ವಿವೇಕವಾರ್ತೆ : ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಕೆಲ ಯುವಕ ಯುವತಿಯರ ಹುಚ್ಚಾಟದ ವಿಡಿಯೋಗಳು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರೈಲಿನ ಬೋಗಿಯೊಳಗೆ ವಿಡಿಯೋ ಚಿತ್ರೀಕರಣದ ನಿಷೇಧದ ಹೊರಾತಗಿಯೂ ಇಂಥ ಪ್ರವೃತ್ತಿಗಳು ಮುಂದುವರೆಯುತಲೇ ಇವೆ.
ಆ ಗುಂಪಿಗೆ ಹೊಸ ಸೇರ್ಪಡೆ ಎಂಬಂತೆ ಯುವಕನೋರ್ವ ಬ್ಯಾಕ್ಫ್ಲಿಪ್ ಸ್ಟಂಟ್ ಮಾಡಲು ಹೋಗಿ ವಿಫಲವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುವಕನ ಈ ಬ್ಯಾಕ್ಫ್ಲಿಪ್ ಸ್ಟಂಟ್ ನೋಡಿದ ನೆಟಿಗರು ಸಾಕಷ್ಟು ಟೀಕೆಗಳನ್ನು ಮಾಡಿದ್ದಾರೆ. ಅಲ್ಲದೇ ಬ್ಯಾಕ್ಫ್ಲಿಪ್ ಸ್ಟಂಟ್ ಮಾಡುವ ಅವಶ್ಯಕತೆಯಾದರೂ ಏನಿತ್ತು ಎಂದು ಹಲವರು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣವಾದ “X” ಖಾತೆಯಲ್ಲಿ ಈ ವಿಡಿಯೋವನ್ನು “ಚಮನ್ ಬ್ಯಾಕ್ಫ್ಲಿಪರ್” ಎಂಬುವವರು ಹಂಚಿಕೊಂಡಿದ್ದು, ‘ಮೆಟ್ರೋ ಮೇ ಚೋಟ್ ಲಗ್ ಗೈ’ (ಮೆಟ್ರೋದಲ್ಲಿ ಗಾಯಗೊಂಡಿದ್ದೇನೆ) ಎಂದು ಬರೆದುಕೊಂಡಿದ್ದಾರೆ.
ಯುವಕನ ಈ ಹುಚ್ಆಟಕ್ಕೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ನೀನು ಈ ರೀತಿಯ ಅಧಿಕ ಪ್ರಸಂಗತನದ ಕೆಲಸಗಳನ್ನು ಮಾಡುವ ಬದಲು ಸುಮ್ಮನೆ ಇರುವುದೇ ಲೇಸು ಎಂದಿದ್ದಾರೆ. ಇನ್ನು ಕೆಲ ನೆಟ್ಟಿಗರು ಈ ರೀತಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದನ್ನು ಆಕ್ಷೇಪಿಸಿದ್ದಾರೆ.
ಹಾಗೇಯೇ ಕಲವರು ಇಂತಹ ವ್ಯಕ್ತಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮಾಡುವುದು ಅಪಾಯಕಾರಿ ಎಂದಿದ್ದಾರೆ. ಗೊತ್ತಿಲ್ಲದ ಸಾಹಸಕ್ಕೆ ಕೈ ಹಾಕಬೇಡಿ, ಹೀಗೆ ಯಾರು ಸುಮ್ಮನೆ ಮೂರ್ಖರಂತೆ ವರ್ತಿಸಬೇಡಿ ಎಂದು ಹಲವರು ವೈರಲ್ ವಿಡಿಯೋಗೆ ಕಮೆಂಟ್ ಮಾಡಿ ಕಿಡಿಕಾರಿದ್ಧಾರೆ.
https://twitter.com/darkking_main/status/1705757487838957654?ref_src=twsrc%5Etfw%7Ctwcamp%5Etweetembed%7Ctwterm%5E1705757487838957654%7Ctwgr%5E30085cd402905cce8a2ac205c8d760db8831c6c1%7Ctwcon%5Es1_c10&ref_url=https%3A%2F%2Fapi-news.dailyhunt.in%2F