ವಿವೇಕ ವಾರ್ತೆ : 20 ವರ್ಷದ ಯುವಕನೊಬ್ಬ 12 ವರ್ಷದ ಬಾಲಕಿಯನ್ನು ಚಾಕುವಿನಿಂದ 10 ಸಲ ಇರಿದು ಕೊಂದ ಘಟನೆ ಮುಂಬೈನ ಕಲ್ಯಾಣ್ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ತಾಯಿಯ ಮುಂದೆಯೇ ಬಾಲಕಿಯನ್ನು ಒಟ್ಟು 10 ಬಾರಿ ಇರಿದಿದ್ದಾನೆ ಎನ್ನಲಾಗಿದ್ದು, ಆತನಿಂದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಹಲ್ಲೆ ಬಳಿಕ ಯುವಕ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಸ್ಥಳೀಯರು ಆತನನ್ನು ಹಿಡಿದಿದ್ದಾರೆ.
ಯುವಕ ಯುವತಿಯನ್ನು ಪ್ರೀತಿಸುತ್ತಿದ್ದು, ಆತನ ಪ್ರೇಮ ಪ್ರಸ್ತಾಪವನ್ನು ಹುಡುಗಿ ತಿರಸ್ಕರಿಸಿದಳು. ಇದರಿಂದ ಆಕ್ರೋಶಗೊಂಡ ಯುವಕ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ಬಾಲಕಿಯ ತಾಯಿಯ ಕಿರುಚಾಟವನ್ನು ಕೇಳಿದ ನೆರೆಹೊರೆಯವರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.
ಸದ್ಯ 20 ವರ್ಷ ವಯಸ್ಸಿನ ಆರೋಪಿ ಯುವಕನನ್ನು ಬಂಧಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.