ವಿವೇಕ ವಾರ್ತೆ : ಎಲ್ಲರಿಗೂ ಸಾಮಾನ್ಯವಾಗಿ ಕೇಕ್ ಅಂದರೆ ಅಚ್ಚು ಮೆಚ್ಚು, ಬಾಯಿ ಚಪ್ಪರಿಸಿಕೊಂಡು ತಿನ್ನುವವರು ಆನೇಕರಿದ್ದಾರೆ. ಆದರೆ ಕೇಕ್ ಅನ್ನು ಹೇಗೆ ತಯಾರಿಸುತ್ತಾರೆ ಎಂಬ ಕುತೂಹಲ ಕೆಲವರಿಗಿದೆ.
ಹೆಚ್ಚಾಗಿ ಶುಚಿತ್ವಕ್ಕೆ ಮಹತ್ವ ಕೊಟ್ಟು ಬಹಳ ಅಚ್ಚುಕಟ್ಟಾಗಿ ಕೇಕ್ ಗಳನ್ನು ತಯಾರಿಸುವುದನ್ನು ನಾವು ಅನೇಕ ವಿಡಿಯೋಗಳಲ್ಲಿ ನೋಡಿರುತ್ತೇವೆ. ಆದರೆ ಇತ್ತಿಚೇಗೆ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ಕೇಕ್ ತಯಾರಿಕ ವಿಧಾನ ಕೇಕ್ ಪ್ರೀಯರನ್ನು ಚಿಂತೆಗೇಡು ಮಾಡಿದೆ.
@chiragbarjatyaa ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಕೇಕ್ ತಯಾರಿಸುವ ಕೋಣೆ ಹೇಗಿದೆ ಮತ್ತು ಅದಕ್ಕೆ ಬಳಸುವ ಪರಿಕರಗಳು ಹೇಗಿವೆ ಎನ್ನುವುದನ್ನು ಇಲ್ಲಿ ನೋಡಬಹುದಾಗಿದೆ. ಇಲ್ಲಿರುವ ಪೊರಕೆ ನೆಟ್ಟಿಗರ ವಿಶೇಷ ಗಮನ ಸೆಳೆದಿದೆ. ಜೊತೆಗೆ ಕೇಕ್ ಹಿಟ್ಟನ್ನು ಸುರಿದು ನ್ಯೂಸ್ ಪೇಪರ್ಗಳ ಮೇಲೆ ಸುರಿಯುವ ದೃಶ್ಯವೂ ಗಮನ ಸೆಳೆದಿದೆ.
ಸುಮಾರು 1 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಕೆಲವರು ಶುಚಿತ್ವಕ್ಕೆ ಸಂಬಂಧಿಸಿ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೂ ಕೆಲವರು ಇದರಲ್ಲಿ ಅಚ್ಚರಿಯಾಗುವಂಥದ್ದೇನಿಲ್ಲ, ಬಾಲ್ಯದಿಂದ ಇಂಥ ಕೇಕ್ಗಳಿಗಾಗಿ ನಾವು ವರ್ಷಗಟ್ಟಲೇ ಕಾಯ್ದಿದ್ದಿಲ್ಲವೆ. ನಾಲಗೆಯ ಮೇಲಿಟ್ಟಾಗ ಎಂದಾದರೂ ಇದನ್ನು ಹೇಗೆ ತಯಾರಿಸಿದರು ಎಂದೆಲ್ಲ ಯೋಚಿಸಿದ್ದೆದೆಯೇ? ಈಗಲೂ ಅಷ್ಟೇ, ಕೇಕ್ ತಿನ್ನುವಾಗ ಈಗ ವೈರಲ್ ಆಗಿರುವ ಈ ವಿಡಿಯೋ ಕೂಡ ಮರೆತುಹೋಗುತ್ತದೆ ಎಂದಿದ್ದಾರೆ ಅನೇಕರು.
ಕೆಲವು ಆಹಾರ ಪದಾರ್ಥಗಳನ್ನು, ಸಿಹಿಗಳನ್ನು ತಯಾರಿಸುವ ಬಗೆ ತಿಳಿದುಕೊಳ್ಳುವ ಉತ್ಸಾಹ ಆನೇಕರಲ್ಲಿರುತ್ತದೆ. ಆದರೆ. ಅದುವೇ ಕೆಲವರಿಗೆ ಶಾಪವಾಗುವುದು ಉಂಟು. ಶುಚಿತ್ವಕ್ಕೆ ಆಹ್ವಾದ ಕೊಡದೆ ಬೇಕಾಬೀಟ್ಟಿ ತಯಾರಿಸಿ. ಅಭಿರುಚಿಯನ್ನು ನೀವು ಕೊಲ್ಲುತ್ತಿದ್ದೀರಿ ಎಂದು ನೆಟ್ಟಿಗರು ಕೋಪಿಸಿಕೊಂಡಿದ್ದಾರೆ. (ಏಜನ್ಸೀಸ್)
https://twitter.com/chiragbarjatyaa/status/1682635053594025985?s=20