ಬೀದಿಗೆ ಬಿದ್ಧ ಶ್ರೀಮಂತ; 13 ಲಕ್ಷ ಕೋಟಿ ರೂ ಮೌಲ್ಯದ ರೇಮಂಡ್ಸ್ ಕಂಪನಿ ಮಾಜಿ ಛೇರ್ಮನ್​ನ ಕರುಣಾಜನಕ ಕಥೆ

Published on

spot_img
spot_img

ವಿವೇಕವಾರ್ತೆ : ರೇಮಂಡ್ ಗ್ರೂಪ್​ನ ಮಾಜಿ ಛೇರ್ಮನ್ ಹಾಗೂ ಸಾಹಸ ಕ್ರೀಡೆಗಳ ಉತ್ಸಾಹಿ ವಿಜಯ್​ಪತ್ ಸಿಂಘಾನಿಯಾ ಒಂದು ಕಾಲದಲ್ಲಿ ಭಾರತದ ಅತಿಶ್ರೀಮಂತರ ಪೈಕಿ ಒಬ್ಬರೆನಿಸಿದವರು. ಇವತ್ತು ಇವರು ಮುಂಬೈನಲ್ಲಿ ಒಂದು ಸಾಧಾರಣ ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿದೆ.

ರೇಮಂಡ್ಸ್ ಸಂಸ್ಥೆ (Raymonds Group) ಹೆಸರು ಕೇಳಿರಬಹುದು. ಮದುವೆ ಸಮಾರಂಭಗಳಿಗೆ ಪುರುಷರು ಬಟ್ಟೆಬರೆ ಖರೀದಿಸಬೇಕಾದರೆ ರೇಮಂಡ್ಸ್ ಶೋರೂಮ್​ಗೆ ಹೋಗುವುದು ಸಾಮಾನ್ಯ. ಇವತ್ತು ಈ ಸಂಸ್ಥೆಯ ಷೇರುಸಂಪತ್ತು 13 ಲಕ್ಷಕೋಟಿ ರೂ ಆಗಿದೆ. ಈ ಯಶಸ್ವಿ ಕಂಪನಿಯ ಆಡಳಿತ ಚುಕ್ಕಾಣಿ ಹೊಂದಿದ್ದ ವ್ಯಕ್ತಿ ಇವತ್ತು ನಿರ್ಗತಿಕರಂತೆ ಬದುಕುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ರೇಮಂಡ್ ಗ್ರೂಪ್​ನ ಮಾಜಿ ಛೇರ್ಮನ್ ವಿಜಯ್​ಪತ್ ಸಿಂಘಾನಿಯಾ (Vijaypat Singhania) ಅವರೇ ಆ ವ್ಯಕ್ತಿ. ಒಂದು ಕಾಲದಲ್ಲಿ ಭಾರತದ ಅತ್ಯಂತ ಶ್ರೀಮಂತರಲ್ಲಿ ಒಬ್ಬರೆನಿಸಿದ್ದ ವಿಜಯಪತ್ ಸಿಂಘಾನಿಯಾ ಇವತ್ತು ಮುಂಬೈನಲ್ಲಿ ಒಂದು ಸಾಧಾರಣ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸಕಲ ಅಷ್ಟೈಷ್ವರ್ಯಗಳನ್ನು ಹೊಂದಿ ಸುಖದ ಜೀವನ ನಡೆಸುತ್ತಿದ್ದ ಈ ಹಿರಿಯರಿಗೆ ಈಗ ಬರುವ ಆದಾಯ ಹೊಟ್ಟೆ ಬಟ್ಟೆಗಾಗುವಷ್ಟು ಮಾತ್ರ. ವಿಜಯ್​ಪತ್ ಸಿಂಘಾನಿಯಾ ಅವರಿಗೆ ಯಾಕಿಂಥ ಸ್ಥಿತಿ ಎರಗಿ ಬಂತು? ರೇಮಂಡ್ಸ್ ಕಂಪನಿ ಈಗ ಉತ್ತುಂಗದಲ್ಲಿರುವಾಗ ವ್ಯಾವಹಾರಿಕ ನಷ್ಟದಿಂದ ಅವರಿಗೆ ಈ ದುರ್ಗತಿ ಬಂದಿರಲು ಸಾಧ್ಯವಿಲ್ಲ. ಹಾಗಾದರೆ ಏನು ಕಾರಣ? ವರದಿಗಳ ಪ್ರಕಾರ, ವಿಜಯ್​ಪತ್ ಸಿಂಘಾನಿಯಾ ಅವರ ಈ ದುಸ್ಥಿತಿಗೆ ಕೌಟುಂಬಿಕ ವ್ಯಾಜ್ಯವೇ ಕಾರಣ ಎನ್ನಲಾಗಿದೆ.

ಮಗನ ಜೊತೆಗಿನ ಜಟಾಪಟಿ ಈಗ ವಿಜಯ್​ಪತ್ ಸಿಂಘಾನಿಯಾ ಅವರಿಗೆ ಈ ಸ್ಥಿತಿಗೆ ಇಳಿಯುವಂತೆ ಮಾಡಿದೆ. ರೇಮಂಡ್ಸ್ ಸಂಸ್ಥೆಯಲ್ಲಿ ಅವರು ಶೇ. 37ರಷ್ಟು ಷೇರುಪಾಲು ಹೊಂದಿದ್ದರು. 2015ರಲ್ಲಿ ಅಷ್ಟೂ ಷೇರುಗಳನ್ನು ಕಿರಿಯ ಮಗ ಗೌತಮ್ ಸಿಂಘಾನಿಯಾಗೆ ಧಾರೆ ಎರೆದರು. ಅದಾಗಿ ಕೆಲ ವರ್ಷಗಳಲ್ಲಿ ರೇಮಂಡ್ ಗ್ರೂಪ್​ನ ವಿಶ್ರಾಂತ ಛೇರ್ಮನ್ (ಎಮಿರಿಟಸ್) ಹುದ್ದೆಯಿಂದ ವಿಜಯ್​ಪತ್ ಅವರನ್ನು ಕಿತ್ತುಹಾಕಲಾಯಿತು. ಅವರಿಗೆ ಒಂದು ಸ್ವಂತಮನೆಯೂ ಇಲ್ಲದಾಯಿತು.

ಇವರ ಹಿರಿಯ ಮಗ ಮಧುಪತಿ ಸಿಂಘಾನಿಯಾ ಅವರು ಕುಟುಂಬದಿಂದ ದೂರಗೊಂಡು ಮುಂಬೈನಲ್ಲಿರುವ ಪಿತ್ರಾರ್ಜಿ ಆಸ್ತಿ ಬಿಟ್ಟುಕೊಟ್ಟು ದೂರದ ಸಿಂಗಾಪುರಕ್ಕೆ ಹೋಗಿ ನೆಲಸಿದ್ದಾರೆ. ಮಧುಪತಿ ಅವರಿಗೆ ಸಾಕಷ್ಟು ಅವಮಾನವಾದ್ದರಿಂದ ಈ ಬೆಳವಣಿಗೆ ಆಗಿತ್ತು ಎಂದು ಹೇಳಲಾಗುತ್ತದೆ. ಆದರೆ, ದೊಡ್ಡ ಮಗ ದೂರವಾದ ಬಳಿಕ ವಿಜಯ್​ಪತ್ ಸಿಂಘಾನಿಯಾಗೆ ಕಿರಿಯ ಮಗನಿಂದ ಘಾಸಿಯಾಗಿದೆ. ಇಬ್ಬರ ಮಧ್ಯೆ ಕೋರ್ಟ್​ನಲ್ಲಿ ಆಸ್ತಿವ್ಯಾಜ್ಯ ನಡೆಯುತ್ತಿದೆ.

ಸಿಂಘಾನಿಯಾ ಕುಟುಂಬ ನೂರಕ್ಕೂ ಹೆಚ್ಚು ವರ್ಷಗಳಿಂದ ಜವಳಿ ಉದ್ಯಮದಲ್ಲಿ ಹೆಸರು ಮಾಡಿದವರು. ಎಂಬತ್ತು, ತೊಂಬತ್ತರ ದಶಕದಲ್ಲಿ ವಿಜಯ್​ಪತ್ ಸಿಂಘಾನಿಯಾ ನೇತೃತ್ವದಲ್ಲಿ ಇವರ ಉದ್ಯಮ ಹೊಸ ಎತ್ತರಕ್ಕೆ ಹೋಗಿತ್ತು. ಈಗ ಮಗ ಗೌತಮ್ ಸಿಂಘಾನಿಯಾ ನೇತೃತ್ವದಲ್ಲೂ ರೇಮಂಡ್ ಗ್ರೂಪ್ ಸಾಕಷ್ಟು ಬೆಳೆದಿದೆ.

ವಿಮಾನಯಾನ, ಕಾರ್ ಚಾಲನೆ ಇತ್ಯಾದಿ ಸಾಹಸಗಳ ಮೂಲಕ ಹೆಸರಾಗಿದ್ದ, ಕೇಂದ್ರದಿಂದ ಪದ್ಮ ಪ್ರಶಸ್ತಿಗಳನ್ನು ಪಡೆದಿದ್ದ ವಿಜಯ್​ಪತ್ ಸಿಂಘಾನಿಯಾ ಇವತ್ತು ರೇಮಂಡ್ ಗ್ರೂಪ್​ನಲ್ಲಿ ಶೇ. 37ರಷ್ಟು ಷೇರುಪಾಲು ಉಳಿಸಿಕೊಂಡಿದ್ದರೆ ಲಕ್ಷಾಂತರ ಕೋಟಿ ರೂ ಆಸ್ತಿವಂತರಾಗಿರುತ್ತಿದ್ದರು.

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!