ವಿವೇಕ ವಾರ್ತೆ : ಹೀಲಿಯಂ ಗ್ಯಾಸ್ ತುಂಬಿದ್ದ ಬಲೂನ್ ಬ್ಲಾಸ್ಟ್ ಆಗಿ ಓರ್ವ ವ್ಯಕ್ತಿ ಸೇರಿಂದಂತೆ ಮೂವರು ಮಕ್ಕಳಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಡುಗೋಡಿ ಬಳಿಯ ಬೆಲತ್ತೂರಿನಲ್ಲಿ ಸಂಭವಿಸಿದೆ.
ಗಾಯಗೊಂಡವರನ್ನು ವಿಜಯ್ ಕುಮಾರ್ (44), ಧ್ಯಾನ್(7) , ಸಂಜಯ್(8), ಸೋಹಿಲಾ (3) ಎಂದು ಗುರುತಿಸಲಾಗಿದೆ.
ಶನಿವಾರ ಹುಟ್ಟುಹಬ್ಬದ ಪ್ರಯುಕ್ತ ಹೀಲಿಯಂ ಗ್ಯಾಸ್ ತುಂಬಿಸಿದ್ದ ಬಲೂನ್ ಬಳಸಲಾಗಿತ್ತು, ಆಕಸ್ಮಿಕವಾಗಿ ಮನೆಯ ಮುಂದಿನ ವಿದ್ಯುತ್ ತಂತಿಗೆ ತಾಗಿ ಒಮ್ಮೆಲೆ ಬಲೂನ್ ಬ್ಲಾಸ್ಟ್ ಆಗಿದೆ.
ಹೀಲಿಯಂ ಬಲೂನ್ ಬ್ಲಾಸ್ಟ್ ಆದ ಪರಿಣಾಮ ಅಕ್ಕಪಕ್ಕದಲ್ಲಿದ್ದ ಮೂವರು ಮಕ್ಕಳು ಸೇರಿ ವ್ಯಕ್ತಿಗೆ ಗಂಭೀರ ಗಾಯವಾಗಿದೆ.
ಬ್ಲಾಸ್ಟ್ ಪರಿಣಾಮ ಮಕ್ಕಳ ಮುಖ ಸೇರಿ ಕೈ-ಕಾಲುಗಳು ಸುಟ್ಟು ಹೋಗಿದ್ದು, ಅಲ್ಲಿಯೇ ಇದ್ದ ವ್ಯಕ್ತಿಯ ಮುಖದ ಚರ್ಮವೆಲ್ಲ ಸುಟ್ಟು ಹೋಗಿದೆ.
ಹೀಗಾಗಿ ಗಾಯಗೊಂಡವರು ನರಳಾಡುತ್ತಿರುವ ಹಿನ್ನಲೆಯಲ್ಲಿ ಕೂಡಲೇ ವಿಕ್ಟೋರಿಯಾದ ಸುಟ್ಟಗಾಯ ವಾರ್ಡ್‌ಗೆ ರವಾನಿಸಲಾಗಿದೆ.
ಘಟನೆಗೆ ಸಂಭಂಧಿಸಿದಂತೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.