ವಿವೇಕ ವಾರ್ತೆ : ವ್ಯಕ್ತಿಯೋರ್ವನನ್ನು ಟ್ರಾಫಿಕ್ ಪೊಲೀಸರು ತಡೆದ ಸಿಟ್ಟಿನಿಂದ ತನ್ನ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಪೊಲೀಸರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಪರಿಣಾಮ ಕಾರಿನಲ್ಲಿದ್ದ ಪೊಲೀಸ್ ಅಧಿಕಾರಿ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ರಾಜಸ್ಥಾನದ ಜೋದ್‌ಪುರದಲ್ಲಿ ನಡೆದಿದೆ.
ನಗೌರ್‌ನ ಜಲಸು ನಾನಕ್‌ನ ನಿವಾಸಿ ಹರಿಶಂಕರ್ ವೈಷ್ಣವ್ ಎಂದು ಗುರುತಿಸಲಾದ ಎಸ್‌ಯುವಿ ಚಾಲಕ ಇಂತಹ ಕೃತ್ಯವೆಸಗಿದ್ದಾನೆ.
ಈತ ಅತಿವೇಗದಲ್ಲಿ ಕಾರು ಚಾಲನೆ ಮಾಡುತ್ತಿದ್ದ. ಅಲ್ಲದೇ ಕುಡಿದ ನಶೆಯಲ್ಲಿ ಫೋನ್‌ನಲ್ಲಿ ಯಾರ ಜೊತೆಗೋ ಜಗಳವಾಡುತ್ತಿದ್ದ ಎಂದು ವರದಿಯಾಗಿದೆ.
ಇನ್ನು ಪೊಲೀಸ್ ಕಾರಿಗೆ ಡಿಕ್ಕಿ ಹೊಡೆದು ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದು, ಘಟನೆಯಲ್ಲಿ ಆತನೂ ಕೂಡ ಸಾವನ್ನಪ್ಪಿದ್ದಾನೆ ಎಂದು ವರದಿಯಿಂದ ತಿಳಿದುಬಂದಿದೆ