ವಿವೇಕವಾರ್ತೆ ಬೆಳಗಾವಿ- ಇಲ್ಲಿನ ಪೀರನವಾಡಿಯ ನಿರ್ಜನ ಪ್ರದೇಶದಲ್ಲಿ ಗುರುವಾರ ರಾತ್ರಿ ಯುವಕನ ಕೊಲೆ ಮಾಡಲಾಗಿದೆ. ಹಳೆಯ ದ್ವೇಷವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಪೀರನವಾಡಿಯ ಅರ್ಬಾಜ್ ರಫೀಕ್ ಮುಲ್ಲಾ (26) ಕೊಲೆಗೀಡಾದವರು. ಪ್ರಸಾದ ನಾಗೇಶ ವಡ್ಡರ ಹಾಗೂ ಪ್ರಶಾಂತ ರಮೇಶ ಕರ್ಲೇಕರ ಆರೋಪಿಗಳು.ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ನಾಲ್ಕು ವರ್ಷದ ಹಿಂದೆ ಅರ್ಬಾಜ್ ಮುಲ್ಲಾ ಎಂಬಾತನ ಮನೆ ಎದುರು ಪ್ರಸಾದ ವಡ್ಡರ ಉಗುಳಿದ್ದ. ಇದರಿಂದ ಅರ್ಬಾಜ್ ಹಾಗೂ ಪ್ರಸಾದನ ಮಧ್ಯೆ ದ್ವೇಷ ಇತ್ತು. ಆಗಾಗ ಇಬ್ಬರೂ ಜಗಳವಾಡುತ್ತಿದ್ದರು. 15 ದಿನಗಳ ಹಿಂದೆ ಪ್ರಸಾದನನ್ನು ಮುಗಿಸುವುದಾಗಿ ಅರ್ಬಾಜ್ ಬೆದರಿಕೆ ಹಾಕಿದ್ದ. ಇದರಿಂದ ದ್ವೇಷ ಮತ್ತಷ್ಟು ಹೆಚ್ಚಾತ್ತು. ಇಬ್ಬರ ನಡುವಿನ ವೈಷಮ್ಯ ಪರಿಹರಿಸುವುದಾಗಿ ಹೇಳಿ ಗುರುವಾರ ರಾತ್ರಿ ಮದ್ಯ ಸೇವನೆ ಮಾಡುತ್ತ ಕುಳಿತಿದ್ದರು. ಆಗ ಮತ್ತೆ ಜಗಳ ವಿಕೋಪಕ್ಕೆ ಹೋಗಿ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.