ವಿವೇಕ ವಾರ್ತೆ : ಯುವ ಮಾಡೆಲ್, ನಟಿ, ಟಿವಿ ನಿರೂಪಕಿ, ಸೋಷಿಯಲ್ ಮಿಡಿಯಾದ ಸ್ಟಾರ್ ಆಗಿದ್ದ ಅರ್ಜೆಂಟಿನಾ ಸಿಲ್ವಿನಾ ಲೂನಾ ಪ್ಲಾಸ್ಟಿಕ್ ಸರ್ಜರಿ ಮಾಡುವಾಗ ಆದ ತೊಂದರೆಯಿಂದಾಗಿ ಮೃತಪಟ್ಟಿದ್ದಾರೆ.
ಅವರ ವಕೀಲ ಫರ್ನಾಂಡೋ ಈ ಸಾವನ್ನು ದೃಢಪಡಿಸಿದ್ದಾರೆ. ವೆಂಟಿಲೇಟರ್ ಸಪೋರ್ಟ್ನಲ್ಲಿದ್ದ ಸಿಲ್ವಿನಾ ಸಾವನ್ನಪ್ಪಿದ್ದಾರೆ.
ಸಿಲ್ವಿನಾ ಸಾವು ಅವರ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.
ನಟಿಗೆ ಕಿಡ್ನಿ ಕಸಿ ಮಾಡಲಾಗಿತ್ತು. ಕಾರಣ ವಾರದಲ್ಲಿ ಮೂರು ಡಯಾಲಿಸಿಸ್ ಸೆಷನ್ ಇತ್ತು. ಪ್ರತಿ ಸೆಷನ್ ಕೂಡಾ 4 ಗಂಟೆಗಳ ಕಾಲ ನಡೆಯುತ್ತಿತ್ತು.
ನಟಿ ಬ್ಯಾಕ್ ಸರ್ಜರಿ ಮಾಡಿಸಿಕೊಂಡಿದ್ದರು. ಅದರ ಪರಿಣಾಮವಾಗಿ ಸಾವು ಸಂಭವಿಸಿದೆ ಎಂಬ ಸುದ್ದಿಯೂ ಕೇಳಿ ಬಂದಿದೆ. ಆದರೆ ಈ ಬಗ್ಗೆ ದೃಢ ಮಾಹಿತಿ ವರದಿಯಾಗಿಲ್ಲ.
ಚಿಕ್ಕ ವಯಸ್ಸಿನಲ್ಲಿಯೇ ನಟಿ ಮೃತಪಟ್ಟಿರುವ ಸುದ್ದಿ ಕೇಳಿ ನೆಟ್ಟಿಗರು ಕೂಡಾ ಶಾಕ್ ಆಗಿದ್ದಾರೆ. ಇದು ಸರ್ಜರಿ ಮಾಡಿಸಿಕೊಳ್ಳುವ ಯುವ ನಟಿಯರಿಗೂ ಶಾಕ್ ಕೊಟ್ಟಿದೆ