ವಿವೇಕ ವಾರ್ತೆ : ಧಾರವಾಡ ಜಿಲ್ಲೆಯ ಆರ್.ಎನ್ ಶೆಟ್ಟಿ ಮೈದಾನದ ಬಳಿ ಇರುವ ಕಛೇರಿಯಲ್ಲಿ ನಿವೃತ್ತ ಶಿಕ್ಷಕರಿಂದ ಲಂಚ ಪಡೆಯುತ್ತಿದ್ದ ವೇಳೆ ಡಿಡಿಪಿಯು ಅಧಿಕಾರಿಗಳು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಡಿಡಿಪಿಯು ಕಚೇರಿ ಸೆಕ್ಷನ್ ಆಧಿಕಾರಿ ದುರ್ಗದಾಸ್ ಮಸೂತಿ ಹಾಗೂ ಡಿಡಿಪಿಯು ಎಫ್ಡಿಎ ಸಹಾಯಕ ನಾಗರಾಜ್ ಹೂಗಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಿವೃತ್ತ ಶಿಕ್ಷಕರ ಪಿಂಚಣಿ ಹಣವನ್ನು ನೀಡಲು ಡಿಡಿಪಿಯು ಅಧಿಕಾರಿಗಳು 15 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.
ನಿವೃತ್ತ ಶಿಕ್ಷಕರಾದ ಸುಭಾಷ್ ಜವರೆಡ್ಡಿ ಎನ್ನುವ ನಿವೃತ್ತ ಶಿಕ್ಷಕರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಂಡ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.