ವಿವೇಕವಾರ್ತೆ : ಇಲ್ಲಿನ ಜಿಲ್ಲಾ ಪೊಲೀಸ್ ವಸತಿ ಸಮುಚ್ಛಯದ ಮನೆಯೊಂದರಲ್ಲಿ ಗೃಹಿಣಿ ಶುಕ್ರವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೀಲಾ ಮಡಿವಾಳಪ್ಪ ಬಾಳಿಕಾಯಿ (40) ಸಾವಿಗೆ ಶರಣಾದವರು. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ.
ಮಡಿವಾಳಪ್ಪ ಅವರು ಬೈಲಹೊಂಗಲ ಠಾಣಾ ವ್ಯಾಪ್ತಿಯ ಇಂಜಲಿಜೆನ್ಸ್ ವಿಭಾಗದ ಎಎಸ್‌ಐ ಆಗಿದ್ದಾರೆ.
ಅವರು ಶುಕ್ರವಾರ ಬೆಳಿಗ್ಗೆ ಕರ್ತವ್ಯಕ್ಕೆ ತೆರಳಿದ ನಂತರ ಘಟನೆ ನಡೆದಿದೆ. ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.