ಫ್ರೀ ಕರೆಂಟ್ ಅಂತ ಬೇಕಾಬಿಟ್ಟಿ ವಿದ್ಯುತ್ ಬಳಸಿದವರಿಗೆ ಸರ್ಕಾರದಿಂದ ಶಾಕ್: ಏನಂತೀರಾ ಇಲ್ಲಿದೆ!

Published on

spot_img
spot_img

ವಿವೇಕವಾರ್ತೆ : ಸರ್ಕಾರ ಉಚಿತ ವಿದ್ಯುತ್‌ ಕೊಡುತ್ತಿದೆ ಎಂದು ಅಳತೆ ಮೀರಿ ಬಳಸಿ ದುಂದು ವೆಚ್ಚಕ್ಕೆ ಮುಂದಾದರೆ ಆ ಹೆಚ್ಚುವರಿ ಹಣವನ್ನು ನೀವೇ ಪಾವತಿಸಬೇಕಾಗುತ್ತದೆ ಎಚ್ಚರ!

ಬಡವರು, ಕೆಳ ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನ ನಿರ್ವಹಣೆಯ ಪ್ರಯಾಸ ತಗ್ಗಿಸಲು ರಾಜ್ಯ ಸರಕಾರ ‘ಗ್ಯಾರಂಟಿ’ ಯೋಜನೆಗಳನ್ನು ಜಾರಿ ಮಾಡಿದೆ.

ಆದರೆ, ಉಚಿತ ಯೋಜನೆಗಳು ದುಂದು ವೆಚ್ಚ ಹಾಗೂ ದುರುಪಯೋಗಕ್ಕೂ ದಾರಿ ಮಾಡಿಕೊಡುವ ಮುನ್ನೆಚ್ಚರಿಕೆಯಿಂದ ಸರಕಾರ ಎಚ್ಚರಿಕೆ ವಹಿಸಿದೆ.

ಫ್ರೀ ಕರೆಂಟ್ ಅಂತ ಬೇಕಾಬಿಟ್ಟಿ ವಿದ್ಯುತ್ ಬಳಸಿದವರಿಗೆ ಸರ್ಕಾರದಿಂದ ಶಾಕ್ ನೀಡಲಾಗಿದೆ. ಗೃಹಜ್ಯೋತಿಯ ಮೊದಲ ತಿಂಗಳಲ್ಲೇ 45ಲಕ್ಷಕ್ಕೂ ಅಧಿಕ ಮಂದಿಗೆ ಪೂರ್ಣ ಬಿಲ್ ಬಂದಿದ್ದು ಮಿತಿ ಮೀರಿ ಕರೆಂಟ್ ಬಳಕೆ ಮಾಡಿದ ಜನರಿಗೆ ಫುಲ್ ಬಿಲ್ ನೀಡಿರುವ ಎಸ್ಕಾಂಗಳು

ಜುಲೈ ತಿಂಗಳ ಉಚಿತ ವಿದ್ಯುತ್ ಗಾಗಿ 1,40,31,320 ಮಂದಿಯಿಂದ ಅರ್ಜಿ ಸಲ್ಲಿಕೆಯಾಗಿದ್ದು ಈ ಪೈಕಿ 74,08,769 ಮಂದಿಗೆ ಶೂನ್ಯ ಬಿಲ್ ಇಶ್ಯೂ ಮಾಡಿರುವ ಎಸ್ಕಾಂಗಳು ಉಳಿದಂತೆ 45,29,633 ಬಳಕೆದಾರರಿಗೆ ಸಂಪೂರ್ಣ ಬಿಲ್ ಕೊಟ್ಟಿರುವ ಎಸ್ಕಾಂಗಳು

ವಾರ್ಷಿಕ ಸರಾಸರಿ 200 ಯೂನಿಟ್ ಒಳಗಿದ್ದರೂ 45 ಲಕ್ಷಕ್ಕೂ ಅಧಿಕ ಮಂದಿಗೆ ಸಿಕ್ಕಿಲ್ಲ ಶೂನ್ಯ ಬಿಲ್ ಬಂದಿದ್ದು ವಾರ್ಷಿಕ ಸರಾಸರಿ ನಿಗದಿತ ಯೂನಿಟ್ ಒಳಗಿದ್ದರೂ ಜುಲೈ ತಿಂಗಳಲ್ಲಿ ಮಾತ್ರ ಸರಾಸರಿ ಮೀರಿ ಬಳಕೆ ಹೀಗಾಗಿ 45,29,633 ಮಂದಿಯಿಂದ ಜುಲೈ ತಿಂಗಳ ಪೂರ್ಣ ಬಿಲ್ ಪಾವತಿ

ಇನ್ನು ಜುಲೈ ತಿಂಗಳ ಗೃಹಜ್ಯೋತಿ ಸಬ್ಸಿಡಿ ಮೊತ್ತ ಪಾವತಿಸಿದ ಸರ್ಕಾರ ಎಲ್ಲಾ ಎಸ್ಕಾಂಗಳಿಗೆ ಒಟ್ಟಾಗಿ 650 ಕೋಟಿ ರೂ. ಹಂತ ಹಂತವಾಗಿ ಪಾವತಿಸಿರುವ ಸರ್ಕಾರ

ಏನೇನು ಪ್ಲಾನ್‌ ಮಾಡಿರುವ ಸರ್ಕಾರ?

• 1,40,31,320 ಮಂದಿ ಜುಲೈ ತಿಂಗಳ ಉಚಿತ ಕರೆಂಟ್ ಗಾಗಿ ಅರ್ಜಿ

• ಈ ಪೈಕಿ 74,08,769 ಮಂದಿಗೆ ಶೂನ್ಯ ಬಿಲ್ ಇಶ್ಯೂ

• 45,29,633 ಮಂದಿಗೆ ಸಾಮಾನ್ಯ ಕರೆಂಟ್ ಬಿಲ್

• ಅರ್ಜಿ ಹಾಕಿದವರ ಪೈಕಿ 62% ಮಂದಿಗೆ ಶೂನ್ಯ ಬಿಲ್

• ಇದುವರೆಗೆ 1,51,14,320 ಜನರಿಂದ ಗೃಹಜ್ಯೋತಿಗಾಗಿ ಅರ್ಜಿ

• ಈಗಾಗಲೇ ಜುಲೈ ತಿಂಗಳ‌ ಶೂನ್ಯ ಬಿಲ್ ಗಾಗಿ ಸರ್ಕಾರದಿಂದ ಹಣ ಬಿಡುಗಡೆ

• ಒಟ್ಟು ಎಲ್ಲಾ ಎಸ್ಕಾಂಗಳಿಗಾಗಿ 650 ಕೋಟಿ ಹಣ ಬಿಡುಗಡೆ

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!