Saturday, September 30, 2023

ಪೊಲೀಸ್ ಅಧಿಕಾರಿಯಾದ 1ನೇ ತರಗತಿ ಬಾಲಕ: ಆಸೆ ಈಡೇರಿಸಿ ಹೃದಯ ವೈಶಾಲ್ಯತೆ ತೋರಿದ ಶಿವಮೊಗ್ಗ ಪೊಲೀಸರು

ವಿವೇಕವಾರ್ತೆ : ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬಾಲಕನ ಆಸೆಯಂತೆ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ಶಿವಮೊಗ್ಗ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ಎನ್‌ಆರ್ ಪುರ ರಸ್ತೆಯ ನಿವಾಸಿ ಪ್ರಸ್ತುತ ಶಿವಮೊಗ್ಗದ ಸೂಳೆಬೈಲ್ ನಲ್ಲಿ ವಾಸವಾಗಿರುವ ತಬ್ರೇಜ್ ಖಾನ್ ಅವರ ಪುತ್ರ ಎಂಟೂವರೆ ವರ್ಷದ ಆಜಾನ್ ಖಾನ್ 1ನೇ ತರಗತಿ ವಿದ್ಯಾರ್ಥಿಯಾಗಿದ್ದು, ಈ ಬಾಲಕ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಾನೆ.

ಈ ಬಾಲಕನಿಗೆ ತಾನು ಪೊಲೀಸ್ ಅಧಿಕಾರಿಯಾಗಬೇಕೆಂಬ ಇಚ್ಛೆ ಇದೆ. ಆದ್ದರಿಂದ ಬಾಲಕನ ಮತ್ತು ಆತನ ಪೋಷಕರ ಕೋರಿಕೆ ಮೇರೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಜಿ.ಕೆ. ಅವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಇಂದು ಸಂಜೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಬಾಲಕ ಆಜಾನ್ ಖಾನ್ ನಿಗೆ ಪೊಲೀಸ್ ಅಧಿಕಾರಿಯ ಸಮವಸ್ತ್ರವನ್ನು ಧರಿಸಿ, ಪೊಲೀಸ್ ನಿರೀಕ್ಷಕರ ಹುದ್ದೆಯನ್ನು ಸಾಂಕೇತಿಕವಾಗಿ ಅಲಂಕರಿಸಲು ಅವಕಾಶ ಮಾಡಿಕೊಡಲಾಗಿದೆ.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭುಮರಡ್ಡಿ, ಪೊಲೀಸ್ ಉಪಾಧೀಕ್ಷಕರಾದ ಬಾಲರಾಜ್, ಪ್ರಭು ಡಿ.ಟಿ., ಪೊಲೀಸ್ ನಿರೀಕ್ಷಕ ಅಂಜನ್ ಕುಮಾರ್, ದೊಡ್ಡಪೇಟೆ ಪೊಲೀಸ್ ಠಾಣೆ ಮತ್ತು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಬಾಲಕನ ಪೋಷಕರು ಉಪಸ್ಥಿತರಿದ್ದರು.

ಆಜಾನ್ ಖಾನ್ ಆಸೆಯಂತೆ ನಟ ಸುದೀಪ್ ಅವರನ್ನು ಭೇಟಿ ಮಾಡಿಸಿದ್ದ ಪೋಷಕರು ಈಗ ಶಿವಮೊಗ್ಗ ಪೊಲೀಸ್ ಇಲಾಖೆ ನೆರವಿನಿಂದ ಪೊಲೀಸ್ ಅಧಿಕಾರಿಯಾಗುವ ಆಸೆ ಈಡೇರಿಸಿದ್ದಾರೆ. ಪೊಲೀಸ್ ಅಧಿಕಾರಿ ಸಮವಸ್ತ್ರ ಧರಿಸಿದ್ದ ಬಾಲಕ ಸಾಂಕೇತಿಕವಾಗಿ ಡ್ಯೂಟಿ ಮಾಡಿದ್ದಾನೆ.

RELATED ARTICLES

ಶಾಲೆಯಲ್ಲೇ ಶಿಕ್ಷಕಿಯರ ರೀಲ್ಸ್ : ಲೈಕ್, ಶೇರ್ ಮಾಡುವಂತೆ ವಿದ್ಯಾರ್ಥಿಗಳಿಗೆ ಒತ್ತಡ.!

ವಿವೇಕವಾರ್ತೆ : ಶಿಕ್ಷಕಿಯರು, ವಿದ್ಯಾರ್ಥಿಗಳಿಗೆ ಪಾಠ ಮಾಡುವ ಬದಲು ಶಾಲೆಗಳಲ್ಲಿ ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ, ವಿದ್ಯಾರ್ಥಿಗಳಿಗೆ ತಮ್ಮ ಚಾನೆಲ್ ಗೆ Subscribers ಆಗಿ ತಮ್ಮ ವಿಡಿಯೋಗಳನ್ನು ಇತರರಿಗೆ...

ಅನುಮಾನಾಸ್ಪದ ರೀತಿ ಸಾವನ್ನಪ್ಪಿದ ಸರ್ಕಾರಿ ಆಸ್ಪತ್ರೆಯ ಅರವಳಿಕೆ ತಜ್ಞ ವೈದ್ಯೆ.!

ವಿವೇಕವಾರ್ತೆ : ಕೊಳ್ಳೆಗಾಲ ನಗರದ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯಯೊಬ್ಬರು ಅನುಮಾನಸ್ಪದವಾಗಿ ಸಾವನಪ್ಪಿದ ಘಟನೆ ಇಂದು (ಸೆ.29) ನಡೆದಿದೆ. ಕೊಳ್ಳೆಗಾಲ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಡಾI ಸಿಂದುಜಾ (28)...

ರೀಲ್ಸ್ ಮಾಡಿ ಟ್ರೋಲ್ ಆದ ಮಹಿಳಾ ಪೊಲೀಸ್ ; ವಿಡಿಯೋ ವೈರಲ್.!

ವಿವೇಕವಾರ್ತೆ : ಮಹಿಳೆ ಪೊಲೀಸ್​​​ ರೀಲ್ಸ್​​ ಮಾಡಲು ಹೋಗಿ ಇಲಾಖೆಯ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಲಾದ ಘಟನೆಯೊಂದು ಪಂಜಾಬನಲ್ಲಿ ನಡೆದಿದೆ. ಪೊಲೀಸರು ರೀಲ್ಸ್​​ ಮಾಡಬಾರದು ಎಂದು ಇಲ್ಲಾ, ಆದರೆ ಅವರು ಸಮಾಜದ ಒಳಿತನ್ನು ಕಾಪಾಡುವ...
- Advertisment -

Most Popular

ಶಾಲೆಯಲ್ಲೇ ಶಿಕ್ಷಕಿಯರ ರೀಲ್ಸ್ : ಲೈಕ್, ಶೇರ್ ಮಾಡುವಂತೆ ವಿದ್ಯಾರ್ಥಿಗಳಿಗೆ ಒತ್ತಡ.!

ವಿವೇಕವಾರ್ತೆ : ಶಿಕ್ಷಕಿಯರು, ವಿದ್ಯಾರ್ಥಿಗಳಿಗೆ ಪಾಠ ಮಾಡುವ ಬದಲು ಶಾಲೆಗಳಲ್ಲಿ ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ, ವಿದ್ಯಾರ್ಥಿಗಳಿಗೆ ತಮ್ಮ ಚಾನೆಲ್ ಗೆ Subscribers ಆಗಿ ತಮ್ಮ ವಿಡಿಯೋಗಳನ್ನು ಇತರರಿಗೆ...

ಲೋಕಸಭೆ ಬಿಜೆಪಿ ಟಿಕೆಟ್ ಸಿಗುವ ಭರವಸೆ ಇದೆ – ರಮೇಶ್ ಕತ್ತಿ

ವಿವೇಕವಾರ್ತೆ : ಈ ಬಾರಿ ಲೋಕಸಭೆ ಚುನಾವಣೆಗೆ ತಮಗೆ ಟಿಕೆಟ್ ನೀಡುವ ಭರವಸೆ ಇದೆ ಎಂದು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಸಂಸದ ರಮೇಶ್ ಕತ್ತಿ ಹೇಳಿದ್ದಾರೆ. ಅವರು ಇಂದು ಚಿಕ್ಕೋಡಿಯ ನಂದಗಾಂವ ಗ್ರಾಮದಲ್ಲಿ...

ಅನುಮಾನಾಸ್ಪದ ರೀತಿ ಸಾವನ್ನಪ್ಪಿದ ಸರ್ಕಾರಿ ಆಸ್ಪತ್ರೆಯ ಅರವಳಿಕೆ ತಜ್ಞ ವೈದ್ಯೆ.!

ವಿವೇಕವಾರ್ತೆ : ಕೊಳ್ಳೆಗಾಲ ನಗರದ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯಯೊಬ್ಬರು ಅನುಮಾನಸ್ಪದವಾಗಿ ಸಾವನಪ್ಪಿದ ಘಟನೆ ಇಂದು (ಸೆ.29) ನಡೆದಿದೆ. ಕೊಳ್ಳೆಗಾಲ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಡಾI ಸಿಂದುಜಾ (28)...

ರೀಲ್ಸ್ ಮಾಡಿ ಟ್ರೋಲ್ ಆದ ಮಹಿಳಾ ಪೊಲೀಸ್ ; ವಿಡಿಯೋ ವೈರಲ್.!

ವಿವೇಕವಾರ್ತೆ : ಮಹಿಳೆ ಪೊಲೀಸ್​​​ ರೀಲ್ಸ್​​ ಮಾಡಲು ಹೋಗಿ ಇಲಾಖೆಯ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಲಾದ ಘಟನೆಯೊಂದು ಪಂಜಾಬನಲ್ಲಿ ನಡೆದಿದೆ. ಪೊಲೀಸರು ರೀಲ್ಸ್​​ ಮಾಡಬಾರದು ಎಂದು ಇಲ್ಲಾ, ಆದರೆ ಅವರು ಸಮಾಜದ ಒಳಿತನ್ನು ಕಾಪಾಡುವ...
error: Content is protected !!