ವಿವೇಕವಾರ್ತೆ : ಇತ್ತಿಚೀನ ದಿನಗಳಲ್ಲಿ ಪ್ರಾಣಿಗಳ ಬಗೆಗಿನ ವಿಧ ವಿಧವಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಲೇ ಇರುತ್ತವೆ.
ಸದ್ಯ ಈಗ ಅಂತಹದೇ ಒಂದು ವಿಡಿಯೋ ವಾಟ್ಸ್ ಆಫ್ ನಲ್ಲಿ ತುಂಬಾನೇ ಹರಿದಾಡುತ್ತಿದೆ.
ಗಣೇಶ ಚತುರ್ಥಿಯ ಈ ಶುಭ ಸಂದರ್ಭದಲ್ಲಿ ಗಣೇಶನ ವಾಹನವಾದ “ಇಲಿ”ಯೊಂದು ಭಜನೆ ಮಾಡುವ ವಿಡಿಯೋ ವೈರಲ್ ಆಗಿದೆ.
ಧ್ವನಿ ವರ್ಧಕದಲ್ಲಿ ಬರುವ ಹಾಡೊಂದಕ್ಕೆ ಈ ಪುಟ್ಟ ಇಲಿ ಭಜನೆ ಮಾಡುತ್ತಿರುವುದು ವಿಡಿಯೋದಲ್ಲಿದ್ದು, ಇಲಿಯ ಈ ರೀತಿಯ ವರ್ತನೆ ಎಲ್ಲರನ್ನು ಆಶ್ಚರ್ಯಗೊಳಿಸುತ್ತದೆ.
ಈ ವಿಡಿಯೋ ಎಲ್ಲಿ, ಯಾವಾಗ ಮತ್ತು ಯಾರು ಮಾಡಿ ಹರಿಬಿಟ್ಟರೋ ಗೊತ್ತಿಲ್ಲ. ಆದರೆ ಇಲಿಯ ಈ ಭಜನೆ ಮಾಡುವ ರೀತಿ ಮಾತ್ರ ಮಾತ್ರ ಭರ್ಜರಿಯಾಗಿದೆ.