ವಿವೇಕ ವಾರ್ತೆ : ನಾಲ್ಕು ಪಥದ ರಸ್ತೆಯಲ್ಲಿ ವಿಮಾನವೊಂದು ಪತನಗೊಂಡ ಘಟನೆ ಮಲೇಷ್ಯಾದಲ್ಲಿ ನಡೆದಿದೆ. ಇನ್ನೂ ದುರ್ಘಟನೆಯಲ್ಲಿ ವಿಮಾನದಲ್ಲಿದ್ದ ಎಂಟು ಮಂದಿ, ಹೆದ್ದಾರಿಯಲ್ಲಿದ್ದ ಇಬ್ಬರು ವಾಹನ ಸವಾರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ವಿಮಾನವು ನೆಲದ ಮೇಲೆ ಅಪ್ಪಳಿಸಿ ಭೀಕರವಾಗಿ ಸ್ಫೋಟಗೊಂಡಿತು. ಈ ವೇಳೆ ಬೆಂಕಿಯ ಚೆಂಡಿನಂತೆ ಗೋಚರಿಸಿತ್ತು. ಸ್ವಲ್ಪ ಸಮಯದ ನಂತರ, ಭಗ್ನಾವಶೇಷದಿಂದ ಕಪ್ಪು ಹೊಗೆಯು ಕಾಣಿಸಿಕೊಂಡಿತು.
ಇನ್ನು ಈ ಅವಘಡದಲ್ಲಿ ಕಾರಿನಲ್ಲಿದ್ದ ಒಬ್ಬರು, ಓರ್ವ ಬೈಕ್ ಸವಾರ ಹಾಗೂ ವಿಮಾನದಲ್ಲಿದ್ದ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಪಹಾಂಗ್ ರಾಜ್ಯದ ರಾಜ್ಯ ಅಸೆಂಬ್ಲಿ ಸದಸ್ಯ ಜೋಹರಿ ಹರುನ್ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಮಾನವು ಉತ್ತರದ ರೆಸಾರ್ಟ್ ದ್ವೀಪವಾದ ಲಂಕಾವಿಯಿಂದ ಹೊರಟು ರಾಜಧಾನಿ ಕೌಲಾಲಂಪುರ್‌ನ ಪಶ್ಚಿಮದಲ್ಲಿರುವ ಸುಲ್ತಾನ್ ಅಬ್ದುಲ್ ಅಜೀಜ್ ಷಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು ಎಂದು ವರದಿಯಿಂದ ತಿಳಿದುಬಂದಿದೆ.
ವಿಮಾನವು ಪತನಗೊಂಡಾಗ ಆರು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿಗಳಿದ್ದರು ಎಂದು ಮಲೇಷ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ ಎಂದು ವರದಿಯಾಗಿದೆ.
https://twitter.com/aviationbrk/status/1692207061998715311?t=RXNXfkfcJK-Cyx6cKz1_1A&s=19