ವಿವೇಕ ವಾರ್ತೆ : ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಬಳಿಯ ನಿಪ್ಪಾಣಿ-ಮೂಧೋಳ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ದ್ವಿಚಕ್ರ ಮತ್ತು ಕಾರ್ ಮಧ್ಯೆ ನಡುವೆ ಅಪಘಾತ ಸಂಭವಿಸಿದೆ.
ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಸಾವಿಗೀಡಾದ ಯುವಕ ರಬಕವಿ-ಬನಹಟ್ಟಿ ತಾಲೂಕಿನ ಕೆಸರಗೋಪ್ಪ ಗ್ರಾಮದ ದ್ವಿಚಕ್ರ ಸವಾರ ಬಸವರಾಜ ಶ್ರೀಶೈಲ್ ಸಸಾಲಟ್ಟಿ (18) ಎಂದು ಹೇಳಲಾಗುತ್ತಿದೆ.
ಈತ ಶಿಕ್ಷಣಕ್ಕಾಗಿ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ದೊಡ್ಡಮ್ಮನ ಮನೆಯಲ್ಲಿ ವಾಸಗಿದ್ದನು.
ಚಿಂತಾಜನಕ ಸ್ಥಿತಿಯಲ್ಲಿ ಇರುವ ಯುವಕನನ್ನು ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಸಂದೀಪ ಇಂಗಳಗಾವಿ (18) ಎಂದು ಗುರುತಿಸಲಾಗಿದೆ. ಇತನನ್ನು ಮೂಡಲಗಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇತನು ಸಾವನಪ್ಪಿರುವ ಬಗ್ಗೆ ತಿಳಿದು ಬಂದಿದೆ.
ಇಬ್ಬರು ಮೂಡಲಗಿ ಪಟ್ಟಣದ ಸಾಯಿ ಕಾಲೇಜದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಾಗಿದ್ದು, ತಮ್ಮ ಶಿಕ್ಷಣದ ದಾಖಲಾತಿ ಪಡೆಯಲು ಮೂಡಲಗಿಗೆ ತೆರಳಿ, ಮರಳಿ ಮನೆಗೆ ಹೋಗುವಾಗ ನಡೆದ ಘಟನೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.