ವಿವೇಕ ವಾರ್ತೆ: ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಹೊರ ವಲಯದ ಗಡ್ಡೆ ಸಮೀಪದ ಕೃಷ್ಣಾ ನದಿ ದಡದ ಮೇಲೆ ಕುಳಿತಿದ್ದ ವೇಳೆ ಕಾಲುಜಾರಿ ಓರ್ವ ನೀರುಪಾಲಾಗಿದ್ದು, ಇಬ್ಬರನ್ನು ರಕ್ಷಿಸಿದ ಘಟನೆ ನಡೆದಿದೆ.
ನೀರುಪಾಲಾದವರು ಬೆಳಗಾವಿ ನಗರದ ಗಾಂಧಿ ನಗರದ ನಿವಾಸಿ ಹುಸೇನ್ ಅರಕಟ್ಟೆ ಎಂದು ತಿಳಿದುಬಂದಿದೆ.
ಭಾನುವಾರ ಕುಟುಂಬ ಸಮೇತ ಗಡ್ಡೆಯ ಸಿರಾಜುದ್ದೌಲ ದರ್ಗಾಗೆ ಹೋಗಿದ್ದರು. ಈ ವೇಳೆ ನದಿ ದಡದಲ್ಲಿ ಹುಸೇನ್ ಸೇರಿ ಮೂವರು ಕುಳಿತಿದ್ದರು. ಆದರೆ ಮೂವರಲ್ಲಿ ಹುಸೇನ್ ಕಾಲು ಜಾರಿ ನೀರಿಗೆ ಬಿದ್ ಇನ್ನಿಬ್ಬರ ಕೈ ಹಿಡಿದಿದ್ದ. ಹೀಗಾಗಿ ಮೂವರು ನೀರಲ್ಲಿ ಕೊಚ್ಚಿ ಹೋಗುತ್ತಿದ್ದರು. ಕೂಡಲೇ ಸ್ಥಳೀಯರು ಸಹಾಯಕ್ಕೆ ಧಾವಿಸಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ.
ಹುಸೇನ್‌ಗಾಗಿ ಶೋಧಕಾರ್ಯ ನಡೆಯುತ್ತಿದ್ದು, ಸ್ಥಳೀಯ ಮೀನುಗಾರರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕುಡಚಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.