಚರಿಸುತ್ತಾರೆ.
ಒಟ್ಟಿನಲ್ಲಿ ಮುಹರಮ್ ಆಚರಣೆಯ ಹೆಸರಿನಲ್ಲಿ ನಡೆಯುವ ಅನಾಚಾರಗಳು ಅನಾಹುತಗಳಿಗೆ ಕಾರಣವಾಗದಿರಲಿ ಶಾಂತಿ ಸೌಹಾರ್ದತೆ ಸಂತೋಷ ಸಾರೂದೇ ಎಲ್ಲಾ ಹಬ್ಬದ ಮೂಲ ಉದ್ದೇಶ.

ಹಾಶಿಂ ಬನ್ನೂರು (ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ.ರಿ ರಾಜ್ಯ ಪ್ರಧಾನ ಕಾರ್ಯದರ್ಶಿ)

RELATED ARTICLES

PM Narendra Modi Horoscope: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಜಾತಕ ವಿಶ್ಲೇಷಣೆ

ವಿವೇಕವಾರ್ತೆ : 2028ರ ಜೂನ್ ವೇಳೆಗೆ ನರೇಂದ್ರ ಮೋದಿ ಅವರ ಜನ್ಮ ಜಾತಕದ ಪ್ರಕಾರ ಕುಜ-ರಾಹು ಸಂಧಿ ಕಾಲ (ಅಂದರೆ ಕುಜ ದಶೆ ಮುಗಿದು ರಾಹು ದಶೆ ಆರಂಭ ಆಗುವ ಕಾಲ). ಇದು...

ಶನಿವಾರದ ದಿನ ಅಪ್ಪಿತಪ್ಪಿಯೂ ಈ 5 ಕೆಲಸಗಳನ್ನು ಮಾಡಬೇಡಿ..!

ವಿವೇಕವಾರ್ತೆ :  ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿ ವಾರದ ಏಳು ದಿನಕ್ಕೂ ಒಬ್ಬ ದೇವರಿಗೆ ಮೀಸಲಿಡಲಾಗುತ್ತದೆ. ಅದರಂತೆ ಶನಿವಾರ ಶನೇಶ್ವರ (ಶನೀಶ್ವರ) ದಿನ. ಈ ಶನಿವಾರದ ಸ್ವಭಾವವು ಭೀಕರವಾಗಿದೆ. ಧರ್ಮಗ್ರಂಥಗಳ ಪ್ರಕಾರ ಶನಿವಾರವನ್ನು...

ಇದೇ ದಿನ ಗಣೇಶ ಚೌತಿ ಹಬ್ಬ…! ಇಲ್ಲಿದೆ ಸಂಪೂರ್ಣ ಕ್ಲಾರಿಟಿ..!

ವಿವೇಕವಾರ್ತೆ : ಈ ಬಾರಿ ಗಣೇಶನ ಹಬ್ಬವನ್ನು ಸೋಮವಾರ ಆಚರಿಸಬೇಕೆ ಅಥವಾ ಮಂಗಳವಾರ ಆಚರಿಸಬೇಕಾ ಅನ್ನುವ ಗೊಂದಲವಿದೆ. ದೃಕ್ ಪಂಚಾಂಗವನ್ನು ಅನುಸರಿಸುವವರು ಸೆ.19 (ಮಂಗಳವಾರ) ಹಬ್ಬ ಆಚರಿಸುತ್ತಾರೆ. ಸೂರ್ಯ ಸಿದ್ಧಾಂತದ ಪಂಚಾಂಗವನ್ನು ಫಾಲೋ...
- Advertisment -

Most Popular

ಗೋಕಾಕ : ಹಣಕಾಸಿನ ವಿಚಾರಕ್ಕೆ ಯೋಧನಿಂದಲೇ ಮತ್ತೋರ್ವ ಯೋಧನ ಮೇಲೆ ಫೈರಿಂಗ್.!

ವಿವೇಕ ವಾರ್ತೆ : ಓರ್ವ ಯೋಧನಿಂದ ಮತ್ತೊಬ್ಬ ಯೋಧನ ಮೇಲೆ ಪೈರಿಂಗ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ರಾಜನಕಟ್ಟಿಯಲ್ಲಿ ನಡೆದಿದೆ. ರಾಜನಕಟ್ಟೆ ಗ್ರಾಮದ ಇಬ್ಬರು ವ್ಯಕ್ತಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ....

ಬ್ಯಾಕ್ ಪ್ಲಿಪ್ ಮಾಡಲು ಹೋಗಿ ಫೇಲ್ ಆದ ಯುವಕ : ‘ಇದರ ಅಗತ್ಯ ಇತ್ತೇ’ ಎಂದ ನೆಟ್ಟಿಗರು ; ವಿಡಿಯೋ ವೈರಲ್.!

ವಿವೇಕವಾರ್ತೆ : ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಕೆಲ ಯುವಕ ಯುವತಿಯರ ಹುಚ್ಚಾಟದ ವಿಡಿಯೋಗಳು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರೈಲಿನ ಬೋಗಿಯೊಳಗೆ ವಿಡಿಯೋ ಚಿತ್ರೀಕರಣದ ನಿಷೇಧದ ಹೊರಾತಗಿಯೂ ಇಂಥ ಪ್ರವೃತ್ತಿಗಳು ಮುಂದುವರೆಯುತಲೇ ಇವೆ. ಆ...

ಕಾರಿಗೆ ಡಿಕ್ಕಿ ಹೊಡೆದ ಲಾರಿ : ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವು..!

ವಿವೇಕವಾರ್ತೆ : ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಕಾರಿಗೆ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾದ ನಡೆದಿದೆ. ಮೃತ ದುರ್ದೈವಿಗಳನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆಕಾಶ್ (20), ಹೇಮಂತ್ (28)...

ಕುಂಬಳಕಾಯಿ ಬೀಜ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು.!

ವಿವೇಕವಾರ್ತೆ : ಕುಂಬಳಕಾಯಿ ಬೀಜಗಳು ತುಂಬಾ ಚಿಕ್ಕದಾಗಿದ್ದರೂ, ನಮ್ಮ ವ್ಯವಸ್ಥೆಗಳು ಅವಲಂಬಿಸಿರುವ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಕುಂಬಳಕಾಯಿಯ ಚಿಕ್ಕ ಬೀಜಗಳು ನಾವು ಅಂದಾಜಿಸುವುದಕ್ಕಿಂತ ಹೆಚ್ಚಿನ ಪೋಷಕಾಂಶಗಳಿಂದ ತುಂಬಿವೆ.‌ ಕುಂಬಳಕಾಯಿ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು...
error: Content is protected !!