ವಿವೇಕವಾರ್ತೆ: ಭೂಗತ ಲೋಕಕ್ಕೆ ಎಂಟ್ರಿಕೊಡಲು ಬಿಸಿ ರಕ್ತದ ಯುವಕರು ತುದಿಗಾಲಲ್ಲಿ ನಿಂತಿದ್ದಾರೆ. ಒಂದು ಸಾರಿ ಮಚ್ಚು ಹಿಡಿದು ರಕ್ತದ ಕಲೆಯನ್ನು ಅಂಟಿಸಿಕೊಂಡಿದ್ದರೆ ಅಂತಹ ಪಾತಿಕೆಯ ತೂಗು ಕತ್ತಿ ತೂಗುತ್ತಲೆ ಇರುತ್ತದೆ. ಆನೇಕಲ್ ನಲ್ಲಿ ಪುಡಿ ರೌಡಿಗಳ ಗ್ಯಾಂಗ್ ಒಂದು ಮಾರಕಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು ಇಂದು ಆರೋಪಿಯೊಬ್ಬನ ಕಾಲಿಗೆ ಪೊಲೀಸರು ಗುಂಡಿಳಿಸಿದ್ದಾರೆ..
ಆಮೂಲಕ ಏರಿಯಾದಲ್ಲಿ ಅವಾ ಮೈಂಟೈನ್ ಮಾಡಲು ಹೊರಟಿದ್ದ ಪುಡಿ ರೌಡಿ ಗೆ ಪೊಲೀಸ್ ಭಾಷೆಯಲ್ಲಿ ಉತ್ತರ ಕೊಟ್ಟಿದ್ದಾರೆ..
ಆನೇಕಲ್ ನಲ್ಲಿ ಇಂದು ಮುಂಜಾನೆ ಪೊಲೀಸರ ಗನ್ ಗಳು ಸದ್ದು ಮಾಡಿವೆ. ಕೊಲೆ ಆರೋಪಿಯೊಬ್ಬನ ಕಾಲಿಗೆ ಪೊಲೀಸರು ಗುಂಡೆಟು ಹೊಡೆದಿದ್ದು ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. 24 ವರ್ಷದ ಆಕಾಶ್ ಗುಂಡೆಟು ತಿಂದ ಆರೋಪಿ. ಕಳೆದ ಜುಲೈ 31 ನೇ ತಾರೀಕು ರಾತ್ರಿ ಆನೇಕಲ್ ತಾಲೂಕಿನ ಮೆಣಸಿಗನಹಳ್ಳಿ ಸಮೀಪ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಎಂಬ ಯುವಕನನ್ನು ಅಡ್ಟಗಟ್ಟಿ ಪುಡಿ ರೌಡಿಗಳು ಕೊಲೆ ಮಾಡಿದ್ದರು.
ಅಲ್ಲದೇ ಏರಿಯಾದಲ್ಲಿ ತಮ್ಮ ಹವಾ ಸೃಷ್ಟಿಸಲು ಆರೋಪಿಗಳು ತಮಗೆ ಸಂಬಂಧವೇ ಇಲ್ಲದ ಯುವಕನನ್ನು ಕೊಚ್ಚಿ ಕೊಂದಿದ್ದರು. ಪ್ರಕರಣದ ಜಾಡು ಹಿಡಿದು ಹೊರಟ ಆನೇಕಲ್ ಪೊಲೀಸರು A2 ಆಕಾಶನನ್ನು ಬಂಧಿಸಿ ಇಂದು ಮುಂಜಾನೆ ಸ್ಥಳ ಮಹಜಾರು ಮಾಡಲು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆಕಾಶ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ , ಪೊಲೀಸ್ ಪೇದೆ ಮಣಿ ಎಂಬಾತನ ಮೇಲೆ ಹಲ್ಲೆ ಮಾಡಿದ್ದಾನೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರದೀಪ್ ಆತ್ಮ ರಕ್ಷಣೆಗಾಗಿ ಆರೋಪಿ ಆಕಾಶ್ ಕಾಲಿಗೆ ಶೂಟ್ ಔಟ್ ಮಾಡಿದ್ದಾರೆ.
ತನ್ನ ಪಾಡಿಗೂ ತಾನು ಒಂಟಿಯಾಗಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಹೇಮಂತನನ್ನ ಪುಡಿರೌಡಿಗಳು ಹಿಂಬಂದಿಯಿಂದ ಆತನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು ಅಲ್ಲದೇ ಹತ್ಯೆ ಬಳಿಕ ಅರೋಪಿ ಆಕಾಶ್ ತನ್ನ ಗರ್ಲ್ ಪ್ರೆಂಡ್ ಗೆ ವಿಡಿಯೋ ಕಾಲ್ ಮಾಡಿ ಯುವಕನನ್ನು ಕೊಲೆ ಮಾಡಿದ್ದಾಗಿ ಬಿಲ್ಡಪ್ ಕೊಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ಆರೋಪಿ ಆಕಾಶ್ ಪ್ರಿಯತಮೆಯನ್ನು ಪೊಲೀಸರು ತನಿಖೆಗಾಗಿ ವಶಕ್ಕೆ ಪಡೆದಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.