Wednesday, September 27, 2023

ಬೆಳಗಾವಿ: ನಿಧಿ ಸಿಕ್ಕಿದೆ ಎಂದು ಯಾಮಾರಿಸಿ 12 ಲಕ್ಷ ರೂಪಾಯಿ ದೊಚಿದ ಖದೀಮರು..!

ವಿವೇಕವಾರ್ತೆ : ಅಸಲಿ ಬಂಗಾರವೆಂದು ನಂಬಿಸಿ ನಕಲಿ ಚಿನ್ನ ಕೊಟ್ಟು ಬೆಳಗಾವಿ ಮೂಲದ ವ್ಯಕ್ತಿಯೊಬ್ಬರಿಗೆ ₹ 12 ಲಕ್ಷ ವಂಚನೆ ಮಾಡಿರುವ ಘಟನೆಯ ಬಗ್ಗೆ ಭಾನುವಾರ ದೂರು ನೀಡಲಾಗಿದೆ.

ಬೆಂಗಳೂರಿನ ಕಗ್ಗಲೀಪುರದಲ್ಲಿ ವಾಸವಿರುವ ಬೆಳಗಾವಿ ಜಿಲ್ಲೆಯ ವಡೇರಹಟ್ಟಿ ಗ್ರಾಮದ ಲಕ್ಕಪ್ಪ ಹೋಳ್ಕರ್ ವಂಚನೆಗೆ ಒಳಗಾದವರು.

ಕುಮಾರ ಮತ್ತು ಪ್ರಕಾಶಪ್ಪ ವಂಚಿಸಿರುವ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಲಕ್ಕಪ್ಪ ಅವರಿಗೆ ಆರೋಪಿಗಳಾದ ಮಾರುತಿ ಮತ್ತು ಪ್ರಕಾಶಪ್ಪ ಆಗಾಗ ಕರೆ ಮಾಡಿ ಮಾತನಾಡುತ್ತಿದ್ದರು. ಜೂನ್ 28 ರಂದು ಕರೆ ಮಾಡಿದ್ದಾಗ ನಮ್ಮ ಮನೆ ಪಾಯ ತೆಗೆಯುವಾಗ ಹಳೆಯ ಚಿನ್ನ ಸಿಕ್ಕಿದೆ, ನಮಗೆ ಹಣ ಅಗತ್ಯವಿರುವುದರಿಂದ ಕಡಿಮೆ ಬೆಲೆಗೆ 3 ಕೆ.ಜಿ. ಬಂಗಾರ ಮಾರಾಟ ಮಾಡುವುದಾಗಿ ಆಮಿಷ ಒಡ್ಡಿದ್ದರು. ಇದನ್ನು ನಂಬಿದ ಲಕ್ಕಪ್ಪ ಸಂಬಂಧಿ ವಿಠಲ್ ಜೊತೆ ಆರೋಪಿಗಳು ತಿಳಿಸಿದ್ದ ತಾಲ್ಲೂಕಿನ ಹಾರಕನಾಳ ರಸ್ತೆ ಮೈಲಾರ ಲಿಂಗೇಶ್ವರ ದೇವಸ್ಥಾನದ ಬಳಿ ಜುಲೈ 1 ರಂದು ಆಗಮಿಸಿದ್ದರು. ಅಲ್ಲಿ ಆರೋಪಿಗಳು ಆರಂಭದಲ್ಲಿ ಎರಡು ಬಿಲ್ಲೆ ಕೊಟ್ಟು ಪರೀಕ್ಷೆ ಮಾಡಿಸಿಕೊಂಡು ಬರುವಂತೆ ತಿಳಿಸಿದರು. ಅದರಂತೆ ಪಟ್ಟಣಕ್ಕೆ ತೆರಳಿ ಪರೀಕ್ಷಿಸಿದಾಗ ಬಿಲ್ಲೆಗಳು ಅಸಲಿ ಎಂಬುದು ಗೊತ್ತಾಗಿದೆ.

ಉಳಿದಿರುವ 3 ಕೆ.ಜಿ.ಯು ಅಸಲಿ ಎಂದು ನಂಬಿ ₹12 ಲಕ್ಷ ನಗದು ಹಣ ಕೊಟ್ಟು ಬಂಗಾರ ಪಡೆದುಕೊಂಡು ತಮ್ಮ ಗ್ರಾಮಕ್ಕೆ ತೆರಳಿದರು. ಅಲ್ಲಿಗೆ ಹೋಗಿ ಪರೀಕ್ಷಿಸಿದಾಗ ನಕಲಿ ಎಂಬುದು ಗೊತ್ತಾಗಿದ್ದು, ಆರೋಪಿಗಳನ್ನು ಪತ್ತೆ ಮಾಡುವಂತೆ ವಂಚನೆಗೆ ಒಳಗಾದವರು ದೂರು ಸಲ್ಲಿಸಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.

RELATED ARTICLES

ಗೋಕಾಕ : ಹಣಕಾಸಿನ ವಿಚಾರಕ್ಕೆ ಯೋಧನಿಂದಲೇ ಮತ್ತೋರ್ವ ಯೋಧನ ಮೇಲೆ ಫೈರಿಂಗ್.!

ವಿವೇಕ ವಾರ್ತೆ : ಓರ್ವ ಯೋಧನಿಂದ ಮತ್ತೊಬ್ಬ ಯೋಧನ ಮೇಲೆ ಪೈರಿಂಗ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ರಾಜನಕಟ್ಟಿಯಲ್ಲಿ ನಡೆದಿದೆ. ರಾಜನಕಟ್ಟೆ ಗ್ರಾಮದ ಇಬ್ಬರು ವ್ಯಕ್ತಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ....

ಸಹಾಯಕ ಸರಕಾರಿ ವಕೀಲರಾಗಿ ಆಯ್ಕೆಯಾದ ಮಹಾವೀರ ಗಂಡವ್ವಗೋಳ ಅವರಿಗೆ ಕನ್ನಡ ಸೇನೆಯಿಂದ ಸತ್ಕಾರ

ವಿವೇಕವಾರ್ತೆ :ಕರ್ನಾಟಕ ಸರ್ಕಾರದ ಅಭಿಯೋಜನೆಯ ಇಲಾಖೆಯಲ್ಲಿ ಸಹಾಯಕ ಸರಕಾರಿ ಅಭಿಯೋಜನೆಕಾರರು-ವ- ಸಹಾಯಕ ಸರಕಾರಿ ವಕೀಲರು (APP) ಆಯ್ಕೆ ಆಗಿ ಬೆಳಗಾವಿ ಜಿಲ್ಲೆಯ ನ್ಯಾಯಾಲಯದಲ್ಲಿ ಅಭಿಯೋಜನೆಕಾರರಾಗಿ ಆಯ್ಕೆಯಾದ ಮಹಾವೀರ ಗಂಡವ್ವಗೋಳ ಅವರಿಗೆ ಕನ್ನಡ ಸೇನೆ...

ಬೆಳಗಾವಿ : ಲಾಡ್ಜ್​​ನಲ್ಲಿ ವೈಶ್ಯಾವಾಟಿಕೆ ದಂಧೆ ; ಇಬ್ಬರು ಯುವತಿಯರ ರಕ್ಷಣೆ.!

ವಿವೇಕವಾರ್ತೆ : ಜಿಲ್ಲೆಯ  ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಲಾಗಿದೆಂದು ಮಾಹಿತಿ ಲಭ್ಯವಾಗಿದೆ. ಕುಡಚಿ ಪಟ್ಟಣದ ಲಾಡ್ಜ್ ಒಂದರಲ್ಲಿ...
- Advertisment -

Most Popular

ಗೋಕಾಕ : ಹಣಕಾಸಿನ ವಿಚಾರಕ್ಕೆ ಯೋಧನಿಂದಲೇ ಮತ್ತೋರ್ವ ಯೋಧನ ಮೇಲೆ ಫೈರಿಂಗ್.!

ವಿವೇಕ ವಾರ್ತೆ : ಓರ್ವ ಯೋಧನಿಂದ ಮತ್ತೊಬ್ಬ ಯೋಧನ ಮೇಲೆ ಪೈರಿಂಗ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ರಾಜನಕಟ್ಟಿಯಲ್ಲಿ ನಡೆದಿದೆ. ರಾಜನಕಟ್ಟೆ ಗ್ರಾಮದ ಇಬ್ಬರು ವ್ಯಕ್ತಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ....

ಬ್ಯಾಕ್ ಪ್ಲಿಪ್ ಮಾಡಲು ಹೋಗಿ ಫೇಲ್ ಆದ ಯುವಕ : ‘ಇದರ ಅಗತ್ಯ ಇತ್ತೇ’ ಎಂದ ನೆಟ್ಟಿಗರು ; ವಿಡಿಯೋ ವೈರಲ್.!

ವಿವೇಕವಾರ್ತೆ : ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಕೆಲ ಯುವಕ ಯುವತಿಯರ ಹುಚ್ಚಾಟದ ವಿಡಿಯೋಗಳು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರೈಲಿನ ಬೋಗಿಯೊಳಗೆ ವಿಡಿಯೋ ಚಿತ್ರೀಕರಣದ ನಿಷೇಧದ ಹೊರಾತಗಿಯೂ ಇಂಥ ಪ್ರವೃತ್ತಿಗಳು ಮುಂದುವರೆಯುತಲೇ ಇವೆ. ಆ...

ಕಾರಿಗೆ ಡಿಕ್ಕಿ ಹೊಡೆದ ಲಾರಿ : ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವು..!

ವಿವೇಕವಾರ್ತೆ : ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಕಾರಿಗೆ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾದ ನಡೆದಿದೆ. ಮೃತ ದುರ್ದೈವಿಗಳನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆಕಾಶ್ (20), ಹೇಮಂತ್ (28)...

ಕುಂಬಳಕಾಯಿ ಬೀಜ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು.!

ವಿವೇಕವಾರ್ತೆ : ಕುಂಬಳಕಾಯಿ ಬೀಜಗಳು ತುಂಬಾ ಚಿಕ್ಕದಾಗಿದ್ದರೂ, ನಮ್ಮ ವ್ಯವಸ್ಥೆಗಳು ಅವಲಂಬಿಸಿರುವ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಕುಂಬಳಕಾಯಿಯ ಚಿಕ್ಕ ಬೀಜಗಳು ನಾವು ಅಂದಾಜಿಸುವುದಕ್ಕಿಂತ ಹೆಚ್ಚಿನ ಪೋಷಕಾಂಶಗಳಿಂದ ತುಂಬಿವೆ.‌ ಕುಂಬಳಕಾಯಿ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು...
error: Content is protected !!