ಪ್ರೇಯಸಿಯ ನಗ್ನ ಪೋಟೋ ಪೋಸ್ಟ್ ಮಾಡಿದ ವಿಕೃತ ಕಾಮಿ ಅರೆಸ್ಟ್..!

Published on

spot_img
spot_img

ವಿವೇಕವಾರ್ತೆ : ಯುವಕನೋರ್ವ ತನ್ನ ಪ್ರೇಯಸಿಯ ನಗ್ನ ಫೋಟೋವನ್ನು ತಾನೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಏನೂ ಗೊತ್ತಿಲ್ಲದವನಂತೆ ಆಕೆಯೊಂದಿಗೆ ತೆರಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಯುವಕನನ್ನು ಆಗ್ನೇಯ ವಿಭಾಗ ಸೆನ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಸಂಜಯ್‌ ಕುಮಾರ್‌ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಹಾಗೂ ಇತನ ಪ್ರಿಯತಮೆ ಇಬ್ಬರೂ ತಮಿಳುನಾಡಿನ ವೆಲ್ಲೂರು ಮೂಲದವರು. ಇಬ್ಬರೂ ಬಿ ಪ್ಲಾನಿಂಗ್ ಕೋರ್ಸ್ ಮಾಡುತ್ತಿದ್ದರು.

ಸಂಜಯ್‌ ಹಾಗೂ ಆತನ ಸ್ನೇಹಿತರು 12 ಜನ ಟೆಲಿಗ್ರಾಂ ಗ್ರೂಪ್ ಮಾಡಿಕೊಂಡಿದ್ದು, ಅದರಲ್ಲಿ ಮೊದಲಿಗೆ ಅರೆನಗ್ನ ಪೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು.

ಬಳಿಕ ಆ ಪೋಟೊಗಳೊಂದಿಗೆ ಯುವತಿಯರ ಅರೆನಗ್ನ ಫೋಟೋಗಳನ್ನು ಸೃಷ್ಟಿಸುವ ಸಲುವಾಗಿ ತಾನೇ ಪ್ರೋಗ್ರಾಂ ಬರೆದು bot ಹೆಸರಿನ ಆಯಪ್‌ ಸಿದ್ಧಪಡಿಸಿದ್ದ. ಅದರಲ್ಲಿ ಅಕ್ಕಪಕ್ಕದ ಯುವತಿಯರ ಅಶ್ಲೀಲ ಸೃಷ್ಟಿಸಿ ಗ್ರೂಪ್‌ನಲ್ಲಿ ಹಂಚಿ ವಿಕೃತಿ ಮೆರೆಯುತ್ತಿದ್ದ. ನಂತರ ಇವುಗಳನ್ನು ಇತರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ.

ನೂರಾರು ಯುವತಿಯರ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಪಡಿಸಿದ್ದನು. ಅಲ್ಲದೇ ಗರ್ಲ್‌ಫ್ರೆಂಡ್‌ ಫೋಟೋವನ್ನು ಕೂಡ ಮಾರ್ಪಡಿಸಿ ಗ್ರೂಪ್‌ಗಳಲ್ಲಿ ಹಂಚಿ ವೈರಲ್‌ ಮಾಡಿದ್ದನು. ಶೇರ್ ಆಗುತ್ತಿದ್ದಂತೆ ಪೋಟೊ ನೋಡಿ ಸಂಜಯ್ ಪ್ರೇಯಸಿ ಶಾಕ್ ಆಗಿದ್ದಳು.

ಆಬಳಿಕ ಆಕೆಯೊಂದಿಗೆ ದೂರು ನೀಡಲು ಪೊಲೀಸ್ ಠಾಣೆಗೆ ಅಮಾಯಕನಂತೆ ವರ್ತಿಸಿದ್ದನು.

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!